ಕರ್ನಾಟಕ

karnataka

ETV Bharat / bharat

ನ್ಯಾಯಕ್ಕಾಗಿ ಪಟ್ಟು: 8 ತಿಂಗಳಿಂದ ಮರದಲ್ಲೇ ನೇತಾಡುತ್ತಿದೆ ಶವ! - kannadanews

ಸುಮಾರು 8 ತಿಂಗಳ ಹಿಂದೆ ನೇಣಿಗೆ ಶರಣಾದ ಎನ್ನಲಾದ ವ್ಯಕ್ತಿಯ ಹೆಣ ಈಗಲೂ ಮರದಲ್ಲೇ ನೇತಾಡುತ್ತಿರುವ ಘಟನೆ ಗುಜರಾತ್​ನ ಹಿಮ್ಮತ್​ನಗರದಲ್ಲಿ ಬೆಳಕಿಗೆ ಬಂದಿದೆ.

8 ತಿಂಗಳಿಂದ ಮರದಲ್ಲೇ ನೇತಾಡುತ್ತಿರುವ ಶವ..!

By

Published : Jul 17, 2019, 3:32 PM IST

ಹಿಮ್ಮತ್​ನಗರ್​:ಸುಮಾರು 8 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದಾನೆ ಎನ್ನಲಾದ ವ್ಯಕ್ತಿಯ ಹೆಣವನ್ನು ನ್ಯಾಯಕ್ಕಾಗಿ ಆಗ್ರಹಿಸಿ ಅಂತ್ಯಸಂಸ್ಕಾರ ಮಾಡದೇ ಮರದಲ್ಲೇ ನೇತು ಹಾಕಿರುವ ಘಟನೆ ಹಿಮಾಚಲ ಪ್ರದೇಶದ ತಧಿವಿಧಿ ಗ್ರಾಮದಲ್ಲಿ ನಡೆದಿದೆ.

8 ತಿಂಗಳಿಂದ ಮರದಲ್ಲೇ ನೇತಾಡುತ್ತಿರುವ ಶವ..!

ಕಳೆದ 8 ತಿಂಗಳ ಹಿಂದೆ ತಧಿವಿಧಿ ಗ್ರಾಮದ ಮರವೊಂದರಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಪೋಲಿಸರು ಆತ್ಮಹತ್ಯೆ ಎಂದು ತಿಳಿಸಿದ್ದರು. ಆದರೆ ಮೃತ ವ್ಯಕ್ತಿಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಈ ಸಾವಿಗೆ ನ್ಯಾಯ ಸಿಗುವವರೆಗೂ ಹೆಣವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರಕರಣದ ಹಿನ್ನೆಲೆ:

ಮೃತ ಯುವಕ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಕುಟುಂಬದವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸಾವಿಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಈ ಪ್ರದೇಶದ ಜನರ ಒಂದು ಸಂಪ್ರದಾಯದಂತೆ ವ್ಯಕ್ತಿಯೋರ್ವ ಅಸ್ವಾಭಾವಿಕವಾಗಿ ಮೃತಪಟ್ಟರೆ ಆರೋಪಿಗಳು ಸಾವಿಗೆ ಬೆಲೆ ತೆರಬೇಕು ಹಾಗೂ ಮೃತನ ಕುಟುಂಬಕ್ಕೆ ಇಂತಿಷ್ಟು ಹಣ ನೀಡಬೇಕೆಂಬ ಪದ್ಧತಿ ಇದ್ದು, ಮೃತ ವ್ಯಕ್ತಿಯ ಸಂಬಂಧಿಕರಿಗೆ ಈಗಾಗಲೇ ಆರೋಪಿಗಳು ಹಣ ನೀಡಿದ್ದಾರೆ ಎಂದು ಹೇಳಲಾಗಿದೆ.

For All Latest Updates

ABOUT THE AUTHOR

...view details