ನವದೆಹಲಿ:ಸದ್ಯ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್ ಎರವಲು ಪಡೆದಿರುವ ಶೇ.100ರಷ್ಟಯ ಅಸಲನ್ನು ಮರುಪಾವತಿಸುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮುಂದೆ ಮದ್ಯದ ದೊರೆ ವಿಜಯ್ ಮಲ್ಯ ಪ್ರಸ್ತಾವನೆ ಇಟ್ಟಿದ್ದಾರೆ.
ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟ: ಸಾಲ ತೀರಿಸುತ್ತೇನೆ, ಪ್ಲೀಸ್ ತಗೊಳಿ ಅಂತಿದ್ದಾರೆ ಮಲ್ಯ - Mallya Asks FM To Consider His Offer To Repay Kingfisher Airlines Dues
ಮದ್ಯ ದೊರೆ ವಿಜಯ್ ಮಲ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ತಾವು ಸಾಲವಾಗಿ ಪಡೆದಿರುವ ಹಣದ ಅಸಲನ್ನು ತೀರಿಸುವುದಾಗಿ ಅವರು ಪ್ರಸ್ತಾವನೆ ಇಟ್ಟಿದ್ದಾರೆ.
ಅಂದಾಜು 9,000 ಕೋಟಿ ರೂ.ಗಳ ವಂಚನೆ ಮತ್ತು ಲೇವಾದೇವಿ ಆರೋಪದ ಮೇಲೆ ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿರುವ ಮಲ್ಯ, ಕೊರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆಯಾಗಿರುವ ನಂತರ ಭಾರತದಲ್ಲಿ ತನ್ನ ಎಲ್ಲಾ ಕಂಪನಿಗಳು ಕಾರ್ಯಾಚರಣೆ ಮತ್ತು ಉತ್ಪಾದನೆಯನ್ನು ನಿಲ್ಲಿಸಿವೆ ಎಂದು ಹೇಳಿದ್ದಾರೆ.
ಕೆಎಫ್‌ಎ ಎರವಲು ಪಡೆದ ಮೊತ್ತದ 100 ಶೇ. ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಲು ನಾನು ಮತ್ತೆ ಮತ್ತೆ ಮನವಿ ಸಲ್ಲಿಸಿದ್ದೇನೆ. ಆದರೆ ಬ್ಯಾಂಕ್ಗಳು ಹಣವನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಮತ್ತು ಬ್ಯಾಂಕ್ ಆಜ್ಞೆಯ ಮೇರೆಗೆ ಅವರು ಮಾಡಿದ ಲಗತ್ತುಗಳನ್ನು ಬಿಡುಗಡೆ ಮಾಡಲು ಜಾರಿ ನಿರ್ದೇಶನಾಲಯ ಸಿದ್ಧವಿಲ್ಲ. ಈ ಬಿಕ್ಕಟ್ಟಿನ ನಡುವೆ ಹಣಕಾಸು ಸಚಿವರು ನನ್ನ ಮನವಿ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಮಲ್ಯ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.