ಕರ್ನಾಟಕ

karnataka

ETV Bharat / bharat

ಗುಜರಾತ್​ನಲ್ಲಿ 2ನೇ ರಾಜ್ಯಸಭೆ ಸ್ಥಾನ ಗೆಲ್ಲಲು ಒಂದು ಮತ ಬೇಕು ಎಂದ ಕಾಂಗ್ರೆಸ್! - ರಾಜ್ಯಸಭೆ ಚುನಾವಣೆ ಲೇಟೆಸ್ಟ್ ನ್ಯೂಸ್

ಗುಜರಾತ್‌ನಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಎರಡನೇ ಸ್ಥಾನ ಗೆಲ್ಲಲು ಇನ್ನೂ ಒಂದು ಮತ ಬೇಕು ಎಂದು ಕಾಂಗ್ರೆಸ್ ಹೇಳಿದೆ.

Congress says needs one more vote in Gujarat for 2nd RS seat
2ನೇ ರಾಜ್ಯಸಭೆ ಸ್ಥಾನ ಗೆಲ್ಲಲು ಒಂದು ಮತ ಬೇಕು ಎಂದ ಕಾಂಗ್ರೆಸ್

By

Published : Jun 7, 2020, 6:23 PM IST

ನವದೆಹಲಿ:ರಾಜ್ಯಸಭೆ ಚುನಾವಣೆಗೆ ಮುನ್ನ ಗುಜರಾತ್‌ನಲ್ಲಿ ಕೆಲವು ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಎರಡನೇ ಸ್ಥಾನವನ್ನು ಗೆಲ್ಲಲು ಇನ್ನೂ ಒಂದು ಮತ ಬೇಕು ಎಂದು ಕಾಂಗ್ರೆಸ್ ಹೇಳಿದೆ.

ಎರಡನೇ ಸ್ಥಾನವನ್ನು ಗೆಲ್ಲಲು ನಮಗೆ ಇನ್ನೂ ಒಂದು ಮತ ಬೇಕು. 2 ಸ್ಥಾನಗಳನ್ನು ಗೆಲ್ಲುವುದು ನಮ್ಮ ಕಾರ್ಯತಂತ್ರದ ಭಾಗವಾಗಿರುವುದರಿಂದ ನಾವು ಇಲ್ಲಿ ಸಂಖ್ಯೆಗಳನ್ನು ಚರ್ಚಿಸಲು ಹೋಗುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸತವ್ ಹೇಳಿದ್ದಾರೆ.

2017 ರಲ್ಲಿ ರಾಜ್ಯಸಭಾ ಸ್ಥಾನವನ್ನು ಗೆದ್ದ ಅಹ್ಮದ್ ಪಟೇಲ್ ಅವರ ಪ್ರಕರಣವನ್ನು ಉಲ್ಲೇಖಿಸಿ, 'ನಾವು ಸಹ ಸಂಖ್ಯೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ, ಸುಮ್ಮನೆ ಕುಳಿತುಕೊಳ್ಳುವುದಿಲ್ಲ' ಎಂದಿದ್ದಾರೆ.

2018ರ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ 77 ವಿಧಾನಸಭಾ ಸ್ಥಾನಗಳನ್ನು ಗೆದ್ದಿತ್ತು. ಆದರೆ ಪಕ್ಷದ ಬಲ 65ಕ್ಕೆ ಇಳಿದಿದೆ. ಕೆಲ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ರೆಸಾರ್ಟ್​ಗೆ ಶಿಫ್ಟ್ ಮಾಡಿದೆ.

ಗುಜರಾತ್‌ನಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್​ನ ಶಕ್ತಿ ಸಿಂಗ್ ಗೋಹಿಲ್ ಮತ್ತು ಭಾರತ್ ಸಿಂಗ್ ಸೋಲಂಕಿ ಅವರನ್ನು ಕಣಕ್ಕಿಳಿಸಿದೆ. ಮೊದಲ ಆದ್ಯತೆಯ ಮತಗಳು ಗೋಹಿಲ್‌ಗೆ ಸಿಗಲಿವೆ. ಆದರೆ ಎರಡನೇ ಸ್ಥಾನಕ್ಕೆ ಬಿಜೆಪಿ ಕೂಡ ನರ್ಹಾರಿ ಅಮೀನ್ ಅವರನ್ನು ಕಣಕ್ಕಿಳಿಸಿದೆ.

ABOUT THE AUTHOR

...view details