ನವದೆಹಲಿ/ಹರಿಯಾಣ:ರಾಷ್ಟ್ರ ರಾಜಧಾನಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ದೆಹಲಿ - ಎನ್ಸಿಆರ್ ರಸ್ತೆಗಳು ಜಲಾವೃತವಾಗಿದೆ. ದೆಹಲಿಯ ಗಡಿ ಪ್ರದೇಶಗಳಾದ ಹರಿಯಾಣದ ಗುರುಗ್ರಾಮ್ ಹಾಗೂ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ದೆಹಲಿ - ಹರಿಯಾಣದಲ್ಲಿ ರಸ್ತೆಗಳು ಜಲಾವೃತ.. ವಾಹನ ಸವಾರರ ಪರದಾಟ - Delhi-Jaipur Expressway
ದೆಹಲಿ-ಎನ್ಸಿಆರ್, ದೆಹಲಿ-ಜೈಪುರ್ ಎಕ್ಸ್ಪ್ರೆಸ್ವೇನಲ್ಲಿ ರಸ್ತೆ ನೀರಿನಿಂದ ಮುಳುಗಡೆಯಾಗಿದ್ದು, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ.
![ದೆಹಲಿ - ಹರಿಯಾಣದಲ್ಲಿ ರಸ್ತೆಗಳು ಜಲಾವೃತ.. ವಾಹನ ಸವಾರರ ಪರದಾಟ Delhi-Jaipur Expressway](https://etvbharatimages.akamaized.net/etvbharat/prod-images/768-512-8487960-thumbnail-3x2-megha.jpg)
ದೆಹಲಿ-ಹರಿಯಾಣದಲ್ಲಿ ರಸ್ತೆಗಳು ಜಲಾವೃತ
ದೆಹಲಿ-ಹರಿಯಾಣದಲ್ಲಿ ರಸ್ತೆಗಳು ಜಲಾವೃತ
ಹರಿಯಾಣದ ದೆಹಲಿ-ಜೈಪುರ್ ಎಕ್ಸ್ಪ್ರೆಸ್ವೇನಲ್ಲಿ ರಸ್ತೆ ನೀರಿನಿಂದ ಮುಳುಗಡೆಯಾಗಿದ್ದು, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಜನರು ಮನೆಯಲ್ಲೇ ಇರಬೇಕು, ಅಗತ್ಯ ಕೆಲಸಕ್ಕೆ ಮಾತ್ರ ಹೊರಗಡೆ ಬರಬೇಕು ಎಂದು ಗುರುಗ್ರಾಮ್ ಟ್ರಾಫಿಕ್ ಪೊಲೀಸರು ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ಇನ್ನು ದೆಹಲಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.