ಜಬಲ್ಪುರ್(ಮಧ್ಯಪ್ರದೇಶ):ಮಹಿಳೆಯೋರ್ವಳಿಗೆ ಕೊರೊನಾ ಶಂಕೆ ವ್ಯಕ್ತಪಡಿಸಿ, ಆಕೆಯನ್ನ ಕೊಠಡಿಯೊಂದರಲ್ಲಿ ಕೂಡಿ ಹಾಕಿರುವ ಘಟನೆ ಜಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷದ ಮಗಳೊಂದಿಗೆ ತಾಯಿಯನ್ನ ಕೂಡಿ ಹಾಕಲಾಗಿದ್ದು, ಇದೀಗ ವಿಡಿಯೋ ಮಾಡಿ ತನ್ನ ಸಂಬಂಧಿಕರಿಗೆ ಕಳಿಸಿದ್ದಾಳೆ.
ಕೊರೊನಾ ಶಂಕೆ: ರೂಂನಲ್ಲಿ ತಾಯಿ ಜತೆ 8 ವರ್ಷದ ಮಗಳು ಲಾಕ್! - madhypradesh news
ಮಹಿಳೆಯೋರ್ವಳಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತಪಡಿಸಿ, ಆಕೆಯನ್ನ 8 ವರ್ಷದ ಮಗಳೊಂದಿಗೆ ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ.
ರಾಮ್ಪುರ್ದ ಆದರ್ಶ ನಗರದಲ್ಲಿ ವಾಸವಾಗಿದ್ದ ಮಹಿಳೆ ಬೇರೊಂದು ನಗರದಲ್ಲಿ ಉಳಿದುಕೊಂಡಿದ್ದಳು. ಇದೀಗ ಎರಡು ದಿನಗಳ ಹಿಂದೆ ಇಲ್ಲಿಗೆ ಆಗಮಿಸಿದ್ದು, ಆಕೆಯಲ್ಲಿ ನೆಗಡಿ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಕ್ವಾರಂಟೈನ್ ಮಾಡಿ ರೂಂನಲ್ಲಿ ಕೂಡಿ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಬೇರೆಯವರು ಈ ಮನೆಯ ಕಡೆ ಹೋಗದಂತೆ ನೋಟಿಸ್ ಬೋರ್ಡ್ ಸಹ ಹಚ್ಚಿದ್ದಾರೆ.
ಈಕೆಯ ಗಂಡ ಕೋರ್ಟ್ನಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರ ನಡುವೆ ವೈಮನಸು ಉಂಟಾಗಿರುವ ಕಾರಣ ಇದೀಗ ಡಿವೋರ್ಸ್ ಪಡೆದುಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ರೂಂನಲ್ಲಿ ಬಂಧಿಯಾಗಿರುವ ಮಹಿಳೆ ತನ್ನ ಸಂಕಷ್ಟ ಹೊರಹಾಕಿದ್ದು, ಯಾರಾದರೂ ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾಳೆ.