ನವದೆಹಲಿ:ಪ್ರಸ್ತುತ ದೇಶದ ಆರ್ಥಿಕ ಸ್ಥಿತಿಗತಿ ವಿಚಾರವಾಗಿ ದೇಶಾದ್ಯಂತ ಇದೇ ನವೆಂಬರ್ ತಿಂಗಳಲ್ಲಿ ಸತತ ಪತ್ರಿಕಾಗೋಷ್ಟಿ ಹಾಗೂ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ನವೆಂಬರ್ 1ರಿಂದ 8ರವರೆಗೆ 35 ಸುದ್ದಿಗೋಷ್ಟಿ ಹಾಗೂ 5 ರಿಂದ 15ರವರೆಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಕಾಂಗ್ರೆಸ್ ನಡೆಸಲಿದೆ. ಈ ಬಗ್ಗೆ ಎಐಸಿಸಿ ಸಾಮಾನ್ಯ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅಕ್ಟೋಬರ್ 23ರಂದು ಹೇಳಿಕೆ ನೀಡಿದ್ದರು. ಪ್ರತಿಭಟನೆಗಳನ್ನು ವಿವಿಧ ಜಿಲ್ಲೆಗಳು ಹಾಗೂ ರಾಜ್ಯ ರಾಜಧಾನಿಗಳಲ್ಲಿ ನಡೆಸಲಾಗುತ್ತದೆ. ಅಲ್ಲದೆ ರಾಷ್ಟ್ರ ರಾಜಧಾನಿಯಲ್ಲಿ ಒಂದು ಬೃಹತ್ ಕಾರ್ಯಕ್ರಮದ ರೂಪದಲ್ಲಿ ಇದನ್ನು ನಡೆಸಲಾಗುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.