ಕರ್ನಾಟಕ

karnataka

ETV Bharat / bharat

ಬಿರಿಯಾನಿಯಲ್ಲಿ ಬಾರದ ಚಿಕನ್​ ಪೀಸ್​... ಯುವತಿಯನ್ನೇ ಕೊಚ್ಚಿ ಕೊಂದ ಯುವಕ! - ಕೊಚ್ಚಿ ಕೊಂದ ಯುವಕ

ಚೆನ್ನೈ: ಯಾವುದಾದ್ರೂ ಬಲವಾದ ಕಾರಣವಿಲ್ಲದೇ ಕೊಲೆಗಳು ನಡೆಯುವುದಿಲ್ಲ. ಆದ್ರೆ ಇಲ್ಲಿ ಕೇವಲ ಒಂದು ಚಿಕನ್​ ಪೀಸ್​ಗಾಗಿ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

ಸಂಗ್ರಹ ಚಿತ್ರ

By

Published : Feb 20, 2019, 2:26 PM IST

ಹೌದು ಇಂತಹದೊಂದು ಭಯಾನಕ ಘಟನೆ ನಡೆದಿರುವುದು ತಮಿಳುನಾಡಿನ ಚೆನ್ನೈನ ಹೂವಿನ ಮಾರ್ಕೆಟ್​ನಲ್ಲಿ.

ಇಲ್ಲಿನ ಕೊಯಂಬೆಡುನ ಹೂವಿನ ಮಾರ್ಕೆಟ್​ ಬೆಳಗ್ಗೆಯಿಂದ ಮಧ್ಯೆ ರಾತ್ರಿಯವರೆಗೂ ಜನಜಂಗುಳಿಯಿಂದಲೇ ಕೂಡಿರುತ್ತೆ. ಈ ಹೂವಿನ ಮಾರುಕಟ್ಟೆ​ಗೆ ವ್ಯಾಪಾರಕ್ಕಾಗಿ ಅನೇಕರು ಬರುವುದು ಕಾಮನ್​. ಹೀಗೆ ವ್ಯಾಪಾರಕ್ಕಾಗಿ ಬಂದ ಯುವಕ ಮತ್ತು ಯುವತಿಯೊಬ್ಬಳು ಸಮೀಪದ ಹೊಟೇಲ್​ನಿಂದ ಬಿರಿಯಾನಿ ಖರೀದಿಸಿ ತಂದಿದ್ದರು.

ಯುವತಿ ತಿನ್ನುತ್ತಿದ್ದ ಬಿರಿಯಾನಿಯಲ್ಲಿ ಚಿಕನ್​ ಪೀಸ್​ಗಳೇ ಇರಲಿಲ್ಲ. ಈ ವಿಷಯವನ್ನ ಯುವಕನಿಗೆ ಯುವತಿ ಗಮನಕ್ಕೆ ತಂದಿದ್ದಾಳೆ. ಇದೇ ವಿಷಯವಾಗಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದೆ. ಯುವಕನ ಸಿಟ್ಟು ನೆತ್ತಿಗೇರಿದೆ. ಇದೇ ಸಿಟ್ಟಿನಲ್ಲಿ ಯುವತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಯುವಕ ನಂತರ ಪರಾರಿಯಾಗಿದ್ದಾನೆ.

ಇದನ್ನು ಗಮನಿಸಿದ ಸ್ಥಳೀಯ ವ್ಯಾಪಾರಸ್ಥರು ಸ್ಥಳಕ್ಕೆ ದೌಡಾಯಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರ ಯುವಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ABOUT THE AUTHOR

...view details