ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ಕೊರೊನಾ ವೈರಸ್ ಜೈವಿಕ ಅಸ್ತ್ರ ಆಗಿದ್ದರೆ..?

ಭಯೋತ್ಪಾದಕ ದಾಳಿಯನ್ನು ತಡೆಯಲು ಸರಕಾರ ಮೂರು ಹಂತದ ಕಾರ್ಯತಂತ್ರವನ್ನು ಜಾರಿಗೆ ತರಬೇಕು ಎಂದು ಗುಪ್ತಚರ ಮೂಲಗಳು ಸಲಹೆ ನೀಡಿವೆ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಯಾವುದೇ ಸಂಭಾಷಣೆಗಳನ್ನು ಕದ್ದಾಲಿಸಬೇಕು.

ಕೊರೊನಾ ವೈರಸ್ ಜೈವಿಕ ಅಸ್ತ್ರ
coronavirus

By

Published : May 19, 2020, 9:04 PM IST

ಹೈದರಾಬಾದ್: ಜಗತ್ತಿನ ಸೂಪರ್ ಪವರ್ ಆಗಲು ಚೀನಾ ಕೊರೊನಾ ವೈರಸ್ ಅನ್ನು ಸೃಷ್ಠಿಸಿದೆ ಎಂಬ ಸಂಚಿನ ಸಿದ್ದಾಂತ ಈಗ ಮುನ್ನೆಲೆಗೆ ಬಂದಿದೆ. ಚೀನಾದ ವುಹಾನ್ ನಗರದ ಪ್ರಯೋಗಾಲಯದಿಂದ ಕೊರೊನಾ ವೈರಸ್ ತಪ್ಪಿಸಿಕೊಂಡಿದೆ ಎಂಬ ಅಂಶವನ್ನು ಚೀನಾ ಸರ್ಕಾರ ಮರೆ ಮಾಡಿದೆ ಎಂಬ ಅಮೆರಿಕ ಅಧ್ಯಕ್ಷರ ಆರೋಪ ಈ ಸಿದ್ಧಾಂತಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಆದರೆ ವಿಜ್ಞಾನಿಗಳು ಮತ್ತು ಗುಪ್ತಚರ ಸಂಸ್ಥೆಗಳು ಅಮೆರಿಕದ ಈ ಆರೋಪಗಳನ್ನು ತಳ್ಳಿಹಾಕಿವೆ. ಪ್ರಾಣಿ ಮತ್ತು ಮಾನವ ಸಂಪರ್ಕದ ಮೂಲಕ ವೈರಸ್ ಹಬ್ಬಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಚಿಕಿತ್ಸೆಯ ವೈಫಲ್ಯವನ್ನು ಮುಚ್ಚಿಹಾಕಲು ಅಮೆರಿಕದ ನಾಯಕರು ಚೀನಾವನ್ನು ಆರೋಪಿಸುತ್ತಿದ್ದಾರೆ ಎಂಬ ಇನ್ನೊಂದು ವಾದವಿದೆ.

