ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಐಟಿ ಜೆಇಇ ಅಡ್ವಾನ್ಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಪರೀಕ್ಷೆ ಮೇ 17, 2020 ರಂದು ನಡೆಯಬೇಕಿದ್ದವು. ಏಪ್ರಿಲ್ನಲ್ಲಿ ನಡೆಯಬೇಕಿದ್ದ ಜೆಇಇ ಮೇನ್ಸ್ ಪರೀಕ್ಷೆಗಳನ್ನು ಈ ಮುಂಚೆಯೇ ಮುಂದೂಡಲಾಗಿದೆ.
ಐಐಟಿ - ಜೆಇಇ ಅಡ್ವಾನ್ಸ್ ಪರೀಕ್ಷೆ ಮುಂದೂಡಿಕೆ - ಜೆಇಇ ಮೇನ್ಸ್
ಕೊರೊನಾ ವೈರಸ್ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಐಐಟಿ ಜೆಇಇ ಅಡ್ವಾನ್ಸ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
IIT JEE Advanced exam postponed
ಈ ಬಾರಿ ಐಐಟಿ ದೆಹಲಿ ಮೇ 17 ರಂದು ಸಂಯುಕ್ತ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಇದನ್ನು ಈಗ ಮುಂದೂಡಲಾಗಿದೆ. ದೇಶದ 23 ಐಐಟಿ, ಅಂಡರ್ ಗ್ರ್ಯಾಜುಯೇಟ್, ಇಂಟಿಗ್ರೇಟೆಡ್ ಮಾಸ್ಟರ್ಸ್ ಮತ್ತು ಬ್ಯಾಚುಲರ್ ಮಾಸ್ಟರ್ಸ್ ಡಿಗ್ರಿ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಆರ್ಕಿಟೆಕ್ಟ್ ಕೋರ್ಸ್ಗಳಿಗೆ ಪ್ರವೇಶ ನೀಡಲು ಜೆಇಇ ಅಡ್ವಾನ್ಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈಗಾಗಲೇ ದೇಶದಲ್ಲಿನ ಬಹುತೇಕ ಎಲ್ಲ ರಾಜ್ಯಗಳ ಶಾಲಾ ಕಾಲೇಜು ಪರೀಕ್ಷೆಗಳನ್ನು ಈಗಾಗಲೇ ಮುಂದೂಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.