ಬಿಲ್ವಾರ್(ರಾಜಸ್ಥಾನ):ದೇಶದಲ್ಲಿ ಕೊರೊನಾ ಮಹಾಮಾರಿ ಹೊಗಲಾಡಿಸಲು ದೇಶ ಒಗ್ಗಟ್ಟಿನಿಂದ ಹೋರಾಟ ನಡೆಸಿದ್ದು, ಇದರ ಭಾಗವಾಗಿ ವೈದ್ಯರು ಹಾಗೂ ಪೊಲೀಸರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅನೇಕ ಮಕ್ಕಳು ತಂದೆ - ತಾಯಿ ಮುಖ ನೋಡದಂತಹ ಸ್ಥಿತಿ ನಿರ್ಮಾಣಗೊಂಡಿದೆ.
ರಾಜಸ್ಥಾನದ ಬಿಲ್ವಾರ್ದಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾಸ್ಪತ್ರೆಯಲ್ಲಿ 7 ವರ್ಷದ ಮಗುವಿನ ತಂದೆ ಐಸೋಲೇಷನ್ ವಾರ್ಡ್ನಲ್ಲಿ ಆಗಿ ಸೇವೆ ಸಲ್ಲಿಸುತ್ತಿದ್ದು, ತಾಯಿ ಬಿಲ್ವಾರ್ದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಏಳು ವರ್ಷದ ಮಗಳು ಮನೆಯಲ್ಲೇ ಜೀವನ ಸಾಗಿಸುತ್ತಿದ್ದು, ಅನೇಕ ದಿನಗಳಿಂದ ಇಬ್ಬರ ಮುಖ ಸರಿಯಾಗಿ ನೋಡದಂತಹ ಸ್ಥಿತಿ ನಿರ್ಮಾಣಗೊಂಡಿದೆ.