ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಈವರೆಗೂ ಕೊರೊನಾಗೆ ಸಾವು ದಾಖಲಾಗದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿವು.. - Corona virus in india

ಮಿಜೋರಾಮ್​​​ನಲ್ಲಿ ಒಟ್ಟು 226 ಕೋವಿಡ್​​-19 ಪ್ರಕರಣ ವರದಿಯಾಗಿವೆ. ಅದರಲ್ಲಿ 143 ಡಿಸ್ಚಾರ್ಜ್​​, 83 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಾಲ್ಯಾಂಡ್​​ನಲ್ಲಿ ದಾಖಲಾದ 732 ಸೋಂಕಿತರ ಪೈಕಿ 304 ಗುಣಮುಖರಾಗಿದ್ದಾರೆ. 428 ಸೋಕಿತರಿದ್ದಾರೆ..

coronavirus-cases-in-india
ಕೊರೊನಾ ವೈರಸ್​​

By

Published : Jul 11, 2020, 8:47 PM IST

ಹೈದರಾಬಾದ್ ​:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜೊತೆಗೆ ಸಾವಿನ ಪ್ರಕರಣ ಏರಿಕೆ ಕಾಣುತ್ತಿವೆ. ಭಾರತದಲ್ಲಿ ಈವರೆಗೂ ಕಾಣಿಸಿಕೊಂಡ 8,20,916 ಕೊರೊನಾ ಪ್ರಕರಣ ಪೈಕಿ, 22,123 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಸೋಂಕಿತರ ಪೈಕಿ 5,15,386 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 2,83,407 ಸಕ್ರಿಯ ಪ್ರಕರಣಗಳಿವೆ. ಆದರೆ, 4 ರಾಜ್ಯಗಳಲ್ಲಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೂ ಕೊರೊನಾ ಸೋಂಕಿಗೆ ಯಾರೊಬ್ಬರೂ ಮೃತಪಟ್ಟದಿರುವುದು ಸಂತಸದ ವಿಷಯ.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಲ್ಲಿ 156 ಸೋಂಕಿತರು ಕಾಣಿಸಿಕೊಂಡಿದ್ದು 92 ಮಂದಿ ಗುಣಮುಖರಾಗಿದ್ದಾರೆ. 64 ಸಕ್ರಿಯ ಪ್ರಕರಣಗಳಿವೆ. ದಿಯು ಮತ್ತು ದಾಮನ್​​ನಲ್ಲಿ 459 ಕೊರೊನಾ ಪ್ರಕರಣ ಪೈಕಿ 211 ಮಂದಿ ಡಿಸ್ಚಾರ್ಜ್​ ಆಗಿದ್ದು, 248 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪುರದಲ್ಲಿ 1582 ಕೇಸ್​​ಗಳು ದಾಖಲಾಗಿದ್ದು, 832 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 750 ಸಕ್ರಿಯ ಪ್ರಕರಣಗಳಿವೆ.

ಮಿಜೋರಾಮ್​​​ನಲ್ಲಿ ಒಟ್ಟು 226 ಕೋವಿಡ್​​-19 ಪ್ರಕರಣ ವರದಿಯಾಗಿವೆ. ಅದರಲ್ಲಿ 143 ಡಿಸ್ಚಾರ್ಜ್​​, 83 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಾಲ್ಯಾಂಡ್​​ನಲ್ಲಿ ದಾಖಲಾದ 732 ಸೋಂಕಿತರ ಪೈಕಿ 304 ಗುಣಮುಖರಾಗಿದ್ದಾರೆ. 428 ಸೋಕಿತರಿದ್ದಾರೆ. ಸಿಕ್ಕಿಂನಲ್ಲಿ 134 ಪ್ರಕರಣ ವರದಿಯಾಗಿವೆ. 80 ಸೋಂಕಿತರು ಡಿಸ್ಚಾರ್ಜ್​ ಆಗಿದ್ದಾರೆ. 54 ಸಕ್ರಿಯ ಪ್ರಕರಣಗಳಿವೆ. ಆದರೆ, ಒಂದು ಸಾವು ಕೂಡ ದಾಖಲಾಗಿಲ್ಲ. ಯಾಕೆಂದರೆ, ಅಲ್ಲಿನ ಸರ್ಕಾರಗಳು ಕೈಗೊಂಡ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎನ್ನಲಾಗಿದೆ.

