ರಾಷ್ಟ್ರ | ಪ್ರಕರಣಗಳು | ಪ್ರತಿ 1ಮಿಲಿಯನ್ಗೆ ಇಷ್ಟು ಸೋಂಕು | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
ಜಗತ್ತು | 22,56,844 | 290.24 | 5,71,851 | 1,54,350 |
ಅಮೆರಿಕ | 7,12,184 | 2,161.04 | 59,532 | 32,823 |
ಸ್ಪೇನ್ | 1,92,282 | 4,082.39 | 74,662 | 20,162 |
ಇಟಲಿ | 1,72,434 | 2,862.29 | 42,727 | 22,745 |
ಜರ್ಮನಿ | 1,41,987 | 1,707.62 | 76,703 | 4,377 |
ಯುನೈಟೆಡ್ ಕಿಂಗ್ಡಮ್ (ಯುಕೆ) | 1,14,217 | 1,719.22 | — | 15,464 |
ಫ್ರಾನ್ಸ್ | 1,09,252 | 1,628.78 | 34,420 | 18,681 |
ಚೀನಾ | 82,719 | 59 | 77,029 | 4,632 |
ಇರಾನ್ | 80,868 | 970.44 | 55,987 | 5,031 |
ಟರ್ಕಿ | 78,546 | 944.57 | 8,631 | 1,769 |
ಬೆಲ್ಜಿಯಂ | 37,183 | 3,226.44 | 8,348 | 5,453 |
ರಷ್ಯಾ | 36,793 | 250.73 | 3,057 | 313 |
ಬ್ರೆಜಿಲ್ | 34,221 | 161.93 | 14,026 | 2,171 |
ಕೆನಡಾ | 32,412 | 853.42 | 10,862 | 1,346 |
ನೆದರ್ಲೆಂಡ್ | 31,589 | 1,810.15 | — | 3,601 |
ಸ್ವಿಟ್ಜರ್ಲೆಂಡ್ | 27,186 | 3,166.11 | 16,400 | 1,366 |
ಪೋರ್ಚುಗಲ್ | 19,685 | 1,915.51 | 610 | 687 |
ಭಾರತ | 14,792 | 10.87 | 2,015 | 488 |
ನಿಲ್ಲದ ಕೊರೊನಾ ಅಟ್ಟಹಾಸ: ಈವರೆಗೂ 22.56 ಲಕ್ಷ ಸೋಂಕು, 1.54 ಲಕ್ಷ ಬಲಿ...
23:30 April 18
ಜಗತ್ತಿನಲ್ಲಿ 22,56,844 ಮುಟ್ಟಿದ ಪ್ರಕರಣಗಳು...1,54,350 ಸಾವು ವರದಿ
22:59 April 18
ಕೊರೊನಾ ಸೋಂಕು ಎರಡಂಕಿ ದಾಟದ ರಾಜ್ಯಗಳಿವು?
ಕ್ರ.ಸಂ. | ರಾಜ್ಯ/ಕೇಂದ್ರಾಡಳಿತ ಪ್ರದೇಶ | ಒಟ್ಟು ಪ್ರಕರಣ (76 ವಿದೇಶಿಗರು ಸೇರಿ) | ಗುಣಮುಖ/ಡಿಸ್ಚಾರ್ಜ್ | ಸಾವು |
---|---|---|---|---|
1 | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 12 | 11 | 0 |
2 | ಆಂಧ್ರಪ್ರದೇಶ | 603 | 42 | 15 |
3 | ಅರುಣಾಚಲ ಪ್ರದೇಶ | 1 | 0 | 0 |
4 | ಅಸ್ಸೋಂ | 35 | 9 | 1 |
5 | ಬಿಹಾರ್ | 85 | 37 | 2 |
6 | ಚಂಡೀಗಡ | 21 | 9 | 0 |
7 | ಛತ್ತೀಸ್ಗಡ | 36 | 24 | 0 |
8 | ದೆಹಲಿ | 1707 | 72 | 42 |
