ಹೈದರಾಬಾದ್: ಇಲ್ಲಿನ ಗೋಲ್ಕೊಂಡಾದ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಯುವಕನೊಬ್ಬನಿಗೆ ರಕ್ತಬರುವವರೆಗೂ ಥಳಿಸಿದ ಹಿನ್ನೆಲೆ ಪೊಲೀಸ್ ಸಿಬ್ಬಂದಿಯನ್ನು ಅಮಾನತುಮಾಡಿ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬಡವರ ಹಸಿವು ನೀಗಿಸಿ ಬರುತ್ತಿದ್ದ ವ್ಯಕ್ತಿಗೆ ಥಳಿತ: ಪೊಲೀಸ್ ಸಿಬ್ಬಂದಿ ಅಮಾನತು - ಹೈದರಾಬಾದ್
ಲಾಕ್ಡೌನ್ ಹಿನ್ನೆಲೆ ನಿನ್ನೆ ಯುವಕನೊಬ್ಬ ಜನರಿಗೆ ಆಹಾರವನ್ನು ವಿತರಿಸಿದ ನಂತರ ಹಿಂದಿರುಗುತ್ತಿದ್ದ ವೇಳೆ ಗೋಲ್ಕೊಂಡ ಪೊಲೀಸರು ಟೋಲಿಚೌಕಿ ಚೆಕ್ ಪೋಸ್ಟ್ಬಳಿ ಈತನನ್ನು ತಡೆದು ಹಲ್ಲೆ ಮಾಡಿದ್ದರು.
ಲಾಕ್ಡೌನ್ ಹಿನ್ನೆಲೆ ನಿನ್ನೆ ಯುವಕನೋರ್ವ ಜನರಿಗೆ ಆಹಾರವನ್ನು ವಿತರಿಸಿದ ನಂತರ ಹಿಂದಿರುಗುತ್ತಿದ್ದ ವೇಳೆ ಗೋಲ್ಕೊಂಡ ಪೊಲೀಸರು ಟೋಲಿಚೌಕಿ ಚೆಕ್ ಪೋಸ್ಟ್ ಬಳಿ ಈತನನ್ನು ತಡೆದಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಹನುಮಂತು ಎಂಬುವರು ಈ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪೊಲೀಸ್ ಮುಖ್ಯಸ್ಥರು, ಹನುಮಂತು ಅವರ ನಡವಳಿಗೆ ವೃತ್ತಿಪರವಾಗಿಲ್ಲದಿರುವುದರಿಂದ ಅಮಾನತು ಮಾಡಲಾಗಿದೆ. ಅಲ್ಲದೆ, ಈ ಸಿಬ್ಬಂದಿಗೆ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ತಿಳಿಸದ ಕಾರಣ ಗೋಲ್ಕೊಂಡಾದ ಸ್ಟೇಷನ್ ಹೌಸ್ ಆಫೀಸರ್ಗೆ ಮೆಮೋ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.