ಹೈದರಾಬಾದ್:ಇಡೀ ವಿಶ್ವವನ್ನು ಬೆಚ್ಚಿಬೀಳಿಸಿರುವ ಕಿಲ್ಲರ್ ಕೋವಿಡ್19 ಭಾರತಕ್ಕೆ ಎಂಟ್ರಿಯಾಗಿ ಆರ್ಥಿಕತೆಗೆ ಮಹಾ ಪೆಟ್ಟು ನೀಡಿದೆ. ಮಾರ್ಚ್ 24 ರಂದು ಲಾಕ್‌ಡೌನ್ ಘೋಷಣೆ ಮಾಡಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಲಾಕ್‌ಡೌನ್‌ಗೂ ಎರಡು ದಿನಗಳ ಮೊದಲೇ 415 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಾರ್ಚ್ 23 ರಂದು 19 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದವು.
ಮಾರ್ಚ್ 22 ರಿಂದ ಏಪ್ರಿಲ್ 20ರವರಿಗೆ ಸೋಂಕು ತಗುಲಿ ಮೃತಪಟ್ಟವರ ಕುರಿತ ಅಂಕಿ ಅಂಶಗಳನ್ನು ನೋಡೋದಾದ್ರೆ, ಮಾರ್ಚ್ 22 ರಂದು 7 ಮಂದಿ ಮೃತಪಟ್ಟಿದ್ದರು. ಇದೀಗ ಆ ಸಂಖ್ಯೆ 590ಕ್ಕೆ ತಲುಪಿದೆ. ಒಂದು ತಿಂಗಳ ಅವಧಿಯಲ್ಲಿ ಶೇಕಡಾ 8,328 ರಷ್ಟು ಏರಿಕೆ ಯಾಗಿದೆ.