9 | ಗೋವಾ | 7 | 6 | 0 |
10 | ಗುಜರಾತ್ | 1272 | 88 | 48 |
11 | ಹರಿಯಾಣ | 225 | 43 | 3 |
12 | ಹಿಮಾಚಲ ಪ್ರದೇಶ | 38 | 16 | 1 |
13 | ಜಮ್ಮು ಮತ್ತು ಕಾಶ್ಮೀರ | 328 | 42 | 5 |
14 | ಜಾರ್ಖಾಂಡ್ | 33 | 0 | 2 |
15 | ಕರ್ನಾಟಕ | 371 | 92 | 13 |
16 | ಕೇರಳ | 396 | 255 | 3 |
17 | ಲಡಾಖ್ | 18 | 14 | 0 |
18 | ಮಧ್ಯಪ್ರದೇಶ | 1355 | 69 | 69 |
19 | ಮಹಾರಾಷ್ಟ್ರ | 3323 | 331 | 201 |
20 | ಮಣಿಪುರ | 2 | 1 | 0 |
21 | ಮೇಘಾಲಯ | 11 | 0 | 1 |
22 | ಮಿಜೋರಾಂ | 1 | 0 | 0 |
23 | ನಾಗಾಲ್ಯಾಂಡ್# | 0 | 0 | 0 |
24 | ಒಡಿಸ್ಸಾ | 60 | 21 | 1 |
25 | ಪುದುಚೆರಿ | 7 | 3 | 0 |
26 | ಪಂಜಾಬ್ | 202 | 27 | 13 |
27 | ರಾಜಸ್ತಾನ | 1229 | 183 | 11 |
28 | ತಮಿಳುನಾಡು | 1323 | 283 | 15 |
29 | ತೆಲಂಗಾಣ | 791 | 186 | 18 |
30 | ತ್ರಿಪುರ | 2 | 1 | 0 |
31 | ಉತ್ತರಾಖಾಂಡ್ | 42 | 9 | 0 |
32 | ಉತ್ತರ ಪ್ರದೇಶ | 969 | 86 | 14 |
32 | ಪಶ್ಚಿಮ ಬಂಗಾಳ | 287 | 55 | 10 |
ಒಟ್ಟು | 14792* | 2015 | 488 | |
*ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ | ||||
#ನಾಗಾಲ್ಯಾಂಡ್ ರೋಗಿಯನ್ನು ಅಸ್ಸೋಂಗೆ ಶಿಫ್ಟ್ |
22:39 April 18
20 ತಿಂಗಳ ಮಗುವಿಗೆ ಸೋಂಕು...
- ದೆಹಲಿಯ ಏಮ್ಸ್ ಆಸ್ಪತ್ರೆಯ ನರ್ಸ್ ಮತ್ತು ಆಕೆಯ 20 ತಿಂಗಳ ಮಗುವಿಗೂ ಸೋಂಕು
- ನರ್ಸ್ನಿಂದ ತನ್ನ ಪತಿಗೂ ಕೋವಿಡ್-19 ಸೋಂಕು ತಗುಲಿರುವ ಸಾಧ್ಯತೆ
- ಆರ್ಎಂಎಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರ್ಸ್ ಪತಿಯನ್ನು ಹೆಲ್ತ್ಕೇರ್ಗೆ ಶಿಫ್ಟ್
- ಏಮ್ಸ್ ಅಧಿಕಾರಿಗಳಿಂದ ಮಾಹಿತಿ
- ದೆಹಲಿಯಲ್ಲಿ ಇಂದು 186 ಪ್ರಕರಣ, 1 ಸಾವು ಮತ್ತು 134 ಮಂದಿ ಗುಣಮುಖ
- ಈವರೆಗೂ 1893 ಪ್ರಕರಣ, 43 ಸಾವು ಮತ್ತು 207 ಮಂದಿ ಗುಣಮುಖ
20:59 April 18
ಮಧ್ಯ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 1402ಕ್ಕೆ ಏರಿಕೆ
- ಮಧ್ಯ ಪ್ರದೇಶದಲ್ಲಿ ಇಂದು 92 ಕೋವಿಡ್ 19 ಪ್ರಕರಣಗಳು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1402ಕ್ಕೆ ಏರಿಕೆ
