ಪುಣೆ :ಜನವರಿ 16ರಿಂದ ಕೊರೊನಾ ಲಸಿಕೆ ವಿತರಣಾ ಅಭಿಯಾನ ಆರಂಭವಾಗಲಿದೆ. 24 ಗಂಟೆಯೊಳಗೆ ಸೆರೆಮ್ ಸಂಸ್ಥೆಯಿಂದ ಕೋವಿಶೀಲ್ಡ್ ಲಸಿಕೆಯನ್ನು ಕಂಟೇನರ್ ಮೂಲಕ ಕಳುಹಿಸಲಾಗುತ್ತದೆ ಎಂದು ಸಂಸ್ಥೆಯ ಸಿಇಒ ಆದರ್ ಪೂನವಾಲಾ ಹೇಳಿದರು.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಮತ್ತು ಆಕ್ಸ್ಫರ್ಡ್–ಅಸ್ಟ್ರಾಜೆನೆಕಾ ಮತ್ತು ಸೆರೆಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗಳನ್ನು ತುರ್ತು ಬಳಕೆಗೆ ಕೇಂದ್ರ ಅನುಮತಿಸಿದೆ.
ಇದನ್ನೂ ಓದಿ...ಕೋವಿಡ್-19 ಲಸಿಕಾ ವಿತರಣೆಗೆ ದಿನಗಣನೆ : ಅದರ ಪ್ರಕ್ರಿಯೆ ಕುರಿತ ಯೋಜನೆ ಹೀಗಿದೆ..
ಕೇಂದ್ರ ಸರ್ಕಾರ ಪ್ರತಿ ಲಸಿಕೆಗೆ 200 ರೂಪಾಯಿ ದರ ನಿಗದಿಪಡಿಸಿದೆ. ಎರಡು ದಿನಗಳಿಂದ ಸೆರೆಮ್ ಸಂಸ್ಥೆಯ ಹೊರಗೆ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಇಂದು ಸಂಜೆ ಅಥವಾ ನಾಳೆ ಲಸಿಕೆ ತುಂಬಿರುವ ಕಂಟೇನರ್ಗಳನ್ನು ರಸ್ತೆಗೆ ಇಳಿಸಲಿದ್ದೇವೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಕಾರ್ಯಕ್ರಮಗಳ ಸಿದ್ಧತೆ ಪರಿಶೀಲನೆ ಕುರಿತು ಇಂದು ಪ್ರಧಾನಿ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್ಲೈನ್ ಮೂಲಕ ಸಭೆ ನಡಸಿದರು. ಇದೇ 16ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಹಿರಿಯರಿಗೆ ಲಸಿಕೆ ನೀಡುವ ನಿರೀಕ್ಷೆಯಿದೆ.