‘ಕೊರೋನ ವೈರಸ್ ಸಾಂಕ್ರಾಮಿಕ ಸೋಂಕು (ಕೊವಿಡ್ -19)’ ಎಂಬ ಪದವನ್ನು ನಾವು ಮೊದಲ ಬಾರಿಗೆ ಕೇಳಿದಾಗಿನಿಂದ ಮತ್ತು ಅದು ಇಡೀ ಜಗತ್ತನ್ನು ಹೇಗೆ ಬದಲಾಯಿಸಿತು ಎಂಬುದರ ಕುರಿತು ನಾವು ಬಹಳ ದೂರ ಕ್ರಮಸಿದ್ದೇವೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಪ್ರಸ್ತುತದ ಪ್ರತೀತಿಯಾಗಿದೆ.
ಕೊವಿಡ್ ಲಸಿಕೆಯ ಅನುಪಸ್ಥಿತಿಯಲ್ಲಿ, ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಪ್ರಮುಖ ತಂತ್ರವೆಂದರೆ ಸಾಮಾಜಿಕ ಅಂತರವನ್ನು ಕಾಪಾಡುವುದು. ಆದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮನುಷ್ಯನ ಮೂಲಭೂತ ಸ್ವಭಾವಕ್ಕೆ ವಿರುದ್ಧವಾಗಿದೆ ಮತ್ತು ಇತರರೊಂದಿಗೆ ಯಾವಾಗಲು ಸಂಪರ್ಕ ಸಾಧಿಸಲು ಕಾದು ಕುಳಿತಿರುವ ಮಾನವ ಮೂಲಭೂತ ಪ್ರವೃತ್ತಿಗೆ ಅದು ವ್ಯತಿರಿಕ್ತವಾಗಿದೆ. ವಿಸ್ತೃತ ಕುಟುಂಬ ಮತ್ತು ಸ್ನೇಹಿತರ ಜತೆಗಿನ ಕಡಿಮೆಗೊಂಡ ಸಂವಹನ ಮತ್ತು ಯಾವುದೇ ವಿಹಾರ ಮತ್ತು ಕುಟುಂಬ ಔತಣ ಕೂಟಗಳಿಲ್ಲದೆ, ಕೊವಿಡ್ -19 ಸಾಂಕ್ರಾಮಿಕ ರೋಗವು ಒಂದು ದೊಡ್ಡ ಒತ್ತಡವಾಗಿ ಪರಿಣಮಿಸಿದೆ. ಹಾಗೆಯೇ ನಮ್ಮೆಲ್ಲರಿಗೂ. ವೈರಸ್‌ನಿಂದ ಮುಕ್ತವಾಗಿರುವ ಮನೆಗಳಿಗೆ ಸಹ ಒತ್ತಡವನ್ನು ತಪ್ಪಿಸುವುದು ಈಗ ಆಯ್ಕೆಯಾಗಿ ಉಳಿದಿಲ್ಲ. ವಿಶೇಷವಾಗಿ ವೈರಸ್‌ಗೆ ತುತ್ತಾಗುವ ಭಯ ಮತ್ತು ಆತಂಕವನ್ನು ನಿಭಾಯಿಸುವುದು, ನಿಕಟ ಕುಟುಂಬದ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದಾಗ ಅವರಿಗೆ ದೈರ್ಯ ತುಂಬುವುದು ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಕಾಳಜಿ ವಹಿಸುವುದು. ಪ್ರಸ್ತುತ ಸಾಂಕ್ರಾಮಿಕ ರೋಗಕ್ಕೆ ಹೊಂದಿಕೊಳ್ಳುವುದು ಅನೇಕರಿಗೆ ಕಷ್ಟಕರವಾಗಿದೆ, ಆದರೆ ಮಕ್ಕಳು, ವೃದ್ಧರು, ಕ್ವಾರಂಟ್ಯೆನ್ ಗೆ ಒಳಗಾಗಿರುವವರು ಮತ್ತು ಜನಸಂಖ್ಯೆಯ ಬಡ ಮತ್ತು ದುರ್ಬಲ ವರ್ಗಗಳಾದ ದೈನಂದಿನ ಕೂಲಿ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಹೆಚ್ಚು ಸವಾಲಾಗಿದೆ. ಕೊವಿಡ್ -19 ಸಾಂಕ್ರಾಮಿಕ ರೋಗದ ವಿರದ್ಧ ಹೋರಾಡುತ್ತಿರವ ಆರೋಗ್ಯ ಕಾರ್ಯಕರ್ತರನ್ನು ಮರೆಯಬಾರದು.