- ಈವರೆಗೆ ಒಟ್ಟು 69 ಸಾವು ವರದಿ
20:58 April 18
ಲಾಕ್ಡೌನ್ ಸಡಿಲಿಕೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ
- ಲಾಕ್ಡೌನ್ ಸಡಿಲಿಕೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ
- ಏ.20 ರಿಂದ ಅನಗತ್ಯವಾಗಿ ದ್ವಿಚಕ್ರ ವಾಹನ ಸಂಚರಿಸುವಂತಿಲ್ಲ
- ಐಟಿ-ಬಿಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ
- ಮೇ 3 ರ ವರೆಗೂ ಮನೆಯಲ್ಲೇ ಕೆಲಸ
- ಕಟ್ಟಡ ನಿರ್ಮಾಣ ಕೆಲಸಗಳಿಗೂ ಬ್ರೇಕ್
- ಈ ಹಿಂದೆ ಕೆಲ ವಲಯಗಳಿಗೆ ಲಾಕ್ಡೌನ್ ವಿನಾಯಿತಿ ನೀಡಿದ್ದ ಸಿಎಂ ಬಿಎಸ್ವೈ
- ರಾಜ್ಯಾದ್ಯಂತ ಜನರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಸಡಿಲಿಕೆ ವಾಪಾಸ್
20:21 April 18
ಗುಜರಾತ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1376ಕ್ಕೆ ಏರಿಕೆ
- ಇಂದು ಗುಜರಾತ್ನಲ್ಲಿ 104 ಮಂದಿ ಕೊರೊನಾ ಸೋಂಕಿತರು ಪತ್ತೆ
- ಈ ಪೈಕಿ ಅಹಮದಾಬಾದ್ನಲ್ಲೇ 86 ಪ್ರಕರಣಗಳು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1376ಕ್ಕೆ ಏರಿಕೆ
20:01 April 18
ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 328 ಪಾಸಿಟಿವ್ ಪ್ರಕರಣಗಳು
- ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 328 ಪಾಸಿಟಿವ್ ಪ್ರಕರಣಗಳು
- ಮುಂಬೈ ನಗರವೊಂದರಲ್ಲೇ ಇಂದು 184, ಪುಣೆಯಲ್ಲಿ 78 ಕೊರೊನಾ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3648ಕ್ಕೆ ಏರಿಕೆ
- ರಾಜ್ಯದ ಆರೋಗ್ಯ ಇಲಾಖೆ ಮಾಹಿತಿ
19:37 April 18
- ಜಮ್ಮು-ಕಾಶ್ಮೀರದಲ್ಲಿ ಮತ್ತೆ 14 ಮಂದಿ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 341ಕ್ಕೆ ಏರಿಕೆ
18:46 April 18
ಆಸ್ಪತ್ರೆಯ 6 ಮಂದಿ ಸಿಬ್ಬಂದಿಗೆ ಸೋಂಕು: ಒಪಿಡಿ ಬಂದ್
- ಗುಜರಾತ್ನ ಭಾರುಚ್ನ ಸರ್ಕಾರಿ ಆಸ್ಪತ್ರೆಯಲ್ಲಿ 6 ಮಂದಿ ಸಿಬ್ಬಂದಿಗೆ ಕೊರೊನಾ ಅಂಟಿದ ಹಿನ್ನೆಲೆ
- ಆಸ್ಪತ್ರೆಯ ಹೊರ ರೋಗಿಗಳ ವಿಭಾಗ (OPD) ಬಂದ್
- ಒಬ್ಬ ಸ್ತ್ರೀರೋಗತಜ್ಞ, ಇಬ್ಬರು ಮಹಿಳಾ ವೈದ್ಯಕೀಯ ಸಿಬ್ಬಂದಿ, ಮೂವರು ಲ್ಯಾಬ್ ಸಿಬ್ಬಂದಿಗೆ ಸೋಂಕು
18:46 April 18
ಚೀನಾದಿಂದ ಭಾರತಕ್ಕೆ ಬಂತು 3 ಲಕ್ಷ ಟೆಸ್ಟಿಂಗ್ ಕಿಟ್ಗಳು
