ಕರ್ನಾಟಕ

karnataka

ETV Bharat / bharat

‘ನಿತೀಶ್ ಕುಮಾರ್ ಓರ್ವ ಭ್ರಷ್ಟ ನಾಯಕ ’: ಚಿರಾಗ್ ಪಾಸ್ವಾನ್ - ಸಾತ್ ನಿಶ್ಚಯ್​ದಲ್ಲಿ ಹಗರಣ ನಡೆದಿದೆ ಎಂದು ಚಿರಾಗ್ ಆರೋಪ

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಪಕ್ಷಗಳು ಮತದಾರರನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅಲ್ಲದೆ, ಪ್ರಚಾರ ಱಲಿಗಳಲ್ಲಿ ಆರೋಪ, ಪ್ರತ್ಯಾರೋಪಗಳು ಮುಂದುವರಿದಿವೆ.

Chirag
ಚಿರಾಗ್ ಪಾಸ್ವಾನ್

By

Published : Oct 26, 2020, 12:29 PM IST

ಬಿಹಾರ: ಮುಖ್ಯಮಂತ್ರಿ ನಿತೀಶ್ ಕುಮಾರ್ ಓರ್ವ ಭ್ರಷ್ಟ ನಾಯಕ ಎಂದು ಎಲ್​​ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್​​​ ಗಂಭೀರ ಆರೋಪ ಮಾಡಿದ್ದಾರೆ.

'ಸಾತ್ ನಿಶ್ಚಯ್' ಯೋಜನೆಯಲ್ಲಿ ಅತಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಿಎಂ ನಿತೀಶ್ ಕುಮಾರ್​ಗೆ ತಿಳಿದಿಲ್ಲ ಅಂದ್ರೆ ಹೇಗೆ? ಅವರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಅನುಮಾನ ಮೂಡ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಬಿಹಾರದ ಡುಮ್ರಾನ್​​​​ದಲ್ಲಿ ಮಾತನಾಡಿದ ಚಿರಾಗ್ ಪಾಸ್ವಾನ್, ಸಾತ್ ನಿಶ್ಚಯ್​​ ಯೋಜನೆಯಲ್ಲಿ ದೊಡ್ಡ ಹಗರಣ ನಡೆದಿದೆ. ಎಲ್​ಜೆಪಿ ಅಧಿಕಾರಕ್ಕೆ ಬಂದರೆ, ಈ ಬಗ್ಗೆ ತನಿಖೆ ನಡೆಸಲಾಗುವುದು, ತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರು ಎಂಥವರೇ ಆಗಿರಲಿ ಅವರಿಗೆ ಶಿಕ್ಷೆಯಾಗುತ್ತೆ ಎಂದು ಗುಡುಗಿದ್ದಾರೆ.

2015 ರ ವಿಧಾನಸಭಾ ಚುನಾವಣೆಗೂ ಮುನ್ನ ನಿತೀಶ್​ ಕುಮಾರ್, 2.7 ಲಕ್ಷ ಕೋಟಿ ರೂಪಾಯಿಯ ‘ಸಾತ್ ನಿಶ್ಚಯ್’ ಎಂಬ ಯೋಜನೆ ಘೋಷಿಸಿದ್ದರು. ಇದೀಗ 2020 ರ ಚುನಾವಣಾ ಸಮಯದಲ್ಲೂ ಸಾತ್ ನಿಶ್ಚಯ್ ಭಾಗ 2 ನ್ನು ಘೋಷಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸಿದ್ದಾರೆ ಎಂದರು.

ಬಿಹಾರದಲ್ಲಿ ನಿತೀಶ್ ಸರ್ಕಾರ, ಮದ್ಯ ನಿಷೇಧವನ್ನು ಯಾಕೆ ಪರಿಶೀಲಿಸಿಲ್ಲ. ರಾಜ್ಯದಲ್ಲಿ ಮದ್ಯ ಕಳ್ಳಸಾಗಣೆ ನಡೆಯುತ್ತಿಲ್ಲವೇ? ಈ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಿ. ತನಿಖೆ ನಡೆಸಲು ಮುಂದಾಗದಿದ್ದರೆ, ಈ ಅಕ್ರಮದಲ್ಲಿ ನೀವು ಭಾಗಿಯಾಗಿದ್ದೀರಿ ಎಂದರ್ಥ ಎಂದು ವಾಗ್ದಾಳಿ ನಡೆಸಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಈ ಎಲ್ಲ ಹಗರಣಗಳ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದರು.

ನಿತೀಶ್ ಕುಮಾರ್ ನವೆಂಬರ್ 10 ರವರೆಗೆ ಮಾತ್ರ ಸಿಎಂ, ಮಂತರ ಮಾಜಿ ಸಿಎಂ ಆಗ್ತಾರೆ ಎಂದರು. ಈ ಮಧ್ಯೆ ಪ್ರಧಾನಿ ಮೋದಿಯವರನ್ನು ಹನುಮಾನ್ ಎಂದು ಕರೆದ ಪಾಸ್ವಾನ್ ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿದರು.

ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ABOUT THE AUTHOR

...view details