ಕರ್ನಾಟಕ

karnataka

ETV Bharat / bharat

ಕೊರೊನಾಗೆ ಮತ್ತೆರಡು ಬಲಿ; ರಾಜಸ್ಥಾನದಲ್ಲಿ 11 ಕ್ಕೇರಿದ ಸಾವಿನ ಸಂಖ್ಯೆ - ಮರಣೋತ್ತರ ಪರೀಕ್ಷೆ

ರಾಜಸ್ಥಾನದಲ್ಲಿ ಕೊರೊನಾ ಸಾವಿನ ಸಂಖ್ಯೆ 11 ಕ್ಕೇರಿದೆ. ರವಿವಾರ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ 104 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇರಾನ್​ನಿಂದ ಜೋಧಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕರೆತರಲಾಗಿದ್ದ ಇಬ್ಬರು ವ್ಯಕ್ತಿಗಳು ಸಹ ಇದರಲ್ಲಿ ಸೇರಿದ್ದಾರೆ.

2 more deaths, 104 new cases reported in Rajasthan
2 more deaths, 104 new cases reported in Rajasthan

By

Published : Apr 13, 2020, 1:28 PM IST

ಜೈಪುರ: ರಾಜಸ್ಥಾನದಲ್ಲಿ ರವಿವಾರ ಮತ್ತಿಬ್ಬರು ಕೊರೊನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ 11 ಕ್ಕೇರಿದೆ. ಮತ್ತೆ 100 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 804 ಜನರಿಗೆ ಕೊರೊನಾ ದೃಢಪಟ್ಟಂತಾಗಿದೆ.

ರವಿವಾರ ಮೃತಪಟ್ಟ ಇಬ್ಬರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಬ್ಬರೂ ಕೊರೊನಾದಿಂದಲೇ ಸಾವಿಗೀಡಾಗಿರುವುದು ಖಚಿತವಾಗಿದೆ. ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಮೃತಪಟ್ಟ 13 ವರ್ಷದ ಬಾಲಕಿ ಹಾಗೂ ಟೋಂಕ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ 60 ವರ್ಷದ ಮಧುಮೇಹಿ ವ್ಯಕ್ತಿ ಇವರಿಬ್ಬರೂ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ.

"ರವಿವಾರ 11 ಜಿಲ್ಲೆಗಳ ವ್ಯಾಪ್ತಿಯಲ್ಲಿ 104 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇರಾನ್​ನಿಂದ ಜೋಧಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕರೆತರಲಾಗಿದ್ದ ಇಬ್ಬರು ವ್ಯಕ್ತಿಗಳು ಸಹ ಇದರಲ್ಲಿ ಸೇರಿದ್ದಾರೆ" ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ ಸಿಂಗ್​ ತಿಳಿಸಿದ್ದಾರೆ.

ಜೈಪುರ ಜಿಲ್ಲೆಯೊಂದರಲ್ಲೇ ಈವರೆಗೆ 341 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲೇ ಗರಿಷ್ಠವಾಗಿದೆ.

ABOUT THE AUTHOR

...view details