- ಚೀನಾದಿಂದ ಭಾರತಕ್ಕೆ ಬಂತು ಕೋವಿಡ್ 19 ರ್ಯಾಪಿಡ್ ಆ್ಯಂಟಿಬಾಡಿ ಟೆಸ್ಟಿಂಗ್ ಕಿಟ್ಗಳು
- ರಾಜಸ್ಥಾನ , ತಮಿಳುನಾಡಿಗೆ ಪೂರೈಕೆಯಾಗಲಿವೆ 3 ಲಕ್ಷ ಟೆಸ್ಟಿಂಗ್ ಕಿಟ್ಗಳು
- ಚೀನಾದಲ್ಲಿರುವ ಭಾರತೀಯ ರಾಯಭಾರಿ ವಿಕ್ರಮ್ ಮಿಸ್ರಿ ಮಾಹಿತಿ
18:06 April 18
ಕೊರೊನಾ ವಿರುದ್ಧದ ಹೋರಾಟಕ್ಕೆ ವಾಲ್ಮಾರ್ಟ್, ಫ್ಲಿಪ್ ಕಾರ್ಟ್ನಿಂದ 46 ಕೋಟಿ ರೂ. ದೇಣಿಗೆ
- ಕೊರೊನಾ ವಿರುದ್ಧದ ಹೋರಾಟಕ್ಕೆ ವಾಲ್ಮಾರ್ಟ್, ಫ್ಲಿಪ್ ಕಾರ್ಟ್ ನೆರವು
- 46 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಣೆ
- ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿಯಿಂದ ಮಾಹಿತಿ
18:06 April 18
ಕೋವಿಡ್ 19 ವಿರುದ್ಧ ಹೋರಾಡಿ ಸಾಯುವ ಪೊಲೀಸ್, ವೈದ್ಯಕೀಯ ಸಿಬ್ಬಂದಿಯ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ: ಸಿಎಂ ಕೇಜ್ರಿವಾಲ್
- ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪೊಲೀಸ್, ವೈದ್ಯಕೀಯ ಸಿಬ್ಬಂದಿ ಭಾಗಿಯಾಗಿದ್ದಾರೆ
- ಒಂದು ವೇಳೆ ಅವರು ಮೃತಪಟ್ಟರೆ ಅವರ ಕುಟುಂಬಗಳಿಗೆ 1 ಕೋಟಿ ರೂಪಾಯಿ ಪರಿಹಾರ
- ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ
18:03 April 18
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,792ಕ್ಕೆ ಏರಿಕೆ
- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 957 ಕೋವಿಡ್ 19 ಪ್ರಕರಣಗಳು, 36 ಸಾವು ವರದಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,792ಕ್ಕೆ, ಸಾವಿನ ಸಂಖ್ಯೆ 488ಕ್ಕೆ ಏರಿಕೆ
- ಸೋಂಕಿತರ ಪೈಕಿ 12289 ಆ್ಯಕ್ಟಿವ್ ಕೇಸ್ಗಳು, 2015 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
17:42 April 18
ರಾಜ್ಯದಲ್ಲಿ ಕಿಲ್ಲರ್ ಕೊರೊನಾಗೆ ಮತ್ತೊಂದು ಬಲಿ
ರಾಜ್ಯದಲ್ಲಿ ಕಿಲ್ಲರ್ ಕೊರೊನಾಗೆ ಮತ್ತೊಂದು ಬಲಿ, 25 ಹೊಸ ಪ್ರಕರಣಗಳು ವರದಿ
ಬೆಂಗಳೂರಿನಲ್ಲಿ 42 ವರ್ಷದ ವ್ಯಕ್ತಿ ಸಾವು
ಮೃತರ ಸಂಖ್ಯೆ 14ಕ್ಕೆ, ಸೋಂಕಿತರ ಸಂಖ್ಯೆ 384 ಏರಿಕೆ
ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
16:43 April 18
ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ 13.85%: ಲಾವ್ ಅಗರ್ವಾಲ್
