ಕರ್ನಾಟಕ

karnataka

ETV Bharat / bharat

ದೋಷಯುಕ್ತ ಪಿಪಿಇ ಕಿಟ್ ಹಗರಣದ ಹಿಂದೆ ಇರುವವರಿಗೆ ಶಿಕ್ಷೆಯಾಗುತ್ತದೆಯೇ? : ಪ್ರಿಯಾಂಕಾ ಪ್ರಶ್ನೆ - ಪಿಪಿಇ ಕಿಟ್​ ವಿಚಾರವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ

ದೋಷಯುಕ್ತ ಪಿಪಿಇ ಕಿಟ್​ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ ಹೊರಹಾಕಿದ್ದಾರೆ.

ಪ್ರಿಯಾಂಕಾ ವಾದ್ರಾ
ಪ್ರಿಯಾಂಕಾ ವಾದ್ರಾ

By

Published : Apr 27, 2020, 4:13 PM IST

ನವದೆಹಲಿ: ಉತ್ತರ ಪ್ರದೇಶದ ವೈದ್ಯಕೀಯ ಕಾಲೇಜುಗಳಿಗೆ ಸರಬರಾಜು ಮಾಡಲಾಗಿರುವ ದೋಷಯುಕ್ತ ಪಿಪಿಇ ಕಿಟ್​ ವಿಚಾರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅಸಮಾಧಾನ ಹೊರಹಾಕಿದ್ದಾರೆ. ಈ ಹಗರಣದ ಹಿಂದೆ ಇರುವವರಿಗೆ ಶಿಕ್ಷೆಯಾಗುತ್ತದೆಯೇ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಹಗರಣದ ಹಿಂದೆ ಹೋಗುವ ಬದಲು ಯಾರು ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಬಗ್ಗೆ ಯುಪಿ ಸರ್ಕಾರ ಕಳವಳ ವ್ಯಕ್ತಪಡಿಸಿದೆ ಎಂದು ಆರೋಪಿಸಿದರು.

ದೋಷಯುಕ್ತ ಪಿಪಿಇಗಳನ್ನು ಉತ್ತರ ಪ್ರದೇಶದ ಅನೇಕ ವೈದ್ಯಕೀಯ ಕಾಲೇಜುಗಳಿಗೆ ಸರಬರಾಜು ಮಾಡಲಾಗಿತ್ತು. ಕಿಟ್​ಗಳು ದೋಷಯುಕ್ತವಾದವುಗಳೆಂದು ತಿಳಿದು ಬಂದ ಬಳಿಕ ಮರಳಿ ಪಡೆಯಲಾಯಿತು. ನಮ್ಮ ವೈದ್ಯರ ಸುರಕ್ಷತೆಯೊಂದಿಗೆ ಯಾರೂ ಆಟ ಆಡಬಾರದು ಎಂದು ಹೇಳಿದರು.

ಆಶ್ಚರ್ಯಕರ ಸಂಗತಿಯೆಂದರೆ, ಯುಪಿ ಸರ್ಕಾರವು ಹಗರಣದ ಬಗ್ಗೆ ತಲೆಕೆಡಿಸಿಕೊಳ್ಳದೇ, ದೋಷಯುಕ್ತ ಕಿಟ್‌ಗಳ ಬಗ್ಗೆ ಯಾರು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ ಎಂಬ ಬಗ್ಗೆ ಆತಂಕಕ್ಕೆ ಒಳಗಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ABOUT THE AUTHOR

...view details