ಕರ್ನಾಟಕ

karnataka

ETV Bharat / bharat

​ಈ ದೇಶ ಹಿಂದೂಗಳಿಗೆ ಸೇರಿದ್ದು ಅಂತ ಆರ್‌ಎಸ್‌ಎಸ್‌ ಹೇಳೋದೇಕೆ?: ಮೋಹನ್‌ ಭಾಗವತ್ ಸ್ಪಷ್ಟನೆ - ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಕಾರ್ಯಕರ್ತರು ಈ ದೇಶ ಹಿಂದೂಗಳಿಗೆ ಸೇರಿದ್ದು ಎಂದು ಹೇಳುವುದರ ಒಳ ಅರ್ಥವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ಸ್ಪಷ್ಟಪಡಿಸಿದರು.

Country belongs to Hindus: Mohan Bhagwat
ಉತ್ತರ ಪ್ರದೇಶದ ಬರೇಲಿಯಲ್ಲಿ ಮೋಹನ್ ಭಾಗವತ್

By

Published : Jan 19, 2020, 5:12 PM IST

ಬರೇಲಿ (ಉತ್ತರ ಪ್ರದೇಶ):ಆರ್‌ಎಸ್‌ಎಸ್ ಕಾರ್ಯಕರ್ತರು ಈ ದೇಶ ಹಿಂದೂಗಳಿಗೆ ಸೇರಿದ್ದು ಎಂದು ಹೇಳುವುದುಂಟು.ಎಲ್ಲರೂ ಹಿಂದೂಗಳು ಎಂದು ಹೇಳುವ ಮೂಲಕ, ನಾವು ಯಾರ ಧರ್ಮವನ್ನೂ, ಭಾಷೆ ಅಥವಾ ಜಾತಿಯನ್ನೂ ಬದಲಾಯಿಸಲು ಬಯಸುತ್ತಿಲ್ಲ. ಭಾರತ ದೇಶದ ಎಲ್ಲರ ಪೂರ್ವಜರೂ ಕೂಡಾ ಹಿಂದೂಗಳೇ ಆಗಿದ್ದರು. ಆ ಮಾತಿನ ಮೂಲಕ ನಾವು ವೈವಿಧ್ಯತೆಯಲ್ಲಿ ಏಕತೆ ಮತ್ತು ನಮ್ಮ ನಡುವಿನ ಭಾವನಾತ್ಮಕ ಸಮಗ್ರತೆಯನ್ನು ಬೆಸೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ವಿವರಿಸಿದ್ರು.

ಭಾನುವಾರ ಬರೇಲಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ಶಕ್ತಿ ಕೇಂದ್ರವನ್ನು ಅನುಸರಿಸಲು ಅಥವಾ ಅವಲಂಬಿಸಲು ನಾವು ಬಯಸುವುದಿಲ್ಲ. ಏಕೆಂದರೆ ನಾವು ಸಂವಿಧಾನವನ್ನು ಬಲವಾಗಿ ನಂಬುತ್ತೇವೆ. ಸಂವಿಧಾನವನ್ನು ಓದಿದರೆ ಅದರ ಪ್ರತೀ ಪುಟದಲ್ಲೂ ಇರುವ ವಿಚಾರಗಳು ದೇಶಕ್ಕೆ ಸ್ಫೂರ್ತಿ ಎಂಬುದು ತಿಳಿಯುತ್ತದೆ. ಸಂವಿಧಾನವು ನಮ್ಮ ಆರಂಭ ಮತ್ತು ನಮ್ಮ ಗುರಿಗಳನ್ನು ನಿಖರವಾಗಿ ಹೇಳುತ್ತದೆ ಎಂದು ಭಾಗವತ್‌ ಹೇಳಿದರು.

ಇದೇ ವೇಳೆ ಜನಸಂಖ್ಯಾ ನಿಯಂತ್ರಣದ ಕುರಿತ ತಮ್ಮ ಹೇಳಿಕೆಯ ಗೊಂದಲಗಳನ್ನು ಸ್ಪಷ್ಟಪಡಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ, ಮಿತಿಮೀರಿದ ಜನಸಂಖ್ಯೆಯು ದೇಶಕ್ಕೆ ಸಮಸ್ಯೆ ಜೊತೆಗೆ ಜನಸಂಖ್ಯೆ ಸಂಪನ್ಮೂಲವೂ ಹೌದು ಎಂದು ನಾನು ಹೇಳಿದ್ದೆ. ಅದಕ್ಕನುಗುಣವಾಗಿ ಸರ್ಕಾರ ನೀತಿಗಳನ್ನು ರಚಿಸಬೇಕು. ಅನಂತರ ಒಬ್ಬರು ಎಷ್ಟು ಮಕ್ಕಳನ್ನು ಹೊಂದಬೇಕೆಂದು ಎಂಬುದನ್ನು ನೀತಿಯೇ ನಿರ್ಧರಿಸುತ್ತದೆಯೇ ಹೊರತು ಆ ನಿಯಮವನ್ನು ನಾವು ಯಾರ ಮೇಲೂ ಹೇರುತ್ತಿಲ್ಲ. ಏಕೆಂದರೆ ಅದು ನನ್ನ ಕೆಲಸವಲ್ಲ ಎಂದರು.

ABOUT THE AUTHOR

...view details