ಹೊಸದಿಲ್ಲಿ :ಕೊರೊನಾ ವೈರಸ್ ವ್ಯಾಪಕವಾಗಿ ಹರಡುವ ಆತಂಕದ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿ ದೆಹಲಿ ಜೈಲುಗಳಲ್ಲಿನ ಕೆಲ ಕೈದಿಗಳು ಬಿಡುಗಡೆಯ ಭಾಗ್ಯ ಪಡೆಯಲಿದ್ದಾರೆ. ಇಲ್ಲಿನ ಜೈಲುಗಳು ಮಿತಿಮೀರಿದ ಕೈದಿಗಳಿಂದಾಗಿ ಗಿಜುಗುಡುತ್ತಿವೆ. ಇದರಿಂದ ಜೈಲುಗಳಲ್ಲಿ ಕೊರೊನಾ ವೈರಸ್ ಹರಡುವ ಆತಂಕ ಎದುರಾಗಿದೆ. ಹೀಗಾಗಿ ಕೆಲ ಕೈದಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ.
ಕೈದಿಗಳಿಗೆ ಬಿಡುಗಡೆಯ ಭಾಗ್ಯ ತಂದ ಕೊರೊನಾ ವೈರಸ್!? - ದೆಹಲಿ ಸರ್ಕಾರ ಸೋಮವಾರ ಹೈಕೋರ್ಟಿಗೆ ತಿಳಿಸಿದೆ
ದೆಹಲಿ ವ್ಯಾಪ್ತಿಯ ಜೈಲುಗಳು ಮಿತಿಮೀರಿದ ಕೈದಿಗಳ ಸಂಖ್ಯೆಯಿಂದ ಗಿಜಿಗುಡುತ್ತಿವೆ. ಇದರಿಂದ ಜೈಲುಗಳಲ್ಲಿ ಕೊರೊನಾ ವೈರಸ್ ಹರಡುವ ಆತಂಕವಿದೆ. ಹೀಗಾಗಿ ಕೆಲ ಕೈದಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಸೋಮವಾರ ಹೈಕೋರ್ಟ್‌ಗೆ ತಿಳಿಸಿದೆ.

ಕೊರೊನಾ
ಬಿಡುಗಡೆಗೆ ಅರ್ಹ ಕೈದಿಗಳಿಗೆ ವಿಶೇಷ ಪೆರೋಲ್ ನೀಡಲು ಅನುವಾಗುವಂತೆ ಬಂಧೀಖಾನೆ ಕಾನೂನು ಮಾರ್ಪಾಟು ಮಾಡಲು ಸಿದ್ಧವಿರುವುದಾಗಿ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ಸುಬ್ರಮೋನಿಯಂ ಪ್ರಸಾದ್ ಅವರ ಪೀಠಕ್ಕೆ ದೆಹಲಿ ಸರ್ಕಾರ ತಿಳಿಸಿತು.
ದೆಹಲಿ ಜೈಲುಗಳಲ್ಲಿರುವ ಕೈದಿಗಳ ಆರೋಗ್ಯ ರಕ್ಷಣೆಯ ಕ್ರಮಗಳ ಕುರಿತು ಪರಿಶೀಲನೆ ನಡೆಸುವಂತೆ ವಕೀಲರಾದ ಶೋಭಾ ಗುಪ್ತಾ ಮತ್ತು ರಾಜೇಶ ಸಚದೇವಾ ಅವರು ಕೋರ್ಟ್ ಮೊರೆ ಹೋಗಿದ್ದರು.