- ಕೋವಿಡ್ 19 ಬಿಕ್ಕಟ್ಟಿನ ಕುರಿತು ಕೇಂದ್ರ ಆರೋಗ್ಯ ಇಲಾಖೆಯಿಂದ ಸುದ್ದಿಗೋಷ್ಠಿ
- 14,378 ಪ್ರಕರಣಗಳ ಪೈಕಿ ದೇಶಾದ್ಯಂತ 1992 ಜನರು ಗುಣಮುಖರಾಗಿದ್ದಾರೆ
- ಗುಣಮುಖರ ಪ್ರಮಾಣ ಶೇ.13.85 ರಷ್ಟಿದೆ
- ಕಳೆದ 14 ಗಂಟೆಗಳಲ್ಲಿ ಕೊರೊನಾ ಪೀಡಿತ ಜಿಲ್ಲೆಗಳ ಪೈಕಿ 45 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ
- ದೇಶದ 23 ರಾಜ್ಯಗಳ 47 ಜಿಲ್ಲೆಗಳಲ್ಲಿ ಪರಿಸ್ಥಿತಿ ಸುಧಾರಣೆ
- ಕರ್ನಾಟಕದ ಕೊಡಗು ಜಿಲ್ಲೆ ಹಾಗೂ ಪುದುಚೆರಿಯ ಮಾಹೆಯಲ್ಲಿ ಕಳೆದ 28 ದಿನಗಳಲ್ಲಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ
- ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿಕೆ
15:45 April 18
ಮಹಾರಾಷ್ಟ್ರದಲ್ಲಿ 29 ತಬ್ಲಿಘಿಗಳು ಅರೆಸ್ಟ್
- ಮಹಾರಾಷ್ಟ್ರದಲ್ಲಿ 29 ತಬ್ಲಿಘಿಗಳು ಅರೆಸ್ಟ್
- 24 ಮಂದಿ ವಿದೇಶಿಗರು ಸೇರಿ 29 ಮಂದಿಯ ಬಂಧನ
- ಅಹಮದ್ನಗರ ಜಿಲ್ಲಾ ಕೋರ್ಟ್ ಮುಂದೆ ಹಾಜರು
- ದೆಹಲಿಯ ಮರ್ಕಜ್ನಿಂದ ಹಿಂದಿರುಗಿ ಗುಪ್ತವಾಗಿ ವಾಸಿಸುತ್ತಿದ್ದ ತಬ್ಲಿಘಿಗಳು
- 29ರ ಪೈಕಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿತ್ತು
- ಚಿಕಿತ್ಸೆ ಬಳಿಕ ಗುಣಮುಖರಾಗುತ್ತಿದ್ದಂತೆಯೇ ಇವರ ಬಂಧನ
15:18 April 18
ಪಂಜಾಬ್ನಲ್ಲಿ ಕೋವಿಡ್ 19ಗೆ ಎಸಿಪಿ ಬಲಿ
- ಪಂಜಾಬ್ನಲ್ಲಿ ಕೊರೊನಾಗೆ ಎಸಿಪಿ ಬಲಿ
- ಲುಧಿಯಾನದ ಸಹಾಯಕ ಪೊಲೀಸ್ ಆಯುಕ್ತ ಅನಿಲ್ ಕೊಹ್ಲಿ ನಿಧನ
- ಲುಧಿಯಾನದ SPS ಆಸ್ಪತ್ರೆಯಲ್ಲಿ ಸಾವು
- ಜಿಲ್ಲಾ ಸಾರ್ವಜನಿಕ ಸಂಪರ್ಕ ಕಚೇರಿ ಮಾಹಿತಿ
- ರಾಜ್ಯದಲ್ಲಿ ಕೋವಿಡ್ 19ಗೆ ಈವರೆಗೆ 16 ಬಲಿ
15:08 April 18
ರಾಜ್ಯದಲ್ಲಿ ಏ.20 ರಿಂದ ಕೆಲವು ವಲಯಗಳಿಗೆ ಲಾಕ್ಡೌನ್ನಲ್ಲಿ ವಿನಾಯಿತಿ
- ಕೊರೊನಾ ನಿಯಂತ್ರಣ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಯಡಿಯೂರಪ್ಪ ಸಭೆ
- ಏ.20 ರಿಂದ ಲಾಕ್ಡೌನ್ನಲ್ಲಿ ವಿನಾಯಿತಿ
- ಕೆಲವು ವಲಯಗಳಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ
- ಮೊನ್ನೆ 36, ನಿನ್ನೆ 44 ಹಾಗೂ ಇಂದು 12 ಪ್ರಕರಣಗಳು ಪತ್ತೆಇಂದಿನ ಪರಿಸ್ಥಿತಿ ಸಮಾಧಾನ ತಂದಿದೆ
- ಮೇ 3 ರವರೆಗೆ ನಿಷೇಧಾಜ್ಞೆ ಮುಂದುವರಿಯುತ್ತೆ
- ಮಾಸ್ಕ್ ಕಡ್ಡಾಯ