ಆದ್ದರಿಂದ ಕೊವಿಡ್ -19 ಸಾಂಕ್ರಾಮಿಕ ಸೋಂಕಿಗೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯ ಭಾಗವಾಗಿ ಮಾನಸಿಕ ಆರೋಗ್ಯದ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ಕೊವಿಡ್ -19 ಹರಡುವಿಕೆಯನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನಗಳು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡರಲ್ಲೂ ಪ್ರಮುಖ ಸಂದೇಶಗಳನ್ನು ಒಳಗೊಂಡಿರಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಕೇಂದ್ರೀಕರಿಸುವ ಸಾರ್ವಜನಿಕ ಆರೋಗ್ಯ ಅಭಿಯಾನಗಳು ಸಾಮಾಜಿಕವಾಗಿ ಸಂಪರ್ಕ ಹೊಂದುವ ಪ್ರಾಮುಖ್ಯತೆಯನ್ನು ಒತ್ತಿಹೇಳಬೇಕು.
ಕೊವಿಡ್ ಸಾಂಕ್ರಾಮಿಕ ಸೋಂಕಿನ ಒತ್ತಡವನ್ನು ನಿಭಾಯಿಸಲು ನಾವು ಸರಳ ಕ್ರಮಗಳನ್ನು ಅನುಸರಿಸಬಹುದು
ಇತರರೊಂದಿಗೆ ಸಂಪರ್ಕ ಸಾಧಿಸುವುದು: ಸ್ವ ಇಚ್ಚೆಯಿಂದ ಪ್ರತ್ಯೇಕವಾಗಿ ವಾಸಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದಯಕೊಳ್ಳುವುದು ಬೇಸರ ಮತ್ತು ಹತಾಶೆಯ ಭಾವನೆಗಳನ್ನು ಉಂಟುಮಾಡುತ್ತದೆ. ದೂರವಾಣಿ ಕರೆಯ ಮೂಲಕ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಿ, ಸಂತೋಷದ ಘಟನೆಗಳನ್ನು ಚರ್ಚಿಸಿ ಮತ್ತು ಅವರ ಬೆಂಬಲವನ್ನು ಪಡೆಯಿರಿ. ಅಂತರ್ಜಾಲದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು, ಏಕಾಂಗಿಯಾಗಿರುವುದು ಮುಂತಾದ ಅಸಮರ್ಪಕ ನಿರ್ವಹಣೆ ವಿಧಾನಗಳನ್ನು ಗುರುತಿಸಿ ಮತ್ತು ಅದನ್ನು ತಪ್ಪಿಸಿ.
ದೈನಂದಿನ ದಿನಚರಿಗಳಲ್ಲಿ ತೊಡಗಿಸಿಕೊಳ್ಳಿ:ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ದಿನಚರಿಗಳು ಸಹಾಯ ಮಾಡುತ್ತವೆ. ಸಮಯಕ್ಕೆ ಸರಿಯಾಗಿ ಊಟ ಮಾಡಿ ಮತ್ತು ಚೆನ್ನಾಗಿ ನಿದ್ರೆ ಮಾಡಿ, ಪ್ರತಿದಿನ ವ್ಯಾಯಾಮ ಮಾಡಿ, ನಿಮ್ಮ ಹವ್ಯಾಸಗಳನ್ನು ಪುನರಾರಂಭಿಸಿ ಮತ್ತು ನಿಮ್ಮನ್ನು ನೀವು ಆನಂದವಾಗಿ ತೊಡಗಿಸಿಕೊಳ್ಳುವ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಿ. ಯಾವಾಗಲೂ ಸಾಕಷ್ಟು ವಿರಾಮಗಳನ್ನು ತೆಗೆದುಕೊಳ್ಳಿ.
