ನವದೆಹಲಿ:ಅಸ್ಸೋಂನ ಮಾಜಿ ಮುಖ್ಯಮಂತ್ರಿ ದಿ.ತರುಣ್ ಗೊಗೊಯ್ ಮತ್ತು ಸಂಸದ ದಿ.ಅಹ್ಮದ್ ಪಟೇಲ್ ಇತ್ತೀಚಿಗೆ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರಿಗೆ ಸಂತಾಪ ಸೂಚಕ ಸಭೆಯನ್ನು ನಡೆಸಲು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ನ. 27ರಂದು ನಿರ್ಧರಿಸಿದೆ.
ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಇದಕ್ಕಾಗಿ ಎಲ್ಲಾ ಸಿಡಬ್ಲ್ಯೂಸಿ ಸದಸ್ಯರು, ಕಾಯಂ ಆಹ್ವಾನಿತರು ಮತ್ತು ವಿಶೇಷ ಆಹ್ವಾನಿತರು ಹಾಜರಾಗುವಂತೆ ಕೋರಲಾಗಿದೆ.
ಕಾಂಗ್ರೆಸ್ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಳುಹಿಸಿದ ಅಧಿಕೃತ ನೋಟಿಸ್ನಲ್ಲಿ, “ಅಹ್ಮದ್ ಪಟೇಲ್ ಮತ್ತು ತರುಣ್ ಗೊಗೊಯ್ ಅವರ ನಿಧನದಿಂದ ದುಃಖವಾಗಿದೆ, ಇನ್ನು ಗಣ್ಯರಿಗೆ ಸಂತಾಪ ಸೂಚಕ ಸಭೆಯನ್ನು ನವೆಂಬರ್ 27ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಿದ್ದೇವೆ" ಎಂದಿದ್ದಾರೆ.
ನವೆಂಬರ್ 22ರಂದು ಅಸ್ಸೋಂನ ಮಾಜಿ ಮುಖ್ಯಮಂತ್ರಿ ದಿ.ತರುಣ್ ಗೊಗೊಯ್ ಅವರು ಬಹು ಅಂಗಾಗ ವೈಫಲ್ಯದಿಂದ ಸಾವನ್ನಪ್ಪಿದ್ದರು. ಇನ್ನು ಅಹ್ಮದ್ ಪಟೇಲ್ ಅವರು ಕೊರೊನಾಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ.