ಅಮರಾವತಿ (ಆಂಧ್ರ ಪ್ರದೇಶ): ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕೊರೊನಾ ರೋಗಿಗಳ ಶವಸಂಸ್ಕಾರದ ಅಮಾನವೀಯ ಘಟನೆಗಳು ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಲೇ ಇವೆ.
ಇತ್ತೀಚಿಗೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಮೂರು ಕೊರೊನಾ ಸೋಂಕಿತರ ಶವಗಳನ್ನು ಜೆಸಿಬಿಯ ಸಹಾಯದಿಂದ ಅಮಾನವೀಯವಾಗಿ ಹೂಳಲಾಗಿದೆ.
ಜೆಸಿಬಿ ಮೂಲಕ ಕೊರೊನಾ ಸೋಂಕಿತರ ಶವ ಸಂಸ್ಕಾರ ಈ ಸುದ್ದಿಯನ್ನು ಈನಾಡು 'ಬರಿಯಲ್ ಆಫ್ ಕೋವಿಡ್ ಡೆತ್ ಇನ್ ಪೆನಾ' ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ನೆಲ್ಲೂರು ಜಿಲ್ಲಾ ಜಂಟಿ ಕಲೆಕ್ಟರ್ ಪ್ರಭಾಕರ್ ರೆಡ್ಡಿ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಎಲ್ಲ ಮಾನದಂಡಗಳನ್ನು ಅನುಸರಿಸಿ ಮೂರು ಕೊರೊನಾ ಸೋಂಕಿತರ ಶವಗಳನ್ನು ನೆಲ್ಲೂರಿನ ಪೆನಾ ನದಿಯ ದಡದಲ್ಲಿ ಹೂಳಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಜೆಸಿಬಿಯಿಂದ ಶವಗಳನ್ನು ಹೂಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.