ಕರ್ನಾಟಕ

karnataka

ETV Bharat / bharat

ಆರ್ಥಿಕ ಸಂಕಷ್ಟ: ಇಬ್ಬರು ಮಕ್ಕಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ದಂಪತಿ - ಇಬ್ಬರು ಮಕ್ಕಳ ಕೊಲೆ ದಂಪತಿ ಸಾವು

ಘಾಜಿಯಾಬಾದ್​​ನಲ್ಲಿ ಕುಟುಂಬದ ಎಲ್ಲ ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಆರ್ಥಿಕ ಸಂಕಷ್ಟದಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

Couple, woman jump to death after allegedly murdering kids
ಇಬ್ಬರು ಮಕ್ಕಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ದಂಪತಿ

By

Published : Dec 3, 2019, 7:29 PM IST

ಘಾಜಿಯಾಬಾದ್​​:ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಕುಟುಂಬ ಇಬ್ಬರು ಮಕ್ಕಳ ಕೊಲೆ ಮಾಡಿ ತದನಂತರ ಪತಿ ಮತ್ತು ಪತ್ನಿ ಅಪಾರ್ಟ್​​ಮೆಂಟ್​​​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​​​ನಲ್ಲಿ ನಡೆದಿದೆ.

ಮಕ್ಕಳ ಕೊಲೆ ಮಾಡಿದ ಬಳಿಕ ಅಪಾರ್ಟ್​​ಮೆಂಟ್​ನ 8ನೇ ಮಹಡಿಯಿಂದ ಜಿಗಿದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರೊಂದಿಗೆ ಮತ್ತೊಬ್ಬ ಮಹಿಳೆ ಜಿಗಿದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಬ್ಯುಸಿನೆಸ್​ ಪಾರ್ಟ್ನರ್​ ಹಾಗೂ ಎರಡನೇ ಹೆಂಡತಿಯಾಗಿದ್ದಳು.

ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುಂಚಿತವಾಗಿ ಡೆತ್​​ನೋಟ್​ ಬರೆದಿದ್ದು, ಅದರ ಜತೆ ಸ್ವಲ್ಪ ಹಣ ಇಟ್ಟಿದ್ದಾರೆ. ಅದನ್ನ ತಮ್ಮ ಅಂತ್ಯಸಂಸ್ಕಾರಕ್ಕೆ ಬಳಕೆ ಮಾಡುವಂತೆ ಅದರಲ್ಲಿ ತಿಳಿಸಿದ್ದಾರೆ. ಇನ್ನು ತಾವು ನಡೆಸುತ್ತಿದ್ದ ವ್ಯಾಪಾರ ನಷ್ಟವಾಗಿ, ಚೆಕ್ ಮೇಲಿಂದ ಮೇಲೆ​ ಬೌನ್ಸ್​ ಆಗಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details