ಜೈಪುರ:ರಾಜಸ್ಥಾನದಲ್ಲಿ ಬಿಟ್‌ಕಾಯಿನ್ (ಕ್ರಿಪ್ಟೋ ಕರೆನ್ಸಿ) ನಲ್ಲಿ ಹೂಡಿಕೆ ಮಾಡಿ ಕೋಟ್ಯಂತರ ರೂ. ಮೋಸ ಮಾಡಿದ ಪ್ರಕರಣದಡಿ ಪ್ರೇಮಿಗಳನ್ನು ಎಸ್‌ಒಜಿ(ಸ್ಪೆಷಲ್ ಆಪರೇಷನ್ ಗ್ರೂಪ್) ತಂಡ ಶುಕ್ರವಾರ ಬಂಧಿಸಿದೆ.
ಎಸ್‌ಒಜಿ ಅಧಿಕಾರಿಗಳ ಪ್ರಕಾರ, ಆರೋಪಿಗಳಾದ ಮನೋಜ್ ಪಟೇಲ್ ಮತ್ತು ಅವಿಕಾ ಲಿವ್ - ಇನ್ನಲ್ಲಿ ವಾಸಿಸುತ್ತಿದ್ದರು.
ರಾಜಸ್ಥಾನದ ವಿವಿಧ ಭಾಗಗಳಲ್ಲಿ ಬಿಟ್‌ಕಾಯಿನ್ ವಹಿವಾಟಿನಲ್ಲಿ ಹೂಡಿಕೆ ಮಾಡಲು ಜನರನ್ನು ಪ್ರೆರೇಪಿಸಿ ಮೋಸ ಮಾಡಿದ್ದಾರೆ. ಬರೋಬ್ಬರಿ 15 ಕೋಟಿ ರೂ. ಹೂಡಿಕೆಯಾದ ಬಳಿಕ ವೆಬ್‌ಸೈಟ್ ಮುಚ್ಚಿದ್ದಾರೆ. ಹೂಡಿಕೆ ಮಾಡಿ ಮೋಸ ಹೋದ ಜನರು ಎಸ್‌ಒಜಿಗೆ ಪ್ರಕರಣ ದಾಖಲಿಸಿದ್ದರು.
ಬಿಟ್‌ಕಾಯಿನ್ ಹೂಡಿಕೆಯಲ್ಲಿ ಜನರ ಕಣ್ಣಿಗೆ ಮಣ್ಣೆರಚಿದ ಲವ್ ಬರ್ಡ್ಸ್ : ವಂಚಿಸಿದ ಹಣ ಎಷ್ಟು ಗೊತ್ತಾ? ಬಳಿಕ ಎಸ್‌ಒಜಿ ಈ ಇಬ್ಬರನ್ನು ಬಂಧಿಸಿದೆ. ಹೊಸ ಕಂಪನಿ ಆರಂಭಿಸಿದ ಇವರು ಹೆಚ್ಚಿನ ಹೂಡಿಕೆಗಾಗಿ ಜನರ ವಿಶ್ವಾಸ ಪಡೆಯಲು ಥಾಯ್ಲೆಂಡ್ನಲ್ಲಿ ಸೆಮಿನಾರ್ ಆಯೋಜಿಸಿ ಸುಮಾರು 400 ಜನರನ್ನು ಆಹ್ವಾನಿಸಿತ್ತು. ಸೆಮಿನಾರ್ ಮೂಲಕ, ಬಿಟ್‌ಕಾಯಿನ್‌ಗಳಲ್ಲಿ ಕೆಲಸ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಮಯದಲ್ಲಿ, ಕಂಪನಿಯಲ್ಲಿ ಹೂಡಿಕೆ ಮಾಡುವಾಗ, ಹೂಡಿಕೆ ಮಾಡಿದ ಮೊತ್ತದ ಮೇಲೆ ಪ್ರತಿದಿನ ಶೇಕಡಾ 1 ರಷ್ಟು ಲಾಭ ನೀಡುವ ಭರವಸೆಯನ್ನೂ ಸಹ ನೀಡಲಾಗಿತ್ತು.
ಹೂಡಿಕೆದಾರರಿಗೆ ಮೋಸ ಮಾಡಿದ ಇವರು ವಿದೇಶಕ್ಕೆ ಪಲಾಯನ ಮಾಡುವ ಹಂತದಲ್ಲಿದ್ದರು. ಆದ್ರೆ ಅವರನ್ನು ವಶಕ್ಕೆ ಪಡೆಯುವಲ್ಲಿ ಎಸ್‌ಒಜಿ ತಂಡ ಯಶಸ್ವಿಯಾಗಿದೆ. ಆರೋಪಿ ಮನೋಜ್ ವಿರುದ್ಧ ಸುಮಾರು 24 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿದ್ದು, ತನಿಖೆಯಿಂದ ಮತ್ತಷ್ಟು ವಿಚಾರ ಹೊರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರಿದ್ದಾರೆ.