ಪಾಲಕ್ಕಾಡ್: ಕೇರಳದಲ್ಲಿ ಮೆಕ್ಕೆ ಜೋಳ ಅಥವಾ ಹಲ್ಲು ಜೋಳದ ಕೃಷಿ ಬಹಳ ವಿರಳ. ಜೋಳ ಬೆಳೆಯಲು ಕೇರಳದ ಮಣ್ಣು ಮತ್ತು ಹವಾಮಾನ ಅನುಕೂಲಕರವಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ ಪಾಲಕ್ಕಾಡ್‌ನ ಪಟ್ಟಂಬಿಯಲ್ಲಿರುವ ಚತ್ತಣ್ಣೂರಿನ ರೈತ ಅಬ್ಬಾಸ್ ಇದನ್ನ ಸುಳ್ಳಾಗಿಸಿದ್ದಾರೆ.
ಕೇರಳ ಮಣ್ಣಲ್ಲಿ ಸಾವಯವ ಜೋಳ ಬೆಳೆದ ರೈತ.. ಅಬ್ಬಾಸ್ ಯತ್ನಕ್ಕೆ ಶಹಬ್ಬಾಸ್ ಅಂತಿದ್ದಾರೆ ಜನ - ಸಗಣಿ ಗೊಬ್ಬರವನ್ನು ಕಾರ್ನ್ ಗೊಬ್ಬರವಾಗಿ ಬಳಕೆ
ಕೇರಳದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುತ್ತಿದ್ದ ಮೆಕ್ಕೆ ಜೋಳದ ಬೆಳೆಯನ್ನು ಪಾಲಕ್ಕಾಡ್‌ನ ರೈತರೊಬ್ಬರು ಹುಲುಸಾಗಿ ಬೆಲೆದಿದ್ದಾರೆ. ಅಂದಹಾಗೆ ಅವರು ಸಾವಯವ ಕೃಷಿ ಪದ್ಧತಿ ಮೂಲಕ ಈ ಫಸಲು ತೆಗೆದಿದ್ದು ಕೇರಳದ ಅನ್ನದಾತರ ಗಮನಸೆಳೆದಿದ್ದಾರೆ.
ತಮಿಳುನಾಡಿನ ಪ್ರವಾಸದ ಸಮಯದಲ್ಲಿ ಅವರಿಗೆ ಹೊಳೆದ ಒಂದು ಐಡಿಯಾ ಇಂದು ಚಿನ್ನದಂಥ ಜೋಳದ ಫಸಲಾಗಿ ನಿಂತಿದೆ. ಅಬ್ಬಾಸ್ ತಮ್ಮ ಬಳಿ ಇದ್ದ 7 ಸೆಂಟ್ಸ್ ಜಮೀನಿನನಲ್ಲಿ ಪ್ರಾಯೋಗಿಕವಾಗಿ ಜೋಳ ಬೆಳೆದಿದ್ದಾರೆ ಈ ಮೂಲಕ ಭಾರತದ ಇತರ ಹಲವು ರಾಜ್ಯಗಳಲ್ಲಿ ಮುಖ್ಯ ಬೆಳೆಯಾದ ಜೋಳ ಕೇರಳದಲ್ಲೂ ಚೆನ್ನಾಗಿ ಬೆಳೆಯುತ್ತದೆ ಎಂಬುದನ್ನು ಸಾಬೀತುಪಡಿಸಿದೆ.
ಅಬ್ಬಾಸ್ ಅವರು ತಮಿಳುನಾಡಿಗೆ ಪ್ರವಾಸದ ಸಮಯದಲ್ಲಿ ಕಾರ್ನ್ ಫಾರ್ಮ್ಗಳನ್ನು ನೋಡಿದ ನಂತರ ಜೋಳದ ಕೃಷಿ ಕುರಿತು ಆಸಕ್ತಿ ಬಂದಿದೆ. ನಂತರ ತಮಿಳುನಾಡಿನಿಂದ ಉತ್ತಮ ಗುಣಮಟ್ಟದ ಜೋಳದ ಬೀಜಗಳನ್ನು ತಂದು ಕೇರಳದಲ್ಲಿದ್ದ ತಮ್ಮ ಜಮೀನಿನಲ್ಲಿ ಬಿತ್ತಿದ್ದಾರೆ. ಪ್ರಾರಂಭದಲ್ಲಿ ಇವರು ಸಗಣಿ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದರು. ಆನಂತರ ಸಾವಯವ ಗೊಬ್ಬರದ ಮೊರೆ ಹೋದರು. 7 ಸೆಂಟ್ಸ್ ಪ್ರದೇಶದಲ್ಲಿ 1400 ಜೋಳದ ಸಸಿಗಳನ್ನು ಬೆಳೆಸಲಾಗಿದ್ದು, 75 ದಿನಕ್ಕೆ ಬರಬೇಕಾದ ಫಸಲು ಇವರ ಜಮೀನಿನಲ್ಲಿ ಕೇವಲ 65 ದಿನಗಳಿಗೇ ಕೈಗೆ ಬಂದಿದೆ. ಇದೀಗ ಸಾವಯವ ಜೋಳದ ಕೃಷಿಯಲ್ಲಿ ಯಶಸ್ಸಿನ ರುಚಿಯನ್ನು ಅನುಭವಿಸಿದ ಅಬ್ಬಾಸ್, ತನ್ನ ಜೋಳದ ಕೃಷಿಯನ್ನು ಹೆಚ್ಚು ಭೂಪ್ರದೇಶಕ್ಕೆ ವಿಸ್ತರಿಸಲು ಸಜ್ಜಾಗಿದ್ದಾರೆ.