ವಿಶಾಖಪಟ್ಟಣಂ(ಆಂಧ್ರಪ್ರದೇಶ):ಸಣ್ಣ ವಿಚಾರಕ್ಕಾಗಿ ಮೊಬೈಲ್ನಲ್ಲೇ ಜಗಳ ಮಾಡಿಕೊಂಡಿರುವ ಪ್ರೇಮಿಗಳು ಬೇರೆ ಬೇರೆ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.
ಮೊಬೈಲ್ನಲ್ಲೇ ಜಗಳವಾಡಿಕೊಂಡ ಜೋಡಿ... ಮನನೊಂದು ಇಬ್ಬರೂ ಆತ್ಮಹತ್ಯೆಗೆ ಶರಣು! - ಆತ್ಮಹತ್ಯೆಗೆ ಶರಣಾದ ಲವರ್ಸ್
ಕಳೆದ ಐದು ವರ್ಷಗಳಿಂದ ಜೀವಕ್ಕಿಂತ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜೋಡಿ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಮನೆಯ ಕದ ತಟ್ಟಿದ್ದಾರೆ.
ಗೋಪಾಲಪಟ್ಟಣಂ ಪೊಲೀಸ್ ಸ್ಟೇಷನ್ ಏರಿಯಾದಲ್ಲಿ ಪೋಷಕರೊಂದಿಗೆ ವಾಸವಾಗಿದ್ದ ಸಿರಿಶಾ ಹಾಗೂ ಕಾಂಚರಪಲೆಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ವೆಂಕಟ್ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ಯಾವುದೂ ವಿಚಾರಕ್ಕಾಗಿ ಮೊಬೈಲ್ನಲ್ಲಿ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಮನೆಯ ರೂಂನಲ್ಲಿ ಸಿರಿಸಾ ಸಾವಿಗೆ ಶರಣಾಗಿದ್ದು, ಗ್ರಾಮದ ಹೊರಗಡೆಯ ಮರವೊಂದಕ್ಕೆ ವೆಂಕಟ್ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ವರೂಪ್ ರಾಣಿ ತಿಳಿಸಿದ್ದಾರೆ.
ಮಾಹಿತಿ ಲಭ್ಯವಾಗುತ್ತಿದ್ದಂತೆ ಮೃತದೇಹಗಳನ್ನ ಕಿಂಗ್ ಜಾರ್ಜ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.