ಕರ್ನಾಟಕ

karnataka

ETV Bharat / bharat

’ನಾರಿಯಿಂದ ನಾರಾಯಣಿ’ : ಇದು ಸೀತಾರಾಮನ್​ ಕೊಡುಗೆ.. ಮಹಿಳೆಯರಿಗೆ ಏನೆಲ್ಲ ಸಿಕ್ತು - ಬಜೆಟ್

ಮಹಿಳೆಯರಿಗೆ ಈ ಬಾರಿಯ ಬಜೆಟ್​ನಲ್ಲಿ ವಿತ್ತ ಸಚಿವೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಮಹಿಳೆಯರನ್ನು ಪ್ರೋತ್ಸಾಹಿಸಲು ಹಾಗೂ ಅವರ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿತ್ತ ಸಚಿವೆ ಘೋಸಿದ್ದಾರೆ.

budget

By

Published : Jul 5, 2019, 1:33 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ್ದು, ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆ ನಿರೀಕ್ಷೆಯನ್ನು ವಿತ್ತ ಸಚಿವೆ ಪೂರ್ಣಗೊಳಿಸಿದ್ದಾರೆ. ಬಜೆಟ್​ನಲ್ಲಿ ಮಹಿಳೆಯರಿಗೆ ಏನೆಲ್ಲಾ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಯೋಣ.

  • ಪ್ರತಿ ಸ್ವಸಹಾಯ ಗುಂಪಿನಲ್ಲಿ ಒಬ್ಬ ಮಹಿಳೆ ಜನಧನ ಖಾತೆ ಹೊಂದಿದವರಿಗೆ 5 ಸಾವಿರ ರೂ. ಒಡಿ ಸೌಲಭ್ಯಅರ್ಹಕರಿಗೆ ಮುದ್ರಾ ಯೋಜನೆಯಡಿ 1 ಲಕ್ಷ ರೂಪಾಯಿ ಸಾಲಕ್ಕೆ ಕ್ರಮ
  • ಮಹಿಳಾ ಸ್ವಸಹಾಯ ಸಂಘಗಳ ಬಡ್ಡಿ ಸಬ್ವೆನ್ಷನ್ ಯೋಜನೆಯನ್ನು ಭಾರತದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಕ್ರಮ.
  • ಸದನದಲ್ಲಿ 78 ಮಹಿಳಾ ಸಂಸದರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮತದಾರರು ದಾಖಲೆಯ ಮತದಾನವನ್ನು ಮಾಡಿದ್ದು, ನೀತಿ ರಚನೆಯಲ್ಲಿ ಮಹಿಳೆಯರು ಕೂಡಾ ಪುರುಷರಷ್ಟೇ ಮುಖ್ಯವಾದ ಪಾತ್ರವಹಿಸುತ್ತಾರೆ ಎಂದು ನಿರ್ಮಲಾ ಸೀತಾರಾಮನ್​ ತಮ್ಮ ಬಜೆಟ್​ ಭಾಷಣದಲ್ಲಿ ಪ್ರಸ್ತಾಪಿಸಿದರು. ಮಹಿಳೆಯರನ್ನು ಪ್ರೋತ್ಸಾಹಿಸಲು ಹಾಗೂ ಅವರ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಘೋಷಿಸಿದರು.

ABOUT THE AUTHOR

...view details