ನವದೆಹಲಿ : ಕೋವಿಡ್ ಪ್ರಕರಣಗಳಲ್ಲಿ ಜಾಗತಿಕವಾಗಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಮಧ್ಯೆ ದೇಶದಲ್ಲಿ ಸೋಂಕಿನ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, ಮೃತರ ಸಂಖ್ಯೆ 1 ಲಕ್ಷದ 20 ಸಾವಿರದ ದಾಟಿದೆ.
ಕೊರೊನಾ ಕಂಟಕ: ದೇಶದಲ್ಲಿ 1.20ಲಕ್ಷದ ಗಡಿ ದಾಟಿದ ಸಾವಿನ ಸಂಖ್ಯೆ - ಕೇಂದ್ರ ಆರೋಗ್ಯ ಸಚಿವಾಲಯದ ಲೇಟೆಸ್ಟ್ ಸುದ್ದಿ
ಭಾರತದಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 1 ಲಕ್ಷದ 20 ಸಾವಿರ ದಾಟಿದೆ ಎಂದು ಕೇಂದ್ರ ಸಚಿವಾಲಯ ಅಧಿಕೃತವಾಗಿ ಘೋಷಣೆ ಮಾಡಿದೆ.
ಕೋವಿಡ್ ಮೃತರ ಸಂಖ್ಯೆ
ದೇಶದಲ್ಲಿ ಅಕ್ಟೋಬರ್ 28 ರ ಬೆಳಗ್ಗೆ 8 ಗಂಟೆವರೆಗೆ 79,90,322( ಹತ್ತಿರ 80 ಲಕ್ಷ) ಜನರಿಗೆ ಕೊರೊನಾ ದೃಢ ಪಟ್ಟಿದೆ. ಇದರಲ್ಲಿ 72,59,509 ಜನರು ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.85 ರಷ್ಟಿದೆ.
ಮಾರಣಾಂತಿಕ ವೈರಸ್ಗೆ 1,20,010 ಜನರು ಮೃತಪಟ್ಟಿದ್ದಾರೆ. ಅಂದರೆ, ಸಾವಿನ ಪ್ರಮಾಣ ಶೇಕಡಾ 1.50 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.