ಕರ್ನಾಟಕ

karnataka

ETV Bharat / bharat

ಜಾತಿ ಒಂದೇ ಆದ್ರೂ ಪ್ರೇಮ ವಿವಾಹಕ್ಕೆ ಅಡ್ಡಿ: ಮಲಗಿದ್ದ ಜೋಡಿಯನ್ನು ಕೊಚ್ಚಿಕೊಂದ ಪಾಪಿಗಳು - undefined

ತೂತುಕುಡಿ ಜಿಲ್ಲೆಯ ವಿಲಾತಿಕುಲಂನ ಸೋಲೈರಾಜಾ ಎಂಬ ಯುವಕ ಅದೇ ಊರಿನ ಜ್ಯೋತಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳನ್ನು ಯುವತಿಯ ತಂದೆ ಹಾಗೂ ಅವರ ಸಹಚರರು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಪ್ರೇಮಿಗಳ ಬರ್ಬರವಾಗಿ ಹತ್ಯೆ

By

Published : Jul 5, 2019, 12:09 PM IST

ಚೆನ್ನೈ:ಪೋಷಕರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳನ್ನು ಬರ್ಬರವಾಗಿ ಹತ್ಯೆಗೈದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ತೂತುಕುಡಿ ಜಿಲ್ಲೆಯ ವಿಲಾತಿಕುಲಂನ ಸೋಲೈರಾಜಾ ಎಂಬ ಯುವಕ ಅದೇ ಊರಿನ ಜ್ಯೋತಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷಗಳ ನಂತರ ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ತಿಳಿದಿತ್ತು. ಇಬ್ಬರೂ ಪರಿಶಿಷ್ಟ ಜಾತಿಯವರಾದರೂ ಎಡ-ಬಲ ಪಂಗಡ ಬೇರೆ ಎಂಬ ಕಾರಣಕ್ಕೆ ಯುವತಿ ಪೋಷಕರು ಮದುವೆಗೆ ನಿರಾಕರಿಸಿದ್ದರು.

ಪೋಷರಕು ಒಪ್ಪದಿದ್ದರೂ ಒಂದಾಗಲೇಬೇಕೆಂದು ನಿರ್ಧರಿಸಿದ ಜೋಡಿ, ಕೆಲವು ತಿಂಗಳಲ್ಲೇ ಮದುವೆಯಾಗಿದ್ದರು. ಇದರಿಂದ ಯುವತಿ ಮನೆಯವರು ಪ್ರಾಣಬೆದರಿಕೆಯನ್ನೂ ಹಾಕಿದ್ದರು.

ಪ್ರೇಮಿಗಳ ಬರ್ಬರವಾಗಿ ಹತ್ಯೆ

ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಇನ್ಮುಂದೆ ಹಾಯಾಗಿ ಜೀವನ ಮಾಡಬೇಕೆಂದುಕೊಂಡಿದ್ದ ಜೋಡಿಯನ್ನು ಜಾತಿ ರೂಪದ ಜವರಾಯ ಬಿಡಲಿಲ್ಲ. ನಿನ್ನೆ ಇಬ್ಬರು ಮಲಗಿದ್ದ ವೇಳೆ ಗುಂಪೊಂದು ಅವರ ಮನೆಗೆ ನುಗ್ಗಿ, ಹರಿತವಾದ ಆಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಂದಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಶವ ಪರೀಕ್ಷೆಗೆ ರವಾನಿದ್ದರು. ತನಿಖೆ ಚುರುಕುಗೊಳಿಸಿರುವ ಪೊಲೀಸರು ಇಂದು ಯುವತಿ ತಂದೆಯನ್ನು ಬಂಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details