- ಕಂಟೇನ್ಮಂಟ್ ಅಲ್ಲದ ಪ್ರದೇಶದಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ
- ಕಟ್ಟಡ ನಿರ್ಮಾಣ ಕೆಲಸಗಳಿಗೆ ಯಾವುದೇ ಅಡ್ಡಿಯಿಲ್ಲ
- ಐಟಿ ವಲಯದಲ್ಲಿ ಶೇಕಡ 33 ರಷ್ಟು ನೌಕರರ ಕೆಲಸಕ್ಕೆ ಅವಕಾಶ ಕಲ್ಪಿಸಲಾಗುತ್ತೆ
- ಹಿರಿಯ ನಾಗರಿಕರು ಮನೆಯಿಂದ ಹೊರಬರುವಂತಿಲ್ಲ
- ಜಿಲ್ಲೆಯ ಒಳಗಡೆ ಸಂಚರಿಸಬಹುದು, ಆದರೆ ಅಂತರ್ಜಿಲ್ಲೆಗಳಿಗೆ ಪ್ರವೇಶ ನಿಷೇಧ
- ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಬಿಎಸ್ವೈ ಹೇಳಿಕೆ
14:35 April 18
ಕೊರೊನಾ ಬಿಕ್ಕಟ್ಟು: ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಸಮಿತಿ ರಚಿಸಿದ ರಾಷ್ಟ್ರೀಯ ಕಾಂಗ್ರೆಸ್
- ದೇಶದಲ್ಲಿ ಕೊರೊನಾ ಅಟ್ಟಹಾಸ
- ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಸಮಿತಿ ರಚಿಸಿದ ರಾಷ್ಟ್ರೀಯ ಕಾಂಗ್ರೆಸ್
- ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಸಿದ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ
- ಪಿ ಚಿದಂಬರಂ, ರಾಹುಲ್ ಗಾಂಧಿ ಸೇರಿದಂತೆ 11 ಮಂದಿ ಕೈ ನಾಯಕರು ಸಮಿತಿಯ ಸದಸ್ಯರು
14:35 April 18
ಕೋವಿಡ್ 19 ದೊಡ್ಡ ಸವಾಲು ಮಾತ್ರವಲ್ಲ ಅವಕಾಶವೂ ಹೌದು: ರಾಗಾ ಟ್ವೀಟ್
- ಕೋವಿಡ್ 19 ದೊಡ್ಡ ಸವಾಲು ಮಾತ್ರವಲ್ಲ ಅವಕಾಶವೂ ಹೌದು
- ಬಿಕ್ಕಟ್ಟಿನ ಸಂದರ್ಭದಲ್ಲಿ ಹೊಸ ಪರಿಹಾರ ಕಂಡುಕೊಳ್ಳಲು ನಮ್ಮ ವಿಜ್ಞಾನಿಗಳು, ಎಂಜಿನಿಯರ್ಗಳು ಒಗ್ಗೂಡಬೇಕಿದೆ
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್
14:35 April 18
ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹದಿಂದ 80 ಕೈದಿಗಳ ಸ್ಥಳಾಂತರ
- ಕೋವಿಡ್ 19 ಭೀತಿ ಹಿನ್ನೆಲೆ
- ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹದಿಂದ 80 ಕೈದಿಗಳ ಸ್ಥಳಾಂತರ
- ಚಿಕ್ಕಮಗಳೂರು ಹಾಗು ಕಾರವಾರ ಜೈಲುಗಳಿಗೆ ಶಿಫ್ಟ್
12:50 April 18
ಹುಬ್ಬಳ್ಳಿಯಲ್ಲಿ ಇನ್ನೊಬ್ಬ ವ್ಯಕ್ತಿಗೆ ಅಂಟಿದ ಕೊರೊನಾ ವೈರಸ್
- ಹುಬ್ಬಳ್ಳಿಯಲ್ಲಿ ಮತ್ತೊಂದು ಕೊರೊನಾ ಕೇಸ್
- 363ನೇ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗೆ ಅಂಟಿದ ವೈರಸ್
- ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
12:27 April 18
