ನವದೆಹಲಿ:ದೇಶದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. ಇದರ ಮಧ್ಯೆ ವಿವಿಧ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಜನಸಾಮಾನ್ಯರಿಗೆ ತಲುಪಲು ಟಿವಿ ಲೈವ್ ಶೋದಲ್ಲೂ ಭಾಗಿಯಾಗುತ್ತಿದ್ದಾರೆ.
ಟಿವಿ ಲೈವ್‌ನಲ್ಲೇ ಬಿಜೆಪಿ ವಕ್ತಾರನ ಮೇಲೆ ನೀರು ಎರಚಲು ಯತ್ನಿಸಿದ 'ಕೈ' ಮುಖಂಡ.. - ಕಾಂಗ್ರೆಸ್ ಮುಖಂಡ
ಟಿವಿ ಲೈವ್ ಕಾರ್ಯಕ್ರಮದ ವೇಳೆ ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ನೇರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ ವಕ್ತಾರ ಗ್ಲಾಸ್ನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ.
ಟಿವಿ ಚಾನಲ್ವೊಂದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಭಾಗಿಯಾಗಿ ತಮ್ಮ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದರು. ವಾದ ವಾಗ್ವಾದವಾಗಿದ್ರಿಂದ ತಾಳ್ಮೆ ಕಳೆದುಕೊಂಡ ಕಾಂಗ್ರೆಸ್ನ ಅಲೋಕ್ ಶರ್ಮಾ, ಏಕಾಏಕಿ ಬಿಜೆಪಿ ಮುಖಂಡನ ಮೇಲೆ ಕುಡಿಯಲಿಟ್ಟಿದ್ದ ನೀರನ್ನೇ ಎರಚಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲ, ಪರಸ್ಪರರುಅಸಭ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆ ಕೆಲ ಹೊತ್ತು ಇಬ್ಬರ ನಡುವೆ ಜಗಳ ಕೂಡ ಆಗಿದೆ.
ಈ ವೇಳೆ ಪರಸ್ಪರರು ಕ್ಷಮೆಯಾಚನೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅದಕ್ಕೆ ಇಬ್ಬರು ಒಪ್ಪಿಕೊಂಡಿಲ್ಲ. ಈ ವಿಡಿಯೋ ಸಂಪೂರ್ಣವಾಗಿ ಲೈವ್ ಪ್ರಸಾರವಾಗಿದೆ.