ಪಣಜಿ: ಕೊರೊನಾ ಸೋಂಕಿತರ ಸಂಖ್ಯೆ ವಿಪರೀತವಾಗುತ್ತಿದ್ದಂತೆ ಅದರ ಬಗ್ಗೆ ಹೆಚ್ಚಿನ ಅಧ್ಯಯನ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಭಾರತೀಯ ವೈದ್ಯಕೀಯ ಸಂಶೋಧನಾ ಮಾರ್ಗಸೂಚಿಗಳಂತೆ ಅತ್ಯಾಧುನಿಕ ಮಾದರಿ ಸಂಗ್ರಹ ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದೆ.
ಆಧುನಿಕ ಮಾದರಿ ಸಂಗ್ರಹ ಕಿಯೋಸ್ಕ್ಗಳನ್ನು ತೆರೆಯಲು ಮುಂದಾದ ಗೋವಾ - ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಣಸೇದ್ಲ
ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವ ಉದ್ದೇಶದಿಂದ ಗೋವಾ ಸರ್ಕಾರವು ಐಎಂಸಿಆರ್ ಪ್ರಕಾರ ಅತ್ಯಾಧುನಿಕ ಮಾದರಿ ಸಂಗ್ರಹ ಕಿಯೋಸ್ಕ್ಗಳನ್ನು ತೆರೆಯಲು ಮುಂದಾಗಿದೆ.
ಆಧುನಿಕ ಮಾದರಿ ಸಂಗ್ರಹ ಕಿಯೋಸ್ಕ್ಗಳನ್ನು ಸ್ಥಾಪಿಸಲು ಮುಂದಾದ ಗೋವಾ
ರಾಜ್ಯದಲ್ಲಿ ಈಗ ಎರಡು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂತಹ ಕಿಯೋಸ್ಕ್ಗಳನ್ನು ಪರಿಚಯಿಸುವುದರೊಂದಿಗೆ ಪರೀಕ್ಷೆಗೆ ಒಳಪಡುವ ಜನರ ಸಂಖ್ಯೆ ಹೆಚ್ಚಿಸುವ ಉದ್ದೇಶ ನಮ್ಮದು ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದರು.