ಕರ್ನಾಟಕ

karnataka

ETV Bharat / bharat

ಲಾಕ್​​​​​​​ಡೌನ್ ವೇಳೆ ಅಗತ್ಯ ವಸ್ತುಗಳಿಗೆ ಗ್ರಾಹಕರು ಪಾವತಿಸಿರುವ ಹಣ ಎಷ್ಟು, ಕಾರಣ....?

ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ ಅಗತ್ಯ ವಸ್ತುಗಳನ್ನು ಖರೀದಿಸಿದ ಅನುಭವದ ಬಗ್ಗೆ ಗ್ರಾಹಕರ ನಾಡಿಮಿಡಿತವನ್ನು ತಿಳಿಯಲು ಸ್ಥಳೀಯ ವಲಯಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಯಿತು. ಸಮೀಕ್ಷೆ ಭಾರತದ 210 ಜಿಲ್ಲೆಗಳಲ್ಲಿನ 16,500ಕ್ಕೂ ಹೆಚ್ಚು ಗ್ರಾಹಕರ ಮತಗಳನ್ನು ಒಳಗೊಂಡಿದೆ. ಈ ಸಂಬಂಧ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ.

consumers paid more for packaged food and groceries during lockdown
ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳಿಗೆ ಗ್ರಾಹಕರು ಪಾವತಿಸಿರುವ ಹಣ ಎಷ್ಟು, ಕಾರಣ....?

By

Published : Jun 5, 2020, 12:51 PM IST

ನವದೆಹಲಿ:ಲಾಕ್‌ಡೌನ್ ಸಮಯದಲ್ಲಿ ಹಲವಾರು ಗ್ರಾಹಕರು ಅನೇಕ ಅಗತ್ಯ ವಸ್ತುಗಳಿಗೆ ಮತ್ತು ಕಿರಾಣಿ ಉತ್ಪನ್ನಗಳಿಗೆ ಹೆಚ್ಚಿನ ಹಣ ಪಾವತಿಸಿ ಕೊಂಡುಕೊಂಡಿರುವುದು ತಿಳಿದುಬಂದಿದೆ. ಇದಕ್ಕೆ ಮುಖ್ಯ ಕಾರಣ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ವಸ್ತುಗಳ ಮೇಲಿನ ರಿಯಾಯಿತಿ ಕಡಿಮೆ ಮಾಡಿರುವುದು ಮತ್ತು ಕೆಲವರು ವಸ್ತುವಿನ ಮೇಲಿನ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ಪಡೆದಿರುವುದು ಎನ್ನಲಾಗಿದೆ.

ಲಾಕ್‌ಡೌನ್ ಸಮಯದಲ್ಲಿ ಮತ್ತು ನಂತರ ಅಗತ್ಯ ವಸ್ತುಗಳನ್ನು ಖರೀದಿಸಿದ ಅನುಭವದ ಬಗ್ಗೆ ಗ್ರಾಹಕರ ನಾಡಿಮಿಡಿತ ತಿಳಿಯಲು 'ಲೋಕಲ್​ ಸರ್ಕಲ್ಸ್'​ ಸಮೀಕ್ಷೆ ಕೈಗೊಂಡಿತ್ತು. ಈ ಸಮೀಕ್ಷೆಯು ಭಾರತದ 210 ಜಿಲ್ಲೆಗಳಲ್ಲಿನ 16,500ಕ್ಕೂ ಹೆಚ್ಚು ಗ್ರಾಹಕರ ಮತಗಳನ್ನು ಒಳಗೊಂಡಿದೆ.

ಪೂರ್ವ - ಲಾಕ್‌ಡೌನ್‌ಗೆ ಹೋಲಿಸಿದರೆ ಲಾಕ್‌ಡೌನ್ 1.0 ರಿಂದ 4.0 ರವರೆಗೆ ವ್ಯಾಪಾರಸ್ಥರು ಗ್ರಾಹಕರಿಂದ ಅನೇಕ ಅಗತ್ಯ ಮತ್ತು ಕಿರಾಣಿ ಉತ್ಪನ್ನಗಳಿಗೆ ಹೆಚ್ಚಿನ ಹಣವನ್ನು ಪಡೆದಿದ್ದಾರೆ ಎಂಬುದು ಹಲವಾರು ಗ್ರಾಹಕರ ಅಭಿಪ್ರಾಯವಾಗಿದೆ. ಹಾಗೇ ಈ ನೆಲೆ ಹೆಚ್ಚಳ ಉತ್ಪಾದಕರಿಂದಾಗಿರುವುದಲ್ಲ ಬದಲಿಗೆ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರು ರಿಯಾಯಿತಿ ಕಡಿಮೆಗೊಳಿಸಿದ್ದರಿಂದ ಮತ್ತು ಕೆಲವರು ಗ್ರಾಹಕರಿಗೆ ಪ್ರತಿ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಿರುವುದರಿಂದ ಎಂಬ ಅನಿಸಿಕೆಗಳು ಹೊರ ಬಿದ್ದಿವೆ.

ಲಾಕ್‌ಡೌನ್ 1.0-4.0 ರ ಸಮಯದಲ್ಲಿ ಸುಮಾರು 72 ಶೇಕಡಾ ಗ್ರಾಹಕರು ಪ್ಯಾಕೇಜ್ ಮಾಡಿದ ಆಹಾರ ಮತ್ತು ದಿನಸಿಗಾಗಿ ಹೆಚ್ಚಿನ ಹಣ ಪಾವತಿಸಿದ್ದಾರೆ. ಕಡಿಮೆ ರಿಯಾಯಿತಿ ಮತ್ತು ಎಂಆರ್‌ಪಿ ಮೇಲೆ ಶುಲ್ಕ ವಿಧಿಸುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಹಿಂದಿನ ಲೋಕಲ್​ ಸರ್ಕಲ್ಸ್​ ಸಮೀಕ್ಷೆಯಲ್ಲಿ, ಶೇಕಡಾ 39ರಷ್ಟು ಗ್ರಾಹಕರು ಲಾಕ್‌ಡೌನ್ ಸಮಯದಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ಹೇಳಿದ್ದರು. ಹಾಗೇ 21 ಪ್ರತಿಶತದಷ್ಟು ಜನರು ಆನ್‌ಲೈನ್ ಮಾರಾಟಗಾರರಿಂದ ಎಂಆರ್‌ಪಿಗಿಂತ ಹೆಚ್ಚಿನ ಶುಲ್ಕ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಸ್ಥಳೀಯ ಚಿಲ್ಲರೆ ಅಂಗಡಿಗಳಿಗೆ ಹೋಲಿಸಿದರೆ ಇ-ಕಾಮರ್ಸ್ ಅಪ್ಲಿಕೇಷನ್‌ಗಳಲ್ಲಿ ಎಂಆರ್‌ಪಿ ಅನುಸರಣೆ ಉತ್ತಮವಾಗಿದೆ ಎಂದು ಗ್ರಾಹಕರ ಅನಿಸಿಕೆ ಮೆರೆಗಿನ ಸಮೀಕ್ಷೆ ಸೂಚಿಸಿದೆ.

ಸದ್ಯ ಲಾಕ್‌ಡೌನ್ ಅನ್ನು ಸಡಿಲಗೊಳಿಸಲಾಗಿದೆ, ಈಗಲೂ ಅವರು ಮತ್ತು ಅವರ ಕುಟುಂಬ ಪ್ಯಾಕೇಜ್ ಮಾಡಲಾದ ಹೆಚ್ಚಿನ ಆಹಾರ ಮತ್ತು ದಿನಸಿ ವಸ್ತುಗಳನ್ನ ಖರೀದಿಸುತ್ತಿದೆಯೇ ಎಂದು ಗ್ರಾಹಕರನ್ನು ಕೇಳಲಾಯಿತು. ಅದಕ್ಕೆ ಶೇಕಡಾ 17 ರಷ್ಟು ಜನರು ತಾವು ಇ-ಕಾಮರ್ಸ್ / ಇ-ಗ್ರಾಸರಿ ಅಪ್ಲಿಕೇಶನ್‌ಗಳ ಮೂಲಕ ಖರೀದಿಸುತ್ತಿದ್ದೇವೆ ಎಂದು ಹೇಳಿದರೆ, ಶೇ 8ರಷ್ಟು ಜನರು ಕರೆ ಮೂಲಕ ಅಥವಾ ವಾಟ್ಸ್​​ಆ್ಯಪ್​​ ರಿಟೈಲ್ಸ್​​​​​​ ಅಂಗಡಿಗಳ ಸಹಾಯದಿಂದ ಮನೆ ಬಾಗಿಲಿಗೆ ವಸ್ತುಗಳು ತಲುಪುವಂತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು. ಶೇಕಡಾ 19 ರಷ್ಟು ಜನರು ವಸಾಹತು / ಪ್ರದೇಶದ ನೆರೆಹೊರೆಯ ಅಂಗಡಿಯ ಮೂಲಕ ಆರ್ಡರ್​ ಮಾಡಿ ಪಡೆಯುವುದಾಗಿ ತಿಳಿಸಿದರು. ಇನ್ನೂ ಹೆಚ್ಚು ಮಂದಿ ಅಂದರೆ ಶೇ. 53ರಷ್ಟು ಸ್ಥಳೀಯರು ಚಿಲ್ಲರೆ ಅಂಗಡಿಗಳಿಂದ ಅಥವಾ ಮಾರುಕಟ್ಟೆಯಿಂದ ಖರೀದಿಸುತ್ತಿದ್ದಾರೆ ಎಂದು ಹೇಳಿದರು.

ಇದರರ್ಥ ಲಾಕ್‌ಡೌನ್ ಸಡಿಲಿಕೆ ನಂತರವೂ ಶೇಕಡಾ 28 ರಷ್ಟು ಗ್ರಾಹಕರು ಇನ್ನು ಪ್ಯಾಕೇಜ್ ಮಾಡಿದ ಆಹಾರ ಮತ್ತು ದಿನಸಿ ವಸ್ತುಗಳನ್ನು ತಮ್ಮ ಮನೆ ಬಾಗಿಲಿಗೆ ಪಡೆಯುತ್ತಿದ್ದಾರೆ. ಅನಗತ್ಯವಾಗಿ ಮನೆಗಳಿಂದ ಹೊರಹೋಗದೆ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಕೊರೊನಾ ವೈರಸ್ ಸೋಂಕಿನಿಂದ ಸುರಕ್ಷಿತವಾಗಿರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಪ್ರಾಥಮಿಕ ಕಾರಣ ಎಂದು ತೋರುತ್ತಿದೆ.

ABOUT THE AUTHOR

...view details