ಮಧ್ಯಪ್ರದೇಶದಲ್ಲಿ ಈವರೆಗೆ 1355 ಕೊರೊನಾ ಕೇಸ್ಗಳು, 69 ಸಾವು
- ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿತರ 1355ಕ್ಕೆ ಏರಿಕೆ
- 69ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
12:14 April 18
ಪುಣೆಯಲ್ಲಿ ಪೊಲೀಸ್ ಪೇದೆ ಹಾಗೂ ಆತನ ಪತ್ನಿಗೆ ಕೊರೊನಾ ಪಾಸಿಟಿವ್
- ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಪೇದೆ ಹಾಗೂ ಆತನ ಪತ್ನಿಗೆ ಕೊರೊನಾ ಪಾಸಿಟಿವ್
- 42 ವರ್ಷದ ಪೊಲೀಸ್ ಪೇದೆಯಿಂದ ಪತ್ನಿಗೆ ತಗುಲಿದ ಸೋಂಕು
- ಪುಣೆಯ ಜಂಟಿ ಪೊಲೀಸ್ ಆಯುಕ್ತ ರವೀಂದ್ರ ಶಿಸ್ವೆ ಮಾಹಿತಿ
12:14 April 18
ರಾಜ್ಯದಲ್ಲಿ ಇಂದು ಮತ್ತೆ 12 ಕೊರೊನಾ ಪಾಸಿಟಿವ್ ಪ್ರಕರಣಗಳು
- ರಾಜ್ಯದಲ್ಲಿ ಇಂದು ಮತ್ತೆ 12 ಪಾಸಿಟಿವ್ ಪ್ರಕರಣಗಳು
- ಓರ್ವ ಮಹಿಳೆ, 11 ಪುರುಷರಲ್ಲಿ ಸೋಂಕು ದೃಢ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆ
12:04 April 18
ಕೇರಳದಲ್ಲಿ ಕೊರೊನಾ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ವ್ಯಕ್ತಿ ಸಾವು
- ಕೊರೊನಾ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ವ್ಯಕ್ತಿ ಸಾವು
- ಕೇರಳದಲ್ಲಿ 85 ವರ್ಷದ ವೃದ್ಧ ಸಾವು
- ಈತ ಕೋವಿಡ್-19 ನಿಂದ ಮೃತಪಟ್ಟಿಲ್ಲ
- ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ
- ಮೃತದೇಹವನ್ನ ಆತನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು
- ಆರೋಗ್ಯ ಸಚಿವೆ ಕೆಕೆ ಶೈಲಜ ಸ್ಪಷ್ಟನೆ
12:04 April 18
ಗುಜರಾತ್ನಲ್ಲಿ 1235ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಗುಜರಾತ್ನಲ್ಲಿ ಕಳೆದ 12 ಗಂಟೆಗಳಲ್ಲಿ 176 ಮಂದಿಗೆ ಸೋಂಕು
- ರಾಜ್ಯದಲ್ಲಿ 1235ಕ್ಕೆ ಏರಿದ ಕೊರೊನಾ ಸೋಂಕಿತರ ಸಂಖ್ಯೆ
- ಒಟ್ಟು 48 ಮಂದಿ ಸಾವು
12:04 April 18
- ಆಂಧ್ರದಲ್ಲಿ 24 ಗಂಟೆಗಳಲ್ಲಿ 31 ಮಂದಿಗೆ ಕೊರೊನಾ ಪಾಸಿಟಿವ್
- ರಾಜ್ಯದಲ್ಲಿ 603ಕ್ಕೆ ಏರಿದ ಬಾಧಿತರ ಸಂಖ್ಯೆ
- ಈ ಪೈಕಿ 42 ಮಂದಿ ಡಿಸ್ಚಾರ್ಜ್, 15 ಸಾವು
10:30 April 18
ಎರಡು ದಿನಗಳ ಹಿಂದೆ ಹೆರಿಗೆಯಾಗಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್... ಐಸೋಲೇಷನ್ ವಾರ್ಡ್ನಲ್ಲಿ ಮಗು
