ನವದೆಹಲಿ: ಇತ್ತೀಚೆಗೆ ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಆದರೆ ಈ ಆಸ್ಪತ್ರೆಗಳಲ್ಲಿ ಹಲವು ರೋಗಿಗಳನ್ನು ದಾಖಲಿಸುವ ಮೊದಲು ದರದ ವಿವರಗಳನ್ನು ಹಂಚಿಕೊಳ್ಳುತ್ತಿಲ್ಲ ಎಂಬ ಹಲವಾರು ದೂರುಗಳು ಬರುತ್ತಿವೆ. ಈ ಆಸ್ಪತ್ರೆಗಳು ಕೊರೊನಾ ರೋಗಿಗಳಿಂದ ಫೋನ್ ಕರೆಗಳನ್ನು ತೆಗೆದುಕೊಳ್ಳಲು ನಿರಾಕರಿಸುತ್ತವೆ ಅಥವಾ ಆರಂಭಿಕ ಠೇವಣಿ ಇಡುವ ಮೂಲಕ ಪ್ರವೇಶ ಪಡೆಯಲು ಒತ್ತಾಯಿಸುತ್ತವೆ ಎಂದು ಆರೋಪಿಸಲಾಗಿದೆ.
ದೆಹಲಿಯ ಅನೇಕ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಯ ದರದಲ್ಲಿ ಪಾರದರ್ಶಕತೆ ಹೊಂದಿಲ್ಲ ಎಂಬ ಆರೋಪ ಕೇಳಿಬಂದಿದೆ. ಕಳೆದ ಕೆಲವು ದಿನಗಳಲ್ಲಿ, ಈಟಿವಿ ಭಾರತ ಈ ನಿಟ್ಟಿನಲ್ಲಿ ಅನೇಕ ಆಸ್ಪತ್ರೆಗಳೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆದರೆ ಹೆಚ್ಚಿನವರು ಕೊರೊನಾ ರೋಗಿಗಳಿಗೆ ವಿಧಿಸುವ ದರವನ್ನು ಬಹಿರಂಗಪಡಿಸಲು ಸಿದ್ಧರಿರಲಿಲ್ಲ.
ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸ್ಥಿತಿ ಸುಧಾರಿಸುತ್ತಿದೆ. ದೆಹಲಿಯಲ್ಲಿ 1,22,793 ಪ್ರಕರಣಗಳಿದ್ದು, 3,628 ಜನರು ಈವರೆಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 16031 ಸಕ್ರಿಯ ಪ್ರಕರಣಗಳಿವೆ. ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಾಗಿರುವ 12,000 ಹಾಸಿಗೆಗಳು ಖಾಲಿಯಾಗಿವೆ ಎಂಬುದು ಗಮನಿಸಬೇಕಾದ ಸಂಗತಿ.
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಅತಿಯಾದ ಶುಲ್ಕ ವಿಧಿಸುತ್ತಿದ್ದವು. ಇದರಿಂದಾಗಿ ಚಿಕಿತ್ಸಾ ವೆಚ್ಚವನ್ನು ಸರ್ಕಾರವು ವಿಭಿನ್ನ ವರ್ಗಗಳನ್ನಾಗಿ ಮಾಡಿತು. ಆಸ್ಪತ್ರೆಗಳಿಗೆ ಅಧಿಸೂಚನೆ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸದಂತೆ ನಿರ್ದೇಶಿಸಲಾಯಿತು.
ಖಾಸಗಿ ಆಸ್ಪತ್ರೆಯಲ್ಲಿ ಒಂದು ದಿನಕ್ಕೆ ಕೊರೊನಾ ಚಿಕಿತ್ಸೆಯ ದರ...