ನವದೆಹಲಿ: ಸೋಮವಾರ ನಡೆಯಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರ ವಿಚಾರವನ್ನು ಎತ್ತಲು ರಾಷ್ಟ್ರೀಯ ಕಾಂಗ್ರೆಸ್ ಮುಂದಾಗಿದೆ.
ಸಂಸತ್ನಲ್ಲಿ ದೆಹಲಿ ಹಿಂಸಾಚಾರ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ಸಜ್ಜು - ದೆಹಲಿ ಹಿಂಸಾಚಾರ
ಸೋಮವಾರ ನಡೆಯಲಿರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ದೆಹಲಿ ಹಿಂಸಾಚಾರ ವಿಚಾರವನ್ನ ಪ್ರಸ್ತಾಪಿಸಿ, ದೆಹಲಿ ಹಾಗೂ ಕೇಂದ್ರ ಸರ್ಕಾರವನ್ನ ಕಾಂಗ್ರೆಸ್ ತರಾಟೆಗೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ
ಇಂದು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷದ ನಾಯಕರಾದ ಗುಲಾಬ್ ನಬಿ ಆಜಾದ್, ಜೈರಾಮ್ ರಮೇಶ್, ಎ ಕೆ ಆಂಟೋನಿ, ಅಹ್ಮದ್ ಪಟೇಲ್, ಆನಂದ್ ಶರ್ಮಾ ಹಾಗೂ ಗೌರವ್ ಗೋಗಿ ಪಾಲ್ಗೊಂಡಿದ್ದರು.
42 ಜನರ ಬಲಿ ಪಡೆದು, ಸುಮಾರು 200 ಮಂದಿ ಗಾಯಗೊಳ್ಳಲು ಕಾರಣವಾದ ದೆಹಲಿ ಹಿಂಸಾಚಾರ ವಿಚಾರವನ್ನ ಪ್ರಸ್ತಾಪಿಸಿ, ದೆಹಲಿ ಹಾಗೂ ಕೇಂದ್ರ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.