ಕರ್ನಾಟಕ

karnataka

ETV Bharat / bharat

ಜಗತ್ತಿನ ಎಲ್ಲೆಡೆ ಒಂದು ಕೋಟಿ ಚಿಣ್ಣರ ಭವಿಷ್ಯ ಅಪಾಯದಲ್ಲಿ..! - ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ

ದಿನಗೂಲಿ ಅಥವಾ ಬಡವಾಡೆ ಆಧಾರದಲ್ಲಿ ವೇತನ ಗಳಿಸುವ ದುರ್ಬಲ ಕುಟುಂಬಗಳ ಮೇಲೆ ಕೊರೊನಾ ವೈರಸ್ ಮಾರಕ ಪರಿಣಾಮ ಬೀರಿದೆ. ವಿಶೇಷವಾಗಿ ಬಡ ರಾಷ್ಟ್ರಗಳಲ್ಲಿನ ಕುಟುಂಬಗಳಿಗೆ ಪೌಷ್ಠಿಕ ಆಹಾರ ನೀಡುವುದು ಕಷ್ಟಕರ ಎನಿಸಿದೆ. ಆಹಾರ ಸುರಕ್ಷತೆಯ ಮೇಲೆ ಕೋವಿಡ್‍ - 19 ಬೀರಿರುವ ಸಾಮಾಜಿಕ - ಆರ್ಥಿಕ ಪರಿಣಾಮಗಳಿಂದಾಗಿ ಐದು ವರ್ಷದ ಒಳಗಿನ ಮಕ್ಕಳಲ್ಲಿ ಪೌಷ್ಠಿಕಾಂಶ ಕೊರತೆ ಶೇ 20 ರಷ್ಟು ಏರಿಕೆ ಆಗಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ( ಡಬ್ಲ್ಯೂ ಎಫ್‌ ಪಿ ) ವರದಿಗಳು ಅಂದಾಜಿಸಿವೆ.

coronavirus
ಕೊರೊನಾ ವೈರಸ್

By

Published : May 26, 2020, 6:17 PM IST

ಹೈದರಾಬಾದ್:ಕೊರೊನಾ ವೈರಸ್ ವಿಶ್ವದಲ್ಲಿ ಹೆಚ್ಚುವರಿಯಾಗಿ 1 ಕೋಟಿ ಮಕ್ಕಳನ್ನು ತೀವ್ರ ಅಪೌಷ್ಟಿಕತೆಗೆ ತಳ್ಳುವ ಸಾಧ್ಯತೆ ಇದೆ. ಕೋವಿಡ್‍ - 19 ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಮಾರಣಾಂತಿಕ ಅಪೌಷ್ಟಿಕತೆಯಿಂದ ಬಳಲುತ್ತಿರುವ ಚಿಕ್ಕ ಮಕ್ಕಳ ಸಂಖ್ಯೆ ಶೇ 20 ರಷ್ಟು ಹೆಚ್ಚಳ ಆಗಬಹುದು ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ( ಡಬ್ಲ್ಯೂ ಎಫ್‌ ಪಿ ) ಅಂದಾಜು ಮಾಡಿದೆ.

ಕಳಪೆ ಪೋಷಣೆಯಿಂದ ಈಗಾಗಲೇ ದುರ್ಬಲ ಆಗಿರುವ ಮಕ್ಕಳ ದೇಹದ ಮೇಲೆ ವೈರಸ್ ವಿನಾಶಕಾರಿ ಪರಿಣಾಮ ಬೀರುತ್ತದೆ. ಇದೇ ವೇಳೆ, ದಿನಗೂಲಿ ಅಥವಾ ಬಡವಾಡೆ ಆಧಾರದಲ್ಲಿ ವೇತನ ಗಳಿಸುವ ದುರ್ಬಲ ಕುಟುಂಬಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತಿದೆ. ಕೋವಿಡ್ ಸಂಬಂಧಿ ಲಾಕ್‌ಡೌನ್‌ ಮತ್ತು ಸಂಚಾರ ನಿರ್ಬಂಧಗಳು ಜೀವನೋಪಾಯ ಮಾರ್ಗಗಳಿಗೆ ತೀವ್ರ ರೀತಿಯಲ್ಲಿ ಅಡ್ಡಿ ಉಂಟುಮಾಡಿವೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಸಂಘರ್ಷ ಮತ್ತು ದುರ್ಬಲ ಆರೋಗ್ಯ ವ್ಯವಸ್ಥೆ ರೀತಿಯ ಬೆದರಿಕೆಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ವಿಶೇಷವಾಗಿ ಬಡ ರಾಷ್ಟ್ರಗಳ ಕುಟುಂಬಗಳಿಗೆ ಪೌಷ್ಟಿಕ ಆಹಾರ ನೀಡುವುದು ಕಷ್ಟಕರ ಸಂಗತಿ ಆಗಿದೆ.