ಅಲ್ಲದೆ, ಚೀನಾದ ವುಹಾನ್‌ ನಗರದಲ್ಲಿರುವ ವಿವಾದಾತ್ಮಕ ಪ್ರಯೋಗಾಲಯಕ್ಕೆ ಯುಎಸ್ 3.7 ಮಿಲಿಯನ್ ಡಾಲರ್ ಹಣವನ್ನು ನೀಡಿದೆ ಎಂಬ ಅಂಶವು ಇತ್ತೀಚೆಗೆ ಬೆಳಕಿಗೆ ಬಂದಿದೆ. ಏಷ್ಯಾ ಖಂಡಗಳಲ್ಲಿ 2002-03ರ ಸಮಯದಲ್ಲಿ ಸಾರ್ಸ್ ಸಾಂಕ್ರಾಮಿಕ ರೋಗದ ಹಬ್ಬಿದಾಗ, ಚೀನಾ ವುಹಾನ್‌ನಲ್ಲಿ ವೈರಾಲಜಿ (ಸಾಂಕ್ರಾಮಿಕ ರೋಗ ಪತ್ತೆ)ಪ್ರಯೋಗಾಲಯವನ್ನು ಸ್ಥಾಪಿಸಲು ನಿರ್ಧರಿಸಿತು ಮತ್ತು ಇದು ಭವಿಷ್ಯದಲ್ಲಿ ಉದ್ಭವಿಸುವ ಸಾಂಕ್ರಾಮಿಕ ರೋಗವನ್ನು ಎದುರಿಸುವ ಚೀನಾದ ಉದ್ದೇಶವಾಗಿತ್ತು. ರೋಗ ನಿರೋದಕ ಔಷಧಗಳನ್ನು ಅಭಿವೃದ್ಧಿಪಡಿಸಲು ವೈರಾಲಜಿ ಪ್ರಯೋಗಾಲಯ ಸಹಕಾರಿಯಾಗಲಿದೆ ಎಂಬುದು ಚೀನಾ ಸರ್ಕಾರದ ಆಶಯವಾಗಿತ್ತು. ಪ್ರಯೋಗಾಲಯ ನಿರ್ಮಿತ ವೈರಸ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಚೀನಾ ವಿಶ್ವ ರಾಷ್ಟ್ರಗಳ ವಿರುದ್ಧ ಸಂಚು ರೂಪಿಸಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಲವಾರು ಸಂಶೋಧನಾತ್ಮಕ ಅಧ್ಯಯನಗಳು ತಿಳಿಸಿವೆ.

ಕೊರೊನಾ ವೈರಸ್ ಹರಡುವ ಯೋಜನೆಗಳನ್ನು ಭಯೋತ್ಪಾದಕ ಗುಂಪುಗಳು ಪಡೆದುಕೊಳ್ಳಬಹುದು ಎಂದು ಯುಎಸ್ ಗುಪ್ತಚರ ಸಂಸ್ಥೆಗಳು ದೃಢ ಪಡಿಸಿವೆ. ವರ್ಣಭೇದವನ್ನು ವಿರೋಧಿಸುವವರಿಂದ ಹಿಡಿದು ಇಸ್ಲಾಮಿಕ್ ಭಯೋತ್ಪಾದಕರವರೆಗೆ ಬಲವಾದ ಸಿದ್ಧಾಂತಗಳನ್ನು ಹೊಂದಿರುವ ಜನರು ಇಂತಹ ಜೈವಿಕ ಯುದ್ಧಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ಯುಸ್ ಗುಪ್ತಚರ ಸಂಸ್ಥೆಗಳು ಹೇಳಿವೆ. ಭಯೋತ್ಪಾದಕ ಗುಂಪು ಈಗಾಗಲೇ ಇಂತಹ ದಾಳಿಯನ್ನು ನಡೆಸಲು ಸಜ್ಜಾಗಿದೆ ಎಂದು ಗುಪ್ತಚರ ವರದಿಯೊಂದು ಬಹಿರಂಗಪಡಿಸಿದೆ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಕಾಲದಲ್ಲಿ ಏರಿದರೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕುಸಿಯುತ್ತದೆ ಮತ್ತು ಇದು ಸರ್ಕಾರವನ್ನು ಅಸಹಾಯಕ ಸ್ಥಿತಿಗೆ ನೂಕುತ್ತದೆ ಎನ್ನಲಾಗಿದೆ.

