ನವದೆಹಲಿ:ದೇಶದಲ್ಲಿ ಇಂದು ಸಂಜೆ ವೇಳೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 11 ಸಾವಿರದ 933ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 392ಕ್ಕೆ ತಲುಪಿದೆ. ಇದರಲ್ಲಿ 10 ಸಾವಿರದ 197 ಆ್ಯಕ್ಟೀವ್ ಪ್ರಕರಣಗಳಾಗಿದ್ರೆ, 1 ಸಾವಿರದ 344 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ: ದೇಶದಲ್ಲಿ ಕೊರೊನಾಗೆ ಬಲಿಯಾದ ಸಂಖ್ಯೆ 392ಕ್ಕೆ ಏರಿಕೆ - ದೇಶದಲ್ಲಿ ಕೋವಿಡ್‌ಗೆ ಮೃತರ ಸಂಖ್ಯೆ 392ಕ್ಕೆ ಏರಿಕೆ
ದೇಶದಲ್ಲಿ ಕೊರೊನಾ ಸೋಂಕು ತಗುಲುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಸಂಜೆ ವೇಳೆಗೆ ಕೋವಿಡ್19 ಸೋಂಕಿತರ ಸಂಖ್ಯೆ 11 ಸಾವಿರದ 933ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಹರ್ಷವರ್ಧನ್
ಜನವರಿ 7 ರಂದು ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಕೂಡಲೇ ಸ್ಪಂದಿಸಿದ ಮೊದಲ ದೇಶ ಭಾರತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಚೀನಾದಲ್ಲಿ 2020ರ ಜನವರಿ 7 ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಈ ಸಂಬಂಧ ನಾವು ಜನವರಿ 8 ರಂದೇ ಕಾರ್ಯಪ್ರವೃತ್ತರಾದೆವು. ಜ.17 ರಂದು ತಜ್ಞರ ತಂಡದೊಂದಿಗೆ ಸಭೆ ನಡೆಸಿದ ಬಳಿಕ ಆರೋಗ್ಯ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿರುವುದಾಗಿ ಸಚಿವರು ವಿವರಿಸಿದ್ದಾರೆ.
Last Updated : Apr 15, 2020, 7:47 PM IST