ಡಬ್ಲ್ಯೂ ಎಫ್ ಪಿಯ ಪೌಷ್ಟಿಕಾಂಶ ನಿರ್ದೇಶಕ ಲಾರೆನ್ ಲ್ಯಾಂಡಿಸ್, "ನಾವು ಈಗ ಕಾರ್ಯೋನ್ಮುಖರಾಗದೇ ಹೋದರೆ ಭವಿಷ್ಯದಲ್ಲಿ ವಿನಾಶಕಾರಿ ಎನಿಸುವ ಜೀವಹಾನಿ, ಆರೋಗ್ಯ ನಷ್ಟ ಹಾಗೂ ಉತ್ಪಾದಕತೆಯಂತಹ ಸಮಸ್ಯೆ ಕಾಡಲಿದೆ. ಮಕ್ಕಳು ಕೋವಿಡ್‍ - 19 ನ ಪರಿಣಾಮಗಳನ್ನು ತಿಂಗಳು, ವರ್ಷ ಅಥವಾ ದಶಕಗಳವರೆಗೆ ಅನುಭವಿಸಬೇಕೆ ಎಂಬುದನ್ನು ಇಂದೇ ಪಡೆಯಲಿರುವ ಪೌಷ್ಟಿಕಾಂಶ ನಿರ್ಧರಿಸುತ್ತದೆ " ಎಂದು ಹೇಳುತ್ತಾರೆ.

ಈ ವರ್ಷದ ಜಾಗತಿಕ ಪೋಷಕಾಂಶ ವರದಿಯು ಪೌಷ್ಟಿಕಾಂಶ ವಿಚಾರದಲ್ಲಿ ಅಂತರ್ಗತವಾಗಿರುವ ಏರುಪೇರುಗಳನ್ನು ಎತ್ತಿ ತೋರಿಸುತ್ತಿದ್ದು, ಬಡ ಸಮುದಾಯಗಳಲ್ಲಿ ಪೋಷಕಾಂಶ ಕಡಿಮೆ ಆಗುವುದು ಅಥವಾ ವ್ಯರ್ಥವಾಗುವುದು ಪ್ರಚಲಿತದಲ್ಲಿದೆ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು, ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುಟಾಣಿಗಳು ಕೊರೊನಾ ಮತ್ತು ಅದರಿಂದ ಉಂಟಾಗಿರುವ ಸಾಮಾಜಿಕ- ಆರ್ಥಿಕ ಕುಸಿತದ ಪ್ರಾಥಮಿಕ ಬಲಿಪಶುಗಳಾಗಿ ಬಿಡುವ ಅಪಾಯ ಇದೆ. ಅಪೌಷ್ಟಿಕತೆ ಎಂಬುದು ಅಸಮರ್ಪಕ ಆಹಾರ ಸೇವನೆ ಅಥವಾ ಅನಾರೋಗ್ಯದಿಂದ ಇಲ್ಲವೇ ಈ ಎರಡರಿಂದಲೂ ಉಂಟಾಗಲಿದೆ.

ಚಿಕಿತ್ಸೆ ನೀಡದೆ ಇದ್ದರೆ ಪೋಷಕಾಂಶಗಳ ಕೊರತೆ, ಸಾವಿಗೆ ಕೂಡ ಕಾರಣ ಅದು ಆಗಬಹುದು. ಆಹಾರ ಸುರಕ್ಷತೆಯ ಮೇಲೆ ಕೋವಿಡ್‍ - 19 ಬೀರುತ್ತಿರುವ ಸಾಮಾಜಿಕ - ಆರ್ಥಿಕ ಪರಿಣಾಮಗಳಿಂದಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಪೋಷಕಾಂಶಗಳ ಕೊರತೆ ಶೇ 20 ರಷ್ಟು ಏರಿಕೆ ಆಗಬಹುದು ಎಂದು ಡಬ್ಲ್ಯೂ ಎಫ್‌ ಪಿ ಅಂದಾಜುಗಳು ಸೂಚಿಸಿವೆ. ಈ ಸಂಖ್ಯೆ ಕೇವಲ ಆಹಾರ ಅಭದ್ರತೆಯ ಪರಿಣಾಮವನ್ನು ಆಧರಿಸಿದೆ. ಆರೋಗ್ಯ ಸೌಲಭ್ಯಗಳ ಸ್ಥಗಿತದಿಂದ ಉಂಟಾಗುವ ಪರಿಣಾಮಗಳು ಅಪೌಷ್ಟಿಕತೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡಲಿವೆ.

ABOUT THE AUTHOR

...view details