ನವದೆಹಲಿ: ಕೋವಿಡ್ ಅಬ್ಬರಕ್ಕೆ ಭಾರತ ತಲ್ಲಣಗೊಂಡಿದ್ದು, ಸೋಂಕಿತರ ಸಂಖ್ಯೆ 4 ಲಕ್ಷ ಗಡಿ, ಸಾವಿನ ಸಂಖ್ಯೆ 13 ಸಾವಿರ ಗಡಿ ದಾಟಿದೆ.
ಕೊರೊನಾರ್ಭಟ: ದೇಶದಲ್ಲಿ 4 ಲಕ್ಷ ಗಡಿ ದಾಟಿದ ಕೇಸ್ಗಳು, 13 ಸಾವಿರಕ್ಕೂ ಅಧಿಕ ಬಲಿ
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,10,461ಕ್ಕೆ ಹಾಗೂ ಮೃತರ ಸಂಖ್ಯೆ 13,254ಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕೊರೊನಾ ಕೇಸ್
ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 15,413 ಸೋಂಕಿತರು ಪತ್ತೆಯಾಗಿದ್ದು, 306 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಪ್ರಕರಣಗಳ ಸಂಖ್ಯೆ 4,10,461ಕ್ಕೆ ಹಾಗೂ ಮೃತರ ಸಂಖ್ಯೆ 13,254ಕ್ಕೆ ಏರಿಕೆಯಾಗಿದೆ.
ಚೇತರಿಕೆಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದ್ದು, ಒಟ್ಟು ಸೋಂಕಿತರ ಪೈಕಿ 2,27,756 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 1,69,451 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.