ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಮತ್ತೆ 3 ಕೊರೊನಾ ಪ್ರಕರಣ: ಭಾರತದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ.. - ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ

ಮೂವರಲ್ಲಿ ಮೊದಲನೇ ರೋಗಿಯು 105 ಜನರನ್ನು, ಎರಡನೇ ರೋಗಿ 168 ಜನರನ್ನು ಹಾಗೂ ಮೂರನೇ ರೋಗಿಯು 64 ಜನರನ್ನು ಸಂಪರ್ಕಿಸಿ ಬಂದಿದ್ದಾರೆ. ಇವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಇವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.

Corona virus cases in India
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ

By

Published : Mar 8, 2020, 4:13 PM IST

ನವದೆಹಲಿ :ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಮೂವರಿಗೆ ಕೊರೊನಾ ವೈರಸ್ ಸೋಂಕು ತಗುಲಿರೋದು ಸೇರಿ ಇನ್ನೊಂದು ಶಂಕಿತ ಪ್ರಕರಣ ವರದಿಯಾಗಿದೆ ದೆಹಲಿ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​ ಮಾಹಿತಿ ನೀಡಿದ್ದಾರೆ.

ಮೂವರಲ್ಲಿ ಮೊದಲನೇ ರೋಗಿಯು 105 ಜನರನ್ನು, ಎರಡನೇ ರೋಗಿ 168 ಜನರನ್ನು ಹಾಗೂ ಮೂರನೇ ರೋಗಿಯು 64 ಜನರನ್ನು ಸಂಪರ್ಕಿಸಿ ಬಂದಿದ್ದಾರೆ. ಇವರಿಗೆ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ತನಿಖೆಗಾಗಿ ಇವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಂದು ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿರುವುದಾಗಿ ಆರೋಗ್ಯ ಸಚಿವೆ ಕೆ ಕೆ ಶೈಲಾಜಾ ತಿಳಿಸಿದ್ದಾರೆ. ತಮಿಳುನಾಡಿನಲ್ಲೂ ಸಹ ಒಂದು ಪ್ರಕರಣ ವರದಿಯಾಗಿದೆ. ಹೀಗಾಗಿ ಭಾರತದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆಯಾದಂತಾಗಿದೆ.

ABOUT THE AUTHOR

...view details