ಕರ್ನಾಟಕ

karnataka

ETV Bharat / bharat

ಸಮಾಜದ ಎಲ್ಲ ವರ್ಗಗಳ ನಡುವೆ ಪಕ್ಷದ ಸ್ಥಾನ ಗಟ್ಟಿಗೊಳಿಸಿ: ಶಾಸಕ,ಸಂಸದರಿಗೆ ಜೆ.ಪಿ ನಡ್ಡಾ ಕರೆ

ಉತ್ತರ ಪ್ರದೇಶದಲ್ಲಿ ಪಕ್ಷದ ಸಂಸದರು, ಶಾಸಕರೊಂದಿಗೆ ಸಭೆ ನಡೆಸಿದ ಜೆಪಿ ನಡ್ಡಾ, ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವುದರಿಂದ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

BJP president J P Nadda
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ

By

Published : Jan 23, 2021, 12:15 PM IST

ಲಖನೌ: ಶುಕ್ರವಾರ ಉತ್ತರಪ್ರದೇಶದ ಲಖನೌಗೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಪಕ್ಷದ ಸಂಸದರು, ಶಾಸಕರೊಂದಿಗೆ ಸಭೆ ನಡೆಸಿ, ಸಮಾಜದ ಎಲ್ಲ ವರ್ಗಗಳ ನಡುವೆ ಪಕ್ಷದ ಸ್ಥಾನ ಗಟ್ಟಿಗೊಳಿಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ, ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವುದರಿಂದ, ಅಭ್ಯರ್ಥಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡದಂತೆ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಮಾತನಾಡಿದ ಅವರು, "ಪಕ್ಷದ ಕಾರ್ಯಕರ್ತರು ಜನರನ್ನು ತಲುಪಬೇಕು ಮತ್ತು ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮಾಜದ ಎಲ್ಲ ವರ್ಗದವರಿಗೆ ತಿಳಿಸಬೇಕು. ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರವು ಪ್ರಾರಂಭಿಸಿದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು." ಎಂದಿದ್ದಾರೆ

"ಮುಂಬರುವ ಪಂಚಾಯತ್ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗೆ ಪಕ್ಷ ಸಜ್ಜಾಗುತ್ತಿರುವುದರಿಂದ, ವಿಭಾಗೀಯ ಕಾರ್ಯಕರ್ತರು ಪ್ರತಿ ತಿಂಗಳು ನಿಯೋಜಿತ ಬೂತ್‌ಗಳಿಗೆ ಭೇಟಿ ನೀಡಬೇಕು ಮತ್ತು ಬೂತ್ ಸಮಿತಿಗಳೊಂದಿಗೆ ಸಭೆ ನಡೆಸಿ ಅವರೊಂದಿಗೆ ಭೋಜನ ಮಾಡಬೇಕು" ಎಂದು ನಡ್ಡಾ ಹೇಳಿದ್ದಾರೆ.

"ಬಿಜೆಪಿ ಮಾತ್ರ ಪ್ರಜಾಪ್ರಭುತ್ವ ರಚನೆ ಹೊಂದಿದೆ, ಅದು ತಳಮಟ್ಟದ ಕಾರ್ಮಿಕರನ್ನು ಮೇಲಕ್ಕೆ ಏರಲು ಅನುವು ಮಾಡಿಕೊಡುತ್ತದೆ. ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕ ಪ್ರತಿನಿಧಿಗಳು ಸಾಮಾನ್ಯ ಜನರ ಮೇಲೆ ನಂಬಿಕೆ ಹೊಂದಿರಬೇಕು. ಪಕ್ಷದ ಶಾಸಕರು, ಸಂಸದರು ಮತ್ತು ಅಧಿಕಾರಿಗಳು ಪಕ್ಷದ ಸಿದ್ಧಾಂತಗಳೊಂದಿಗೆ ಕೆಲಸ ಮಾಡಬೇಕು ಅವರ ಚಿತ್ರಣ ಮತ್ತು ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆಯಾಗುವುದಿಲ್ಲ "ಎಂದು ಹೇಳಿದ್ದಾರೆ.

ABOUT THE AUTHOR

...view details