ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 83,883 ಪ್ರಕರಣಗಳು ಪತ್ತೆಯಾಗಿವೆ. 1,043 ಮಂದಿ ಮಹಾಮಾರಿ ಸೋಂಕಿನಿಂದ ಸಾವನ್ನಪ್ಪಿದ್ದರೆ, ಮೃತರ ಒಟ್ಟು ಸಂಖ್ಯೆ 67,376ಕ್ಕೆ ಏರಿದೆ.
24 ಗಂಟೆಗಳಲ್ಲಿ 83,883 ಕೋವಿಡ್ ಕೇಸ್ ಪತ್ತೆ... 1,043 ಮಂದಿ ಸೋಂಕಿಗೆ ಬಲಿ! - corona cases news in India
ದೇಶದಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ನಿಲ್ಲುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 83,883 ಪ್ರಕರಣಗಳು ಪತ್ತೆಯಾಗಿದ್ದರೆ, 1,043 ಮಂದಿ ಬಲಿಯಾಗಿದ್ದಾರೆ.
![24 ಗಂಟೆಗಳಲ್ಲಿ 83,883 ಕೋವಿಡ್ ಕೇಸ್ ಪತ್ತೆ... 1,043 ಮಂದಿ ಸೋಂಕಿಗೆ ಬಲಿ! Corona update news in India](https://etvbharatimages.akamaized.net/etvbharat/prod-images/768-512-8659879-thumbnail-3x2-million-thumbnail.jpg)
ಒಂದೇ ದಿನದಲ್ಲಿ ಇಷ್ಟೊಂದು ಪಾಸಿಟಿವ್ ಕೇಸ್ಗಳು ಪತ್ತೆಯಾಗಿರುವುದು ಇದೇ ಮೊದಲಾಗಿದೆ. ಈ ಮೂಲಕ ದೇಶದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ. ಸದ್ಯ 8,15,538 ಆ್ಯಕ್ಷಿವ್ ಕೇಸ್ಗಳಿವೆ. ಈವರೆಗೆ 29,70,493 ಜನರು ಕೋವಿಡ್ನಿಂದ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸೆಪ್ಟಂಬರ್ 2ರವರೆಗೆ 4 ಕೋಟಿಗೂ ಅಧಿಕ (4,55,09,380) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,72,179 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಸೆ. 2ರವರೆಗೆ ಒಂದೇ ದಿನದಲ್ಲಿ ನಡೆಸಿದ ಟೆಸ್ಟ್ಗಳ ಪೈಕಿ ಇದು ದಾಖಲೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.