ಕೋವಿಡ್ -19 ಲಸಿಕೆಗಾಗಿ ಎರಡನೇ ಡ್ರೈ ರನ್ ನಾಳೆ ಎಲ್ಲಾ ರಾಜ್ಯಗಳಲ್ಲಿ ನಡೆಯಲಿದ್ದು, ಹರಿಯಾಣದಲ್ಲಿ ಇಂದು ಡ್ರೈ ರನ್ ನಡೆಯಲಿದೆ. ಮೊದಲ ಹಂತದ ಡ್ರೈ ರನ್ ಜನವರಿ 2ರಂದು ನಡೆದಿತ್ತು. ಈ ವ್ಯವಸ್ಥೆಯು ಕೋವಿಡ್ -19ರ ವಿರುದ್ಧ ಲಸಿಕೆ ಹಾಕಲು ಮತ್ತು ಲಾಜಿಸ್ಟಿಕ್ಸ್ ಹಾಗೂ ತರಬೇತಿಯಲ್ಲಿ ಲೋಪದೋಷಗಳನ್ನು ಪರಿಶೀಲಿಸಲಿದೆ.
ಈ ಹಿನ್ನೆಲೆ ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಸಭೆ ನಡೆಸಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಲಸಿಕೆ ಹೊರತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಹರ್ಷವರ್ದನ್ ಕಳೆದ ವಾರ ಡ್ರೈ ರನ್ ನಡೆದಾಗ ಹೇಳಿದ್ದರು.