ಶ್ರೀನಗರ:ಕೊರೊನಾ ಲಾಕ್ಡೌನ್ ಕಣಿವೆಯಲ್ಲಿ 27 ದಿನಕ್ಕೆ ಕಾಲಿಟ್ಟಿದ್ದು, ಈವರೆಗೆ ಸುಮಾರು 200 ಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಲಾಕ್ಡೌನ್ ಬಿಗಿಗೊಳಿಸಲಾಗಿದ್ದು, ಜನರ ಓಡಾಟ ಮತ್ತು ಅನಗತ್ಯ ಸಭೆ ಸೇರುವುದರ ಮೇಲೆ ಹೇರಿದ್ದ ನಿರ್ಬಂಧ ಮುಂದುವರಿದಿದೆ. ಕಾಶ್ಮೀರದ ಎಲ್ಲಾ ಮುಖ್ಯ ರಸ್ತೆಗಳನ್ನು ಭದ್ರತಾ ಪಡೆ ಬಂದ್ ಮಾಡಿದ್ದು, ಜನಸಂಚಾರ ,ವಾಹನ ಸಂಚಾರ ನಿಷೇಧಿಸಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ತುರ್ತು ಓಡಾಡಕ್ಕೆ ಅವಕಾಶ ನೀಡಲಾಗಿದೆ. ರೆಡ್ ಅಲರ್ಟ್ ಘೋಷಣೆಯಾಗಿರುವ ಏರಿಯಾಗಳಲ್ಲಿ ಲಾಕ್ಡೌನ್ ಉಲ್ಲಂಘಿಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ. ಕಣಿವೆಯಾದ್ಯಂತ ಮಾರುಕಟ್ಟೆಯನ್ನು ಮುಚ್ಚಿಸಲಾಗಿದೆ. ಕೇವಲ ಮೆಡಿಕಲ್ ಸ್ಟೋರ್ಗಳು ಮತ್ತು ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಎಲ್ಲಾ ಶಾಲಾ-ಕಾಲೇಜುಗಳು ಬೀಗ ಹಾಕಿವೆ. ಇನ್ನು ಪಾರ್ಕ್ಗಳು,ರೆಸ್ಟೋರೆಂಟ್ಗಳು,ಕ್ಲಬ್ಗಳು ಮುಂತಾದ ಸಾರ್ವಜನಿಕರು ಸೇರುಸ ಸ್ಥಳಗಳನ್ನು ಪ್ರಧಾನಿ ಮೋದಿ ಲಾಕ್ಡೌನ್ ಆದೇಶ ಹೊರಡಿಸುವ ಒಂದು ವಾರದ ಮುಂಚೆಯೇ ಕ್ಲೋಸ್ ಮಾಡಲಾಗಿತ್ತು. ಮಾರ್ಚ್ 24-25 ರ ಮಧ್ಯರಾತ್ರಿ ಪ್ರಧಾನಿ ಮೋದಿ ಕೊರೊನಾ ನಿಯಂತ್ರಣಕ್ಕೆ ಇಡೀ ದೇಶಾದ್ಯಂತ ಲಾಕ್ಡೌನ್ ಜಾರಿಗೆ ತಂದರೆ, ಕಾಶ್ಮೀರದಲ್ಲಿ ಮಾರ್ಚ್ 22 ರಿಂದಲೇ ಲಾಕ್ಡೌನ್ ಜಾರಿಗೊಂಡಿತ್ತು. ಆದರೆ ಆರೋಗ್ಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳನ್ನು ನಿರ್ಬಂಧ ಮುಕ್ತಗೊಳಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಈವರೆಗೆ 270 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 222 ಕಾಶ್ಮೀರದಲ್ಲಿ 222 ಹಾಗೂ 48 ಪ್ರಕರಣಗಳು ಜಮ್ಮುವಿನಲ್ಲಿ ಪತ್ತೆಯಾಗಿವೆ. ಒಟ್ಟು ಸೋಂಕಿತರಲ್ಲಿ 16 ಜನ ಸಂಪೂರ್ಣ ಗುಣಮುಖರಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಒಟ್ಟು 53 ಸಾವಿರ ಜನರು ಹೋಮ್ ಕ್ವಾರಂಟೈನ್ ಸೇರಿ ಸರ್ಕಾರ ವ್ಯವಸ್ಥೆ ಮಾಡಿದ ಕ್ವಾರಂಟೈನ್ನಲ್ಲಿದ್ದಾರೆ. ಇದರಲ್ಲಿ 8,581 ಕೊರೊನಾ ಶಂಕಿತರಿದ್ದು, ಅವರನ್ನು ಕ್ವಾರಂಟೈನ್ ಮಾಡಿ ತೀವ್ರ ನಿಗಾ ವಹಿಸಲಾಗಿದೆ. ಹಾಗೂ 354 ಜನ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ. 250 ಜನರನ್ನು ಆಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿಡಲಾಗಿದೆ. 30,634 ಜನ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.