ಮುಂಬೈ: ಶ್ರೀಮಂತ ಕುಟುಂಬ ಸದಸ್ಯರು ತಾವು ಇಷ್ಟ ಬಂದ ಕಡೆಗೆ ಪ್ರಯಾಣಿಸಲು ಅನುಮತಿ ನೀಡಿದ್ದಕ್ಕಾಗಿ ಗೃಹ ಕಾರ್ಯದರ್ಶಿಗೆ ಕಡ್ಡಾಯ ರಜೆಯ ಶಿಕ್ಷೆ ನೀಡಿ ಅವರನ್ನು ಮಹಾರಾಷ್ಟ್ರ ಸರ್ಕಾರ ಮನೆಗೆ ಕಳುಹಿಸಿದೆ.
ಏಪ್ರಿಲ್ 23ರಂದು ಡಿಎಚ್ಎಫ್ಎಲ್ ಸಂಸ್ಥೆಯ ವಾಧವನ್ ಕುಟುಂಬದ 23 ಮಂದಿಗೆ ಮುಂಬೈನ ಖಂಡಾಲ್ ಪ್ರದೇಶದಿಂದ ಮಹಾಬಲೇಶ್ವರ್ಗೆ ತೆರಳುವುದಕ್ಕೆ ಪೊಲೀಸ್ ಗೃಹ ಕಾರ್ಯದರ್ಶಿ ಅಮಿತಾಬ್ ಗುಪ್ತಾ ಅನುಮತಿ ನೀಡಿದ್ದರು.
ಈ ಕುಟುಂಬದವರು ತಮಗೆ ಪರಿಚಯವಿದ್ದರು. ತುರ್ತು ಭೇಟಿ ನೀಡಬೇಕಾದ ಕಾರಣ ತೆರಳಲು ಸಹಕರಿಸಬೇಕು ಎಂದು ಮನವಿ ಸಲ್ಲಿಸಿದ್ದರು ಗುಪ್ತಾ ತಿಳಿಸಿದ್ದಾರೆ.
ಆದ್ರೆ, ಮಹಾಬಲೇಶ್ವರ್ಗೆ ಕುಟುಂಬ ಸದಸ್ಯರು ತಲುಪುತ್ತಿದ್ದಂತೆ ಅಲ್ಲಿನ ಪೊಲೀಸರು, 'ನೀವು ಹೇಗೆ ಇಲ್ಲಿಗೆ ಬಂದಿರಿ..' ಎಂದೆಲ್ಲಾ ಪ್ರಶ್ನಿಸಿದ್ದಾರೆ. ಈ ವೇಳೆ ಗೃಹ ಕಾರ್ಯದರ್ಶಿ ನೀಡಿದ ಪತ್ರ ತೋರಿಸಿದ್ದಾರೆ. ಆದರೆ ಇದಕ್ಕೆ ಮಣಿಯದ ಪೊಲೀಸರು ಅವರನ್ನು ಮುಲಾಜಿಲ್ಲದೆ ಕ್ವಾರಂಟೈನ್ ಶಿಬಿರಕ್ಕೆ ಹಾಕಿದ್ದರು.
ಅಲ್ಲಿನ ಪೊಲೀಸರು ನೀಡಿದ ಮಾಹಿತಿ, ದಾಖಲೆಗಳ ಆಧಾರದ ಮೇಲೆ ಇದೀಗ ಅಮಿತಾಬ್ ಗುಪ್ತಾ ಅವರಿಗೆ ಕಡ್ಡಾಯ ರಜೆ ನೀಡಿ ಸೇವೆಯಿಂದ ತಾತ್ಕಾಲಿಕ ಮುಕ್ತಿ ನೀಡಲಾಗಿದೆ. ಸರ್ಕಾರ ಇದೀಗ ಹಿರಿಯ ಅಧಿಕಾರಿಗೆ ಪೊಲೀಸ್ ಗೃಹ ಇಲಾಖೆ ಕಾರ್ಯದರ್ಶಿ ಜವಾಬ್ದಾರಿ ವಹಿಸಿದೆ.