6 ರಾಜ್ಯಗಳಲ್ಲಿ 10ಕ್ಕಿಂತ ಕಡಿಮೆ, ಹಾಗೆಯೇ ಮತ್ತೆ 6 ರಾಜ್ಯಗಳಲ್ಲಿ 50ಕ್ಕಿಂತ ಕಡಿಮೆ ಸಾವಿನ ಪ್ರಕರಣ ವರದಿಯಾಗಿವೆ. ಅವು ಯಾವುದು ಎಂಬುದನ್ನು ಈ ಪಟ್ಟಿಯ ಮೂಲಕ ತೋರಿಸುತ್ತೇವೆ. ನಾಳೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಶದ ಕೊರೊನಾ ಸೋಂಕಿತರ ವರದಿ ಬಿಡುಗಡೆ ಮಾಡಿದ ಬಳಿಕ ಅಂಕಿ-ಅಂಶ ಬದಲಾಗಲಿದೆ.

ಕ್ರ.ಸಂರಾಜ್ಯ/ಕೇಂದ್ರಾಡಳಿತ ಪ್ರದೇಶಸಕ್ರಿಯ ಪ್ರಕರಣಗಳುಗುಣಮುಖರಾದವರುಸಾವುಒಟ್ಟು ಪ್ರಕರಣಗಳು
1 ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ 64 92 0 156
2 ಆಂಧ್ರಪ್ರದೇಶ 11936 13194 292 25422
3 ಅರುಣಾಚಲ ಪ್ರದೇಶದೆಹಲಿ 213 120 2 335
4 ಅಸ್ಸೋಂ 5426 9147 27 14600
5 ಬಿಹಾರ 4347 10109 119 14575
6 ಚಂಡೀಗಡ 124 408 7 539
7 ಚತ್ತೀಸ್​ಗಡ 722 3028 17 3767
8 ದಿಯು ಮತ್ತು ದಾಮನ್​ 248 211 0 459
9 ದೆಹಲಿ 21146 84694 3300 109140
10 ಗೋವಾ 895 1347 9 2251
11 ಗುಜರಾತ್​ 9900 28147 2022 40069
12 ಹರಿಯಾಣ 4740 14904 290 19934
13 ಹಿಮಾಚಲ ಪ್ರದೇಶ 277 883 11 1171
14 ಜಮ್ಮು ಮತ್ತು ಕಾಶ್ಮೀರ 3943 5786 159 9888
15 ಜಾರ್ಖಾಂಡ್​ 1172 2224 23 3419
16 ಕರ್ನಾಟಕ 19039 13836 543 33418
17 ಕೇರಳ 3103 3820 27 6950
18 ಲಡಾಖ್ 146 917 1 1064
19 ​​ಮಧ್ಯಪ್ರದೇಶ 3538 12481 638 16657
20 ಮಹಾರಾಷ್ಟ್ರ 95943 132625 9893 238461
21 ಮಣಿಪುರ 750 832 0 1582
22 ಮೇಘಾಲಯ 139 66 2 207
23 ಮಿಜೋರಾಮ್ 83 143 0 226
24 ನಾಗಾಲ್ಯಾಂಡ್​​ 428 304 0 732
25 ಒಡಿಸ್ಸಾ 3928 7972 56 11956
26 ಪುದುಚೆರಿ 618 637 17 1272
27 ಪಂಜಾಬ್​ 2153 5017 187 7357
28 ರಾಜಸ್ತಾನ 5057 17620 497 23174
29 ಸಿಕ್ಕಿಂ 54 80 0 134
30 ತಮಿಳುನಾಡು 46108 82324 1829 130261
31 ತೆಲಂಗಾಣ 12680 19205 339 32224
32 ತ್ರಿಪುರ 545 1372 1 1918
33 ಉತ್ತರಾಖಾಂಡ್​ 621 2706 46 3373
34 ಉತ್ತರ ಪ್ರದೇಶ 11024 21787 889 33700
35 ಪಶ್ಚಿಮ ಬಂಗಾಳ 8881 17348 880 27109

ರಾಜ್ಯಗಳಿಗೆ ಮರುನಿಯೋಜನೆ ಮಾಡಿರುವ ಪ್ರಕರಣಗಳು 3416

3416

ಒಟ್ಟು 283407 515386 22123 820916

ABOUT THE AUTHOR

...view details