ಕರ್ನಾಟಕ

karnataka

ETV Bharat / bharat

ಮೂರು ಧರ್ಮಗಳ ಸಂಪ್ರದಾಯಂತೆ ಮದುವೆಯಾಗಿ ಗಮನ ಸೆಳೆದ ಜೋಡಿ - ಮೂರು ಧರ್ಮಗಳ ಸಂಪ್ರದಾಯದಂತೆ ಮದುವೆಯಾದ ಆಂಧ್ರದ ಜೋಡಿ

ಆಂಧ್ರ ಪ್ರದೇಶದ ಜೋಡಿಯೊಂದು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಸಂಪ್ರದಾಯದಂತೆ ಮದುವೆಯಾಗಿ ಗಮನ ಸೆಳೆದಿದೆ.

Couple gets married as per three religious traditions
ಆಂಧ್ರದ ತೆನಾಲಿಯಲ್ಲಿ ವಿಶಿಷ್ಟ ಮದುವೆ

By

Published : Nov 22, 2020, 10:33 PM IST

ಗುಂಟೂರು (ಆಂಧ್ರ ಪ್ರದೇಶ) : ಗುಂಟೂರು ಜಿಲ್ಲೆ ತೆನಾಲಿಯ ಜೋಡಿಯೊಂದು ಮೂರು ಧರ್ಮಗಳ ಸಂಪ್ರದಾಯ ಪ್ರಕಾರ ವಿವಾಹವಾಗಿ ಗಮನ ಸೆಳೆದಿದೆ.

ತೆನಾಲಿಯ ದಿಲೀಪ್ ಕುಮಾರ್ ಪುಲಿವರ್ತಿ ಮತ್ತು ಹೈದರಾಬಾದ್‌ನ ಕಮಲಾಬಾಯ್ ವಿಶಿಷ್ಟವಾಗಿ ವಿವಾಹವಾಗಿರುವ ವಧು- ವರರು. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವರ ದಿಲೀಪ್ ಹೈದರಾಬಾದ್‌ನಲ್ಲಿ ಏರೋಫಾಲ್ಕನ್ ಏವಿಯೇಷನ್ ಕಂಪನಿಯನ್ನು ನಡೆಸುತ್ತಿದ್ದಾರೆ. ಅಪರೂಪದ ವಿವಾಹ ಸಮಾರಂಭ ನವೆಂಬರ್ 21 ರಂದು ತೆನಾಲಿಯ ಗೌತಮ್ ಗ್ರ್ಯಾಂಡ್ ಹೋಟೆಲ್​ನಲ್ಲಿ ನಡೆದಿದೆ.

ನ. 21 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕ್ರಿಶ್ಚಿಯನ್ ಪಾದ್ರಿ ಸಮ್ಮುಖದಲ್ಲಿ ಕ್ರಿಶ್ಚಿಯನ್ ಧರ್ಮದ ಸಂಪ್ರದಾಯ ಪ್ರಕಾರ ಮದುವೆ ನಡೆಯಿತು. ಬಳಿಕ ಸಂಜೆ, ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯ ಪ್ರಕಾರ ಜೋಡಿ ವಿವಾಹವಾದರು. ಬಳಿಕ ವರ ಹಿಂದೂ ಸಂಪ್ರದಾಯ ಪ್ರಕಾರ ವಧುವಿಗೆ ತಾಳಿ ಕಟ್ಟಿದ. ಈ ಮೂಲಕ ವಿಶಿಷ್ಟ ಮದುವೆ ಸಮಾರಂಭ ಅದ್ದೂರಿಯಾಗಿ ನಡೆಯಿತು. ಒಂದೇ ಜೋಡಿ ಮೂರು ಧರ್ಮಗಳ ಪ್ರಕಾರ ಮದುವೆಯಾಗಿರುವುದು ಅಪರೂಪಲ್ಲಿ ಅಪರೂಪ ಎಂದೇ ಹೇಳಬಹುದು.

ABOUT THE AUTHOR

...view details