ಭಯೋತ್ಪಾದಕ ದಾಳಿಯನ್ನು ತಡೆಯಲು ಸರಕಾರ ಮೂರು ಹಂತದ ಕಾರ್ಯತಂತ್ರವನ್ನು ಜಾರಿಗೆ ತರಬೇಕು ಎಂದು ಗುಪ್ತಚರ ಮೂಲಗಳು ಸಲಹೆ ನೀಡಿವೆ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಯಾವುದೇ ಸಂಭಾಷಣೆಗಳನ್ನು ಕದ್ದಾಲಿಸಬೇಕು. ಸಾಮಾಜಿಕ ಮಾಧ್ಯಮ, ಇಮೇಲ್‌ಗಳು, ಎಸ್‌ಎಂಎಸ್, ಇಂಟರ್ನೆಟ್ ಚಾಟ್‌ರೂಮ್‌ಗಳು ಮತ್ತು ಸಂದೇಶ ವಾಹಕಗಳನ್ನು ಸರಕಾರ ಕದ್ದಾಲಿಸಬೇಕು. ಅಂತಹ ಸಿದ್ಧಾಂತಗಳನ್ನು ಹೊಂದಿರುವ ಜನರನ್ನು ಕಣ್ಗಾವಲಿನಲ್ಲಿಡಬೇಕು ಎಂದು ಸೂಚಿಸಿವೆ. ಅವರ ವಾಸಸ್ಥಳಗಳ ಮೇಲೆ ನಿರಂತರ ಕಣ್ಗಾವಲಿಡಬೇಕು. ಉದ್ದೇಶಪೂರ್ವಕ ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ಜೈವಿಕ ಭಯೋತ್ಪಾದನೆ ಎಂದು ಪರಿಗಣಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗುಪ್ತಚರ ಇಲಾಖೆಗಳು ಸೂಚಿಸಿವೆ. ಎರಡನೇ ಹಂತದ ಕ್ರಮವಾಗಿ, ಉದ್ದೇಶಪೂರ್ವಕ ಸೋಂಕು ಹರಡುವವರನ್ನು ಗುರುತಿಸಿ ಶಿಕ್ಷಿಸಬೇಕು. ವೈರಸ್ ಹರಡುವಿಕೆಯ ಮೂಲದ ಪತ್ತೆ ಕಾರ್ಯ ಆರಂಭಿಕ ಹಂತಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದು. ಆದರೆ, ಸೋಂಕು ಹರಡುವಿಕೆ ಮೂರನೇ ಹಂತಕ್ಕೆ ತಲುಪುತ್ತಿದ್ದಂತೆ ಅದರ ಮೂಲವನ್ನು ಕಂಡು ಹಿಡಿಯುವುದು ಕಷ್ಟಕರ ಕೆಲಸ.

ಜೈವಿಕ ಭಯೋತ್ಪಾದಕರನ್ನು ಹೇಗೆ ಪತ್ತೆ ಹಚ್ಚುವುದು ಎಂಬ ಕುರಿತು ಸಾಂಕ್ರಾಮಿಕ ಚಿಕ್ಸಿಕ ವೈದ್ಯರು ಉತ್ತರವನ್ನು ಹೊಂದಿದ್ದಾರೆ. ಒಂದು ಪ್ರದೇಶದಲ್ಲಿ ಹೊಸ ರೀತಿಯ ಸಾಂಕ್ರಾಮಿಕ ರೋಗ ಹುಟ್ಟಿಕೊಂಡರೆ ಅದನ್ನು ಹಬ್ಬಿಸಲಾಗಿದೆ ಎಂದು ಊಹಿಸಬಹುದು. ಆರಂಭದಲ್ಲಿ, ಭಾರತದಲ್ಲಿ ಕೊರೊನಾ ವೈರಸ್ ಮೂಲ ಚೀನಾ ಮತ್ತು ಇಟಲಿಯಾಗಿತ್ತು. ಹಾಗೆಯೇ, ಚೀನಾ, ಇಟಲಿ, ಫ್ರಾನ್ಸ್‌ನ ಪ್ರಯಾಣಿಕರ ಮೂಲಕ ಕೊರೊನಾ ವೈರಸ್ ಅಮೆರಿಕವನ್ನ ಪ್ರವೇಶಿಸಿತು. ನಿರ್ದಿಷ್ಟ ಪ್ರದೇಶದಲ್ಲಿ ವೈರಸ್ ಅನ್ನು ಹೋಲಿಸುವ ಮತ್ತು ವ್ಯತಿರಿಕ್ತಗೊಳಿಸುವ ಮೂಲಕ, ಇದನ್ನು ಉದ್ದೇಶಪೂರ್ವಕವಾಗಿ ಹರಡಿಸಲಾಗಿದೆಯೇ ಇಲ್ಲವೇ ಎನ್ನುವುದನ್ನು ಅಧಿಕಾರಿಗಳು ಪತ್ತೆ ಹಚ್ಚಬಹುದು. ಲಾಕ್‌ಡೌನ್, ನಿರಂತರ ಪರೀಕ್ಷೆ, ಕ್ವಾರಂಟ್ಯೆನ್, ಐಸೋಲೇಷನ್ ಗಳ ಸಹಾಯದಿಂದ ವಿದೇಶಿ ವೈರಸ್‌ಗಳ ವಿರುದ್ಧ ಸ್ಥಳೀಯ ಜನಸಂಖ್ಯೆಯನ್ನು ರಕ್ಷಿಸುವಂತೆ ಗುಪ್ತಚರ ಮೂಲಗಳು ಸರ್ಕಾರಕ್ಕೆ ಸಲಹೆ ನೀಡಿವೆ.

ಕೊರೊನಾ ವೈರಸ್ ಅನ್ನು ಹರಡಲು ಭಯೋತ್ಪಾದಕರು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತಕ್ಕೆ ನುಸುಳುವ ಅಪಾಯವಿದೆ. ಸಾಮಾಜಿಕ ಅಂತರ ಮತ್ತು ವೈಯಕ್ತಿಕ ನೈರ್ಮಲ್ಯಕರಣವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ಪ್ರಯತ್ನಿಸುತ್ತಿರುವ ಭಾರತೀಯ ಸೇನಾ ಪಡೆಗಳಿಗೆ ಭಯೋತ್ಪಾದಕರು ಈ ರೋಗವನ್ನು ಹರಡುವ ಸಾಧ್ಯತೆ ಇದೆ. ಭಾರತೀಯ ಸೇನೆಯ ಪ್ರಯತ್ನವನ್ನು ವಿಫಲಗೊಳಿಸಲು ಭಯೋತ್ಪಾದಕರು ಗಡಿಯ ಮೂಲಕ ಒಳ ನುಸುಳುತ್ತಿದ್ದಾರೆ. ಲಾಕ್‌ಡೌನ್ ಮಾನದಂಡಗಳನ್ನು ಜಾರಿಗೊಳಿಸುವುದರ ಜೊತೆಗೆ, ಸೈನ್ಯವು ಭಯೋತ್ಪಾದಕ ದಾಳಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಹೆಚ್ಚುವರಿಯಾಗಿ, ನಾಗರಿಕರಿಗೆ ವೈರಸ್ ಹರಡುವುದನ್ನು ತಡೆಯಲು ಸೈನ್ಯವು ಸರ್ಕಾರವನ್ನು ಬೆಂಬಲಿಸುತ್ತಿದೆ. ಕೊರೊನಾ ಶಂಕಿತರಿಗಾಗಿ ಭಾರತೀಯ ಮಿಲಿಟರಿ ಪಡೆಗಳು 48 ಗಂಟೆಗಳ ಒಳಗೆ ಮಾನೇಸರ್‌ನಲ್ಲಿ ಕ್ವಾರಂಟೈನ್ ಕೇಂದ್ರ ನಿರ್ಮಿಸಿದೆ.

ಭಾರತೀಯ ವಾಯುಪಡೆಯು ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿದೆ.. ಭಾರತೀಯ ಸೇನೆಯಲ್ಲಿ 13,000 ಕ್ಕೂ ಹೆಚ್ಚು ವೈದ್ಯರು, ತಜ್ಞರು ಮತ್ತು ದಾದಿಯರು ಇದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ, 1,00,000 ಬೆಂಬಲಿತ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಮಾಜಿ ಸೇನಾ ಕಮಾಂಡರ್ ಅವರ ಪ್ರಕಾರ ಪ್ರಸ್ತುತ ಮಿಲಿಟರಿ ಪಡೆಯ ಮೂರನೇ ಒಂದು ಭಾಗವನ್ನು ದೇಶಾದ್ಯಂತ ಕೊರೊನಾ ಕಾರ್ಯಚರಣೆಯಲ್ಲಿ ತೊಡಗಿಸಬಹುದು. ನಿವೃತ್ತ ಮಿಲಿಟರಿ ಸಿಬ್ಬಂದಿ ತಮ್ಮ ಸಹಾಯವನ್ನು ನೀಡಲು ಮುಂದೆ ಬಂದಿದ್ದಾರೆ. ಭಾರತದಲ್ಲಿ 130 ಮಿಲಿಟರಿ ಆಸ್ಪತ್ರೆಗಳಿವೆ. ಅಗತ್ಯವಿದ್ದರೆ, ಮಿಲಿಟರಿ ಎಂಜಿನಿಯರ್‌ಗಳು ನಾಗರಿಕ ಕಟ್ಟಡಗಳು, ಕಾರ್ಖಾನೆಗಳು ಮತ್ತು ಶೆಡ್‌ಗಳನ್ನು ಕರೋನಾ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿ 100 ಕ್ಷೇತ್ರ ಮಟ್ಟದ ಆಸ್ಪತ್ರೆಗಳನ್ನು ಸ್ಥಾಪಿಸಬಹುದು. ಕೊರೊನಾ ಮೂರನೇ ಹಂತಕ್ಕೆ ಪ್ರವೇಶಿಸಿದರೆ, ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರವು ಸಶಸ್ತ್ರ ಪಡೆಗಳನ್ನು ನಿಯೋಜಿಸಬಹುದು.

ವೈರಸ್ ಹರಡಲು ಭಯೋತ್ಪಾದಕರು ಕರೋನಾ ಸಂತ್ರಸ್ತರನ್ನು ಜೈವಿಕ ಅಸ್ತ್ರವನ್ನಾಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭಯೋತ್ಪಾದಕ ಪಡೆಗಳು ಅಪಾಯಕಾರಿ ವೈರಸ್ ಅಂಶವನ್ನು ಹಿಡಿದಿಟ್ಟುಕೊಂಡರೆ ಜಗತ್ತು ದೊಡ್ಡ ಅಪಾಯಕ್ಕೆ ಸಾಕ್ಷಿಯಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಕೊವಿಡ್ -19 ರಾಷ್ಟ್ರಗಳನ್ನು ಮತ್ತು ಆರ್ಥಿಕತೆಗಳನ್ನು ಸಮಾನವಾಗಿ ನಾಶಪಡಿಸುತ್ತಿದೆ. ದೀರ್ಘಕಾಲಿಕ ಲಾಕ್‌ಡೌನ್‌ ಸಾಮಾಜಿಕ ಅಶಾಂತಿ ಮತ್ತು ಭಯೋತ್ಪಾದಕ ದಾಳಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ. ಕೊರೊನಾ ವೈರಸ್ ಸೋಗಿನಲ್ಲಿ ವಿವಿಧ ಉಗ್ರಗಾಮಿ ಪಡೆಗಳು ಅಶಾಂತಿ ಮತ್ತು ಹಿಂಸಾಚಾರವನ್ನು ಸೃಷ್ಟಿಸಲು ನಿರ್ಧರಿಸಿದರೆ ಸಾಂಕ್ರಾಮಿಕ ರೋಗವು ಹತೋಟಿ ಕಷ್ಟಕರ ಎಂದು ಗುಟೆರೆಸ್ ಹೇಳಿದರು. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸರ್ಕಾರಗಳು ನಿರತರಾಗಿರುವುದರಿಂದ, ಭಯೋತ್ಪಾದಕ ಗುಂಪುಗಳು ಇದನ್ನು ಭಯೋತ್ಪಾದನೆ ದಾಳಿಗೆ ಮುಷ್ಕರಕ್ಕೆ ಒಂದು ಅವಕಾಶವಾಗಿ ತೆಗೆದುಕೊಳ್ಳಬಹುದು.

ABOUT THE AUTHOR

...view details