ನವದೆಹಲಿ: ಪೌರತ್ವ ಮಸೂದೆ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಟೀಕಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ನಾಯಕರಾದವರು ಜನಸಾಮಾನ್ಯರನ್ನು ಹಿಂಸಾಚಾರ ಕೃತ್ಯದೆಡೆಗೆ ಕರೆದೊಯ್ಯುವುದಿಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ಎನ್ನುವುದು ಮುನ್ನಡೆಸುವ ವಿಷಯವಾಗಿದೆ. ನೀವು ಮುಂದೆ ನಡೆದಾಗ ಎಲ್ಲರೂ ನಿಮ್ಮನ್ನ ಅನುಸರಿಸುತ್ತಾರೆ. ಆದರೆ ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವರೇ ನಾಯಕರಾಗುತ್ತಾರೆ. ಜನರನ್ನ ತಪ್ಪುದಾರಿಯಲ್ಲಿ ಮುನ್ನಡೆಸುವವರು ನಾಯಕರಲ್ಲ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳು ನಗರ ಪಟ್ಟಣಗಳಲ್ಲಿ ಬೆಂಕಿ ಹಚ್ಚುವುದು ಮತ್ತು ಹಿಂಸಾಚಾರವನ್ನು ನಡೆಸಲು ಜನಸಮೂಹವನ್ನು ಮುನ್ನಡೆಸುತ್ತಿದ್ದಾರೆ. ಇದು ನಾಯಕತ್ವವಲ್ಲ ಎಂದು ಬಿಪಿನ್ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ.