ಹೈದರಾಬಾದ್:ಕೊರೊನಾ ವೈರಸ್ ಹರಡುತ್ತಿರುವ ಪರಿಣಾಮವಾಗಿ ಇಡೀ ದೇಶಾದ್ಯಂತ ಲಾಕ್ಡೌನ್ ಆದೇಶ ಪಾಲನೆಯಾಗುತ್ತಿದ್ದು, ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳಿಗೂ ಅಡ್ಡಿಯುಂಟಾಗಿದೆ. ಭಾರತದ ಉನ್ನತ ಉದ್ಯಮಗಳೆನಿಸಿರುವ ಅದಾನಿ ಪೋರ್ಟ್ಸ್ - ಭಾರತದ ಅತಿದೊಡ್ಡ ಖಾಸಗಿ ಮಲ್ಟಿ-ಪೋರ್ಟ್ ಆಪರೇಟರ್, ಇಂಡಿಯನ್ ಆಯಿಲ್ - ಪ್ರಸಿದ್ಧ ತೈಲ ಮತ್ತು ಅನಿಲ ಕಂಪನಿ, ಪಿವಿಆರ್ ಸಿನೆಮಾಸ್ - ಭಾರತದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಮುಂತಾದವು 'ಆಕ್ಟ್ ಆಫ್ ಗಾಡ್' ಷರತ್ತು ವಿಧಿಸಲು ನಿರ್ಧರಿಸಿವೆ. ಇನ್ನೂ ಇತರ ಅನೇಕ ಉದ್ದಿಮೆಗಳೂ ಇದನ್ನು ಅನುಸರಿಸುವ ಸಾಧ್ಯತೆಯಿದೆ.
'ಫೋರ್ಸ್ ಮಜೂರ್' ಎಂದೂ ಕರೆಯಲ್ಪಡುವ, 'ಆಕ್ಟ್ ಆಫ್ ಗಾಡ್' ಷರತ್ತು ಹೆಚ್ಚಿನ ಕಾರ್ಪೊರೇಟ್‌ಗಳು ಮತ್ತು ವಾಣಿಜ್ಯ ಕ್ಷೇತ್ರದವರಿಗೆ ಸುರಕ್ಷಿತ ಮಾರ್ಗವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ಇದು ಬಾಡಿಗೆ ಪಾವತಿ ಮತ್ತು ಸಾಲಗಳಂತಹ ಒಪ್ಪಂದದ ಕಟ್ಟುಪಾಡುಗಳಿಂದ ವಿನಾಯಿತಿ ನೀಡುತ್ತದೆ.
'ಆಕ್ಟ್ ಆಫ್ ಗಾಡ್' ಎಂದರೇನು?
'ಫೋರ್ಸ್ ಮಜೂರ್' ಎಂಬ ಫ್ರೆಂಚ್ ಪದವು 'ಉನ್ನತ ಶಕ್ತಿ' ಎಂದು ಭಾಷಾಂತರಿಸುವುದು ಒಂದು ಒಪ್ಪಂದದ ಷರತ್ತು, ಇದು ಒಂದು ಪಕ್ಷವು ತನ್ನ ನಿಯಂತ್ರಣಕ್ಕೆ ಮೀರಿದ ಕಾರಣಗಳಿಂದಾಗಿ ಒಪ್ಪಂದದಲ್ಲಿ ಭರವಸೆ ನೀಡಿದ ಯಾವುದನ್ನಾದರೂ ಪರಿಪೂರ್ಣಗೊಳಿಸುತ್ತದೆ.
1872ರ ಭಾರತೀಯ ಗುತ್ತಿಗೆ ಕಾಯ್ದೆ,148 ವರ್ಷಗಳಷ್ಟು ಹಳೆಯದಾದ ಕಾನೂನುಗಳನ್ನು ನಿಯಂತ್ರಿಸುವ ಈ ಕಾಯ್ದೆ ಎಲ್ಲಿಯೂ 'ಫೋರ್ಸ್ ಮಜೂರ್' ಅನ್ನು ಸ್ಪಷ್ಟವಾಗಿ ಉಲ್ಲೇಖಿಸುವುದಿಲ್ಲ.
ಆದಾಗ್ಯೂ, ಕಾಯ್ದೆಯ ಸೆಕ್ಷನ್ 32 ಮತ್ತು 56 ಕಾನೂನು ಪರಿಭಾಷೆಗೆ ಸೂಚ್ಯವನ್ನು ಒದಗಿಸುತ್ತದೆ. ಯುದ್ಧಗಳು, ಗಲಭೆಗಳು, ಸ್ಫೋಟಗಳು, ಮುಷ್ಕರಗಳು, ಬಂದರು ದಿಗ್ಬಂಧನಗಳು, ಸರ್ಕಾರದ ಕ್ರಮಗಳು ಅಥವಾ ಪ್ರವಾಹ, ಭೂಕಂಪಗಳು ಮತ್ತು ಸುನಾಮಿಗಳಂತಹ ನೈಸರ್ಗಿಕ ವಿಕೋಪಗಳು ಇಂತ ಅನಿರೀಕ್ಷಿತ ದುರ್ಘಟನೆಗಳನ್ನು ಆಕ್ಟ್ ಆಫ್ ಗಾಡ್ ಎಂದು ಸಂಭೋದಿಸಲಾಗುತ್ತದೆ.
ಇಂತಹ ಪ್ರಮುಖ ಅನಿರೀಕ್ಷಿತ ಘಟನೆಗಳು ಸಂಭವಿಸಿದಾಗ, ಕಂಪನಿಗಳು ಬಾಧ್ಯತೆಯನ್ನು ನಿರ್ವಹಿಸಲು ಅಥವಾ ಹೊಣೆಗಾರಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ಕಾಯ್ದೆಯನ್ನು ಬಳಸಿಕೊಳ್ಳಬಹುದು. ಸಹಜವಾಗಿ, ಫೋರ್ಸ್ ಮಜೂರ್ ಎರಡು ಉದ್ದಿಮೆ ಕ್ಷೇತ್ರಗಳ, ಕಂಪನಿಗಳ ನಡುವಿನ ಮೂಲ ಒಪ್ಪಂದದ ಭಾಗವಾಗಿರಬೇಕು.