- ಎರಡು ದಿನಗಳ ಹಿಂದೆ ಹೆರಿಗೆಯಾಗಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್
- ಜಾರ್ಖಂಡ್ನ ರಾಂಚಿಯ ಸದರ್ ಆಸ್ಪತ್ರೆಯಲ್ಲಿ ಘಟನೆ
- ಮಹಿಳೆಗೆ ಹೆರಿಗೆ ಮಾಡಿಸಿದ್ದ ಸಿಬ್ಬಂದಿಗಳೂ ಕೋವಿಡ್ 19 ಪರೀಕ್ಷೆಗೆ ಒಳಪಡಲಿದ್ದಾರೆ
- ಇನ್ನು ಆಕೆಯ ಮಗು ರಿಮ್ಸ್ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ನಲ್ಲಿ ದಾಖಲು
- ರಾಂಚಿಯ ಅಧಿಕಾರಿಗಳಿಂದ ಮಾಹಿತಿ
10:29 April 18
ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1270ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಬೆಳಗಾಗುತ್ತಿದ್ದಂತೆಯೇ 41 ಹೊಸ ಪ್ರಕರಣಗಳು, 2 ಸಾವು ದೃಢ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1270ಕ್ಕೆ, ಸಾವಿನ ಸಂಖ್ಯೆ 19ಕ್ಕೆ ಏರಿಕೆ
- ಇಂದು ಮೃತರಾದ ಇಬ್ಬರಲ್ಲಿ ಒಬ್ಬ ರೋಗಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಇನ್ನೋರ್ವ ಮಧುಮೇಹದಿಂದ ಬಳಲುತ್ತಿದ್ದರು
09:47 April 18
ಇಂದೋರ್ನಲ್ಲೇ ಈವರೆಗೆ ಒಟ್ಟು 892 ಕೊರೊನಾ ಪ್ರಕರಣಗಳು ವರದಿ
- ಮಧ್ಯಪ್ರದೇಶದ ಇಂದೋರ್ನಲ್ಲಿ ಇಂದು 50 ಹೊಸ ಪ್ರಕರಣಗಳು ಪತ್ತೆ
- ಈವರೆಗೆ ಇಂದೋರ್ನಲ್ಲೇ ಒಟ್ಟು 892 ಕೊರೊನಾ ಸೋಂಕಿತರು, 47 ಸಾವು
09:28 April 18
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,378ಕ್ಕೆ ಏರಿಕೆ
- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 991 ಕೋವಿಡ್ 19 ಪ್ರಕರಣಗಳು, 43 ಸಾವು ವರದಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,378ಕ್ಕೆ, ಸಾವಿನ ಸಂಖ್ಯೆ 480ಕ್ಕೆ ಏರಿಕೆ
- ಸೋಂಕಿತರ ಪೈಕಿ 11,906 ಆ್ಯಕ್ಟಿವ್ ಕೇಸ್ಗಳು, 1991 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ
09:08 April 18
ಮುಂಬೈನಲ್ಲಿ ನೌಕಾಪಡೆಯ 21 ಸಿಬ್ಬಂದಿಗೆ ಕೊರೊನಾ
- ನೌಕಾಪಡೆಯ ಸಿಬ್ಬಂದಿಯನ್ನೂ ಬಿಡದ ಕೊರೊನಾ
- ಮುಂಬೈ ನೌಕಾನೆಲೆಯ 21 ಸಿಬ್ಬಂದಿಗೆ ಸೋಂಕು
- ಏಪ್ರಿಲ್ 7 ರಂದು ಮೊದಲು ಒಬ್ಬ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿದ್ದ ಸೋಂಕು
- ಬಳಿಕ ಇವರ ಸಂಪರ್ಕದಲ್ಲಿದ್ದ ಇತರರಿಗೆ ತಗುಲಿದೆ
- ನೌಕಾಪಡೆ ಅಧಿಕಾರಿಗಳಿಂದ ಮಾಹಿತಿ