ಕರ್ನಾಟಕ

karnataka

ETV Bharat / bharat

ಕೊರೊನಾ ವೈರಸ್​ಗೆ ಚೀನಾದಲ್ಲಿ 500 ಸಾವು, ಸೋಂಕಿತರ ಸಂಖ್ಯೆ 24,000ಕ್ಕೆ ಏರಿಕೆ! - ಮಾರಣಾಂತಿಕ ಕೊರೊನಾ ವೈರಸ್

ಮಹಾಮಾರಿ ಕೊರೊನಾಗೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಚೀನಾದಲ್ಲಿ ಮೃತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.

Coronavirus
Coronavirus

By

Published : Feb 5, 2020, 8:22 AM IST

ಬೀಜಿಂಗ್​​:ಮಾರಣಾಂತಿಕ ಕೊರೊನಾ ವೈರಸ್​ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 500ಕ್ಕೆ ಏರಿಕೆಯಾಗಿದ್ದು, 24,000 ಜನರಲ್ಲಿ ಈ ಮಾರಣಾಂತಿಕ ಸೋಂಕು ಕಂಡು ಬಂದಿದೆ.

ಮಾರಣಾಂತಿಕ ಕೊರೊನಾ ವೈರಸ್​​ನಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದ್ದು, ಭಾರತದಲ್ಲೂ ಅಲ್ಲಲ್ಲಿ ಈ ವೈರಸ್​ ಕಾಣಸಿಗುತ್ತಿದೆ. ಇನ್ನು ಪಿಲಿಫಿನ್ಸ್​​​​​ ಹಾಗೂ ಹಾಂಕಾಂಗ್​ ​​ನಲ್ಲೂ ಈ ವೈರಾಣು ಕಂಡು ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ಸೋಂಕಿಗೆ ಒಳಗಾಗಿರುವ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದ 892 ಸೋಂಕಿತರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೊರೊನಾ ವೈರಸ್​​ನಿಂದ ಚೀನಾ ಷೇರು ಮಾರುಕಟ್ಟೆಯಲ್ಲೂ ಆತಂಕ ಸೃಷ್ಟಿ ಮಾಡಿದ್ದು, ಹೂಡಿಕೆದಾರರು ತಲ್ಲಣಕ್ಕೊಳಗಾಗಿ ತಮ್ಮ ಷೇರು ಮಾರಾಟ ಮಾಡಿದ್ದಾರೆ ಹೀಗಾಗಿ ಒಂದೇ ದಿನ 30 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details