ಕರ್ನಾಟಕ

karnataka

ETV Bharat / bharat

ದಂಡ ವಿಧಿಸಿದ ಪೊಲೀಸರಿಗೆ ಆತ ನೀಡಿದ 'ಶಾಕ್' ಎಂಥಾದ್ದು ಗೊತ್ತಾ..? - ಪೊಲೀಸ್​ ಸ್ಟೇಷನ್​ ವಿದ್ಯುತ್ ಸರಬರಾಜು

ಇಂಧನ ಇಲಾಖಾಧಿಕಾರಿ ಶ್ರೀನಿವಾಸ್ ಮಂಗಳವಾರದಂದು ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ನಡೆಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದರು. ನಿಯಮ ಉಲ್ಲಂಘನೆಯಲ್ಲಿ ಪೊಲೀಸರು ₹ 500ರೂ. ದಂಡ ವಿಧಿಸಿದ್ದರು.

ದಂಡ

By

Published : Aug 1, 2019, 10:38 AM IST

ಫಿರೋಜಾಬಾದ್(ಯುಪಿ):ಇಂಧನ ಇಲಾಖೆ ಅಧಿಕಾರಿಗೆ ಹೆಲ್ಮೆಟ್ ಇಲ್ಲದ ಪ್ರಯಾಣಕ್ಕೆ ದಂಡ ವಿಧಿಸಿದ ಕಾರಣಕ್ಕೆ ಆ ಅಧಿಕಾರಿ ವಿಶೇಷ ರೀತಿಯಲ್ಲಿ ಪ್ರತೀಕಾರ ತೀರಿಸಿಕೊಂಡ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ.

ಇಂಧನ ಇಲಾಖಾಧಿಕಾರಿ ಶ್ರೀನಿವಾಸ್ ಮಂಗಳವಾರದಂದು ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ನಡೆಸಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದರು. ನಿಯಮ ಉಲ್ಲಂಘನೆಯಲ್ಲಿ ಪೊಲೀಸರು ₹ 500ರೂ. ದಂಡ ವಿಧಿಸಿದ್ದರು. ಆತ ಪರಿಪರಿಯಾಗಿ ಬೇಡಿಕೊಂಡರೂ ಕೇಳದ ಪೊಲೀಸರು ಆತನಿಂದ ದಂಡ ವಸೂಲು ಮಾಡಿಕೊಂಡಿದ್ದರು.

ಇದರಿಂದ ಕೋಪಗೊಂಡ ಶ್ರೀನಿವಾಸ್ ಅದೇ ದಿನ ಸಂಜೆ ದಂಡ ವಿಧಿಸಿದ ಪೊಲೀಸ್​ ಸ್ಟೇಷನ್​ನ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದ್ದಾನೆ. ಇದಕ್ಕೆ ಆತ ಸೂಕ್ತ ಕಾರಣವನ್ನೂ ಒದಗಿಸಿದ್ದಾನೆ.

ಪೊಲೀಸ್ ಸ್ಟೇಷನ್​ನ ವಿದ್ಯುತ್ ಬಿಲ್ ಆರು ಲಕ್ಷ ದಾಟಿದ್ದರೂ ಪಾವತಿ ಮಾಡಿರಲಿಲ್ಲ. ಹಲವಾರು ಬಾರಿ ನೋಟಿಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ, ಹೀಗಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ ಎಂದು ಶ್ರೀನಿವಾಸ್ ಕಾರಣ ನೀಡಿದ್ದಾರೆ.

ABOUT THE AUTHOR

...view details