ಒತ್ತಡಕಾರರಿಂದ ದೂರವಿರಿ: ಕೊವಿಡ್ -19 ಸುದ್ದಿಗಳನ್ನು ನಿರಂತರವಾಗಿ ಕೇಳುವುದರಿಂದ ಮಾನಸಕ ಕಿರಿಕಿರಿಯನ್ನುಂಟುಮಾಡುತ್ತದೆ, ಜನರು ಗುಣಮುಖರಾಗುವ ಮತ್ತು ಕೊವಿಡ್ -19 ನಿಂದ ಚೇತರಿಸಿಕೊಂಡ ಜನರ ಸಕಾರಾತ್ಮಕ ಅನುಭವಗಳು ಮತ್ತು ಉನ್ನತೀಕರಸಿದ ಸುದ್ದಿಗಳನ್ನು ಕೇಳುವುದರ ಮೂಲಕ ಮಾನಸಿಕ ಒತ್ತಡವನ್ನುಂಟು ಮಾಡುವ ಸುದ್ದಿಯ ಜತೆಗೆ ಸಮತೋಲನ ಸಾಧಿಸಬಹುದು.
ನಕಾರಾತ್ಮಕ ಆಲೋಚನೆಗಳು ಮತ್ತು ಭಾವನೆಗಳನ್ನು ನಿರ್ವಹಿಸಿ:ನಿಮ್ಮ ಆಲೋಚನೆಗಳು ಮಾನ್ಯವಾಗಿದೆಯೇ ಎಂದು ಪರಿಶೀಲಿಸಿ? ನಿಜವೇ? ಸಹಾಯಕವಾಗಿದೆಯೆ? ಅಗತ್ಯ? ಪೂರಕವೇ? ಆಲೋಚನೆಗಳು ಕೈಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡದಿದ್ದರೆ ಮತ್ತು ನಿಮ್ಮ ಚಿಂತೆ ಮತ್ತು ಆತಂಕಗಳನ್ನು ಹೆಚ್ಚಿಸಿದರೆ ಆ ಆಲೋಚನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಿರುವುದನ್ನು ಬಿಟ್ಟುಬಿಡಿ. ಚಲಿಸುವ ಸಂಚಾರ, ಮೋಡಗಳಂತೆ - ಆಲೋಚನೆಗಳಿಗೆ ಪ್ರಾಮುಖ್ಯತೆ ನೀಡದೆ ಅವುಗಳನ್ನು ಮನಸ್ಸಿನಿಂದ ಹಾದುಹೋಗಲು ಬಿಡಿ. ಯಾವುದೇ ರೀತಿಯ ತೀರ್ಪುಗಳಿಗೆ ಆಸ್ಪದ ನೀಡದೆ ಆಲೋಚನೆಗಳನ್ನು ಸುಮ್ಮನೆ ಗಮನಿಸುವುದು ನಕಾರಾತ್ಮಕ ಭಾವನೆಗಳು ಮತ್ತು ಆಲೋಚನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊವಿಡ್ -19 ಸಾಂಕ್ರಾಮಿಕ ಸೋಂಕು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ನೆನಪಿನಲ್ಲಿಡಿ, ಆದರೆ ನಾವು ನಮ್ಮ ಆಲೋಚನೆಗಳು ಮತ್ತು ಕೆಲಸಗಳನ್ನು ನಿಯಂತ್ರಿಸಬಹುದು.