ನವದೆಹಲಿ: ಉಪಕುಲಪತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲಿ ವಿದ್ಯಾರ್ಥಿಗಳನ್ನ ತಡೆಯಲು ಮುಂದಾದಗ ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಯ ಕಚ್ಚಿದ್ದಾರೆ.
ರಾಷ್ಟ್ರಪತಿ ಭವನದತ್ತ JNU ವಿದ್ಯಾರ್ಥಿಗಳ ಪ್ರತಿಭಟನೆ.. ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು - JNU ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದ ಪೊಲೀಸರು
ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳನ್ನ ತಡೆಯುವ ವೇಳೆ ಪ್ರತಿಭಟನಾಕಾರರೊಬ್ಬರು ಪೊಲೀಸ್ ಅಧಿಕಾರಿಯ ಕೈ ಕಚ್ಚಿದ್ದಾಳೆ.
![ರಾಷ್ಟ್ರಪತಿ ಭವನದತ್ತ JNU ವಿದ್ಯಾರ್ಥಿಗಳ ಪ್ರತಿಭಟನೆ.. ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು A protester bit Additional DCP,ಪೊಲಿಸ್ ಅಧಿಕಾರಿಯ ಕೈ ಕಚ್ಚಿದ ಪ್ರತಿಭಟನಾಕಾರರು](https://etvbharatimages.akamaized.net/etvbharat/prod-images/768-512-5656475-thumbnail-3x2-brm.jpg)
ಜೆನ್ಯು ಕ್ಯಾಂಪಸ್‌ನಲ್ಲಿ ಜನವರಿ 5 ರಂದು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಉಪಕುಲಪತಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರಪತಿಭವನದತ್ತ ಮೆರವಣಿಗೆ ನಡೆಸುತ್ತಿದ್ದಾರೆ. ವಿಜಯ್ ಚೌಕ್ ಬಳಿ ಬಂದ ಪ್ರತಿಭಟನಾಕಾರರನ್ನ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನಾಕಾರರೊಬ್ಬರು, ನೈರುತ್ಯ ಪೊಲೀಸ್ ಹೆಚ್ಚುವರಿ ಡಿಸಿಪಿ ಕೈ ಕಚ್ಚಿದ್ದಾರೆ. ಪೊಲೀಸ್ ಅಧಿಕಾರಿಯ ಎಡಗೈ ಹೆಬ್ಬೆರಳಿನಲ್ಲಿ ಕಚ್ಚಿದ ಗುರುತು ಕಾಣಿಸುತ್ತಿದೆ.
ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅಲ್ಲಲ್ಲಿ ಬ್ಯಾರಿಕೇಡ್ಗಳನ್ನ ನಿರ್ಮಿಸಿ ವಿದ್ಯಾರ್ಥಿಗಳನ್ನ ತಡೆಯತ್ತಿದೆ. ಈಗಾಗಲೆ